Breaking News

ತೆಂಡೂಲ್ಕರ್ ಚಹಾ ಕುಡಿದು ಹೋದ್ಮೇಲೆ, ವ್ಯಾಪಾರ ಡಬಲ್ ಆಗಿದೆ…..!!!!

ಬೆಳಗಾವಿ- ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಬೆಳಗಾವಿಯ ಮಜಗಾವಿಯಲ್ಲಿ ಗೋವಾ ರಸ್ತೆಯ ಪಕ್ಕದಲ್ಲೇ ಇರುವ ಗೂಡಂಗಡಿಯಲ್ಲಿ ಚಹಾ ಕುಡಿದು ಹೋದ ಮೇಲೆ ಈ ಅಂಗಡಿಯ ವ್ಯಾಪಾರವೂ ದುಪ್ಪಟ್ಟಾಗಿದೆ.

ಸಚಿನ್ ತೆಂಡೂಲ್ಕರ್ ಅವರು ಕುಟುಂಬ ಸಮೇತ ಕೊಲ್ಹಾಪೂರದ ನರಸಿಂಹವಾಡಿಗೆ ಹೋಗಿದ್ರುಅಲ್ಲಿಂದ ಅವರು ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ ಹೋಗುವಾಗ ಬೆಳಗ್ಗೆ 8-00 ಗಂಟೆ ಸುಮಾರಿಗೆ ಮಜಗಾವಿಯ ಗೂಡಂಗಡಿಯಲ್ಲಿ ಚಹಾ ಸವಿದು ಎಂಜಾಯ್ ಮಾಡಿದ್ಸರು.ಅವರು ಈ ಅಂಗಡಿಯಲ್ಲಿ ಡಬಲ್ ಚಹಾ ಕುಡಿದು ಹೋದ ಮೇಲೆ ಈ ಚಹಾ ಅಂಗಡಿ ಈಗ ಎಲ್ಲರನ್ನು ಆಕರ್ಷಿಸುತ್ತಿದೆ.

ಸಚಿನ ಚಹಾ ಕುಡಿದು 170 ರೂ ಬಿಲ್ ಕೊಟ್ಟು ಹೋದ್ರು,ಬಿಲ್ ಬೇಡ ಅಂದ್ರೂ ನಿನ್ನದು ಫಾಯಿಸ್ಟಾರ್ ಹೊಟೇಲ್ ಅಲ್ಲ,ನೀನು ಟಪರಿಯಲ್ಲಿ ಅಂದ್ರೆ ಗೂಡಂಗಡಿಯಲ್ಲಿ ಚಹಾ ವ್ಯಾಪಾರ ಮಾಡ್ತಾ ಇದ್ದೀಯಾ ಅಂತಾ ಹೇಳಿ 200 ₹ ನೋಟು ಕೊಟ್ರು, ಎಂದು ಈ ಚಹಾ ಅಂಗಡಿ ಮಾಲೀಕ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ತಿಳಿಸಿದ್ದಾನೆ.

ಸಚಿನ್ ಕೊಟ್ಟ 200 ₹ ನೋಟಿನ ಮೇಲೆ ತಂಡೊಲ್ಕರ್ ಅವರ ಅಟೋಗ್ರಾಫ್ ಪಡೆದಿದ್ದೇನೆ.ಈ ನೋಟಿಗೆ ಪ್ರೇಮ್ ಹಾಕಿಸಲು ಕೊಟ್ಟಿದ್ದೇನೆ,ನನ್ನ ಅಂಗಡಿಯಲ್ಲಿ ಸಚಿನ್ ಚಹಾ ಕುಡಿದಿದ್ದು ನನ್ನ ಭಾಗ್ಯ.ಸಚಿನ್ ಬಂದು ಹೋದ ಮೇಲೆ ಬೆಳಗಾವಿಯಿಂದ ಸಚಿನ್ ಅಭಿಮಾನಿಗಳು ನನ್ನ ಅಂಗಡಿಗೆ ಬರ್ತಾರೆ. ಸಚಿನ ಭೇಟಿ ನೀಡಿದ ಆ ಕ್ಷಣಗಳ ಬಗ್ಗೆ ಮಾತನಾಡಿಸುತ್ತಾರೆ.ಈಗ ನನ್ನ ವ್ಯಾಪಾರವೂ ಡಬಲ್ ಆಗಿದೆ ಅಂತಾರೆ ಈ ಚಹಾ ಅಂಗಡಿ ಮಾಲೀಕ.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.