ಬೆಳಗಾವಿ- ಖಾನಾಪೂರ ಪೋಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ಚಿನ್ನ ಕಳ್ಳತನ ಮಾಡಿದವನನ್ನು,ಜೊತೆಗೆ ಕಳವು ಮಾಡಿದ ಚಿನ್ನವನ್ನು ಖರೀಧಿ ಮಾಡಿದ ಜ್ಯುವಲರಿ ವ್ಯಾಪಾರಿ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ.
ಚಿನ್ನದ ಆಭರಣ ಕದ್ದು ಅದನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ ಅವನ ಬಳಿಯಿದ್ದ 26,5300 ಮೌಲ್ಯದ ಚಿನ್ನಾಭರಣಗಳು ವಶಪಡಿಸಿಕೊಂಡಿದ್ದಾರೆ
ಕಳ್ಳತನ ಆರೋಪಿಗೆ ಸಹಾಯ ಮಾಡಿದ್ದ ಕಳುವಾದ ಚಿನ್ನವನ್ನು ಖರೀಧಿ ಮಾಡಿದ್ದ ಜ್ಯುವೆಲರಿ ಶಾಪ್ ಮಾಲೀಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಳಗಾವಿಯ ವಡಗಾಂವ ಗಲ್ಲಿಯ ಗುದೇವ ನಿವಾಸಿ ಪರಶುರಾಮ ದಂಡಗಲ್ಲ ಬಂಧಿತ ಆರೋಪಿ. ಈತನಿಗೆ ಸಹಾಯ ಮಾಡಿದ ಆರೋಪದ ಮೇಲೆ ಖಾಸಬಾಗನ ಶ್ರೀ ಸಾಯಿನಾಥ್ ಜ್ಯುವೆಲರಿ ಮಾಲೀಕ ವಿನಯ ಅನ್ವೇಕರ ಅವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾರ್ಥಮಿಕ ತನಿಖೆಯಲ್ಲಿ ಗೊತ್ತಾಗುತ್ತದೆ. ಹೀಗಾಗಿ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಸುರೇಶ ಪಿ.ಶಿಂಗಿ ನೇತೃತ್ವದಲ್ಲಿ ತಮ್ಮ ಪೊಲೀಸ್ ಸಿಬ್ಬಂದಿಗಳೊಂದಿಗೆ ಕಾರ್ಯಚರಣೆ ನಡೆಸಲಾಗುತ್ತದೆ. ಆಗ ಕಳ್ಳತನಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡದುಕೊಳ್ಳಲಾಗಿದೆ.ಇದರ ಜೊತೆಗೆ ಕಳ್ಳತನ ಮಾಡಿದ ಎಲ್ಲ ಚಿನ್ನಾಭರಣಗಳನ್ನು ಬಂಗಾರದ ಅಂಗಡಿ ಮಾಲೀಕ ವಿನಯ ಎಂಬುವವರಿಗೆ ನೀಡಿರುತ್ತಾನೆ. ಆತನ ತಾಬಾದಲ್ಲಿದ್ದ 79 ಗ್ರಾಮ ಬಂಗಾರ ಹಾಗೂ 135 ಗ್ರಾಮ ಬೆಳ್ಳಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದು.ಕಳ್ಳತನ ಆರೋಪಿಗೆ ಸಹಾಯ ಮಾಡಿದ ಆರೋಪದ ಮೇಲೆ ಆತನನ್ನೂ ಬಂಧಿಸಲಾಗಿದೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.