ಬೆಳಗಾವಿ- ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ ಆದರೆ ಬೆಳಗಾವಿ ನಗರ ಹಾಗು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳು ತಾವು ಸ್ಪರ್ದೆ ಮಾಡುವ ಕ್ಷೇತ್ರಗಳನ್ನು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ
ಲಖನ್ ಜಾರಕಿಹೊಳಿ ಯಮಕನಮರ್ಡಿ ಕ್ಷೇತ್ರದಿಂದ ಸತೀಶ ಜಾರಕಿಹೊಳಿ ಅವರು ರಾಯಚೂರು ಗ್ರಾಮೀಣ ಮೀಸಲು ಕ್ಷೇತ್ರದಿಂದ ಸ್ಪರ್ದೆ ಮಾಡುತ್ತಾರೆ ಎಂದು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಘೋಷಣೆ ಮಾಡಿದ ಬೆನ್ನಲ್ಲಿಯೇ ಎಂಈಎಸ್ ನಾಯಕ ಮಾಜಿ ಮಹಾಪೌರ ಕಿರಣ ಸೈನಾಯಕ ತಾವು ಬೆಳಗಾವಿ ಉತ್ತರ ಮತಕ್ಷೇತ್ರದ ಕ್ಯಾಂಡಿಡೇಟ್ ಎಂದು ಘೋಷಣೆ ಮಾಡಿಕೊಂಡಿದ್ದಾರೆ
ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಅವರು ಈ ಬಾರಿಯ ವಿಧಾನಸಭೆ ಚುನಾವಣೆ ಯಲ್ಲಿ ನಾನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಆಕಾಂಕ್ಷಿ ಅಲ್ಲ ನಾನು ಉತ್ತರ ಮತಕ್ಷೇತ್ರದ ಎಂಈಎಸ್ ಕ್ಯಾಂಡಿಡೇಟ್ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮಂಡಿಸಿದ್ದಾರೆ
ಕಿರಣ ಸೈನಾಯಕ್ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಕಟ್ಟಾ ಶಿಷ್ಯ ಹೀಗಾಗಿ ಇವರು ಬೆಳಗಾವಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ ಕಿರಣ ಸೈನಾಯಕ ಸತೀಶ ಜಾರಕಿಹೊಳಿ ಅವರ ಗರಡಿಯ ಮೂಲಕ ಹಲವಾರು ಜನ ಉರ್ದು ಭಾಷಿಕ ನಗರ ಸೇವಕರ ಜೊತೆ ಸ್ನೇಹ ಬೆಳೆಸಿಕೊಂಡಿದ್ದು ಕಿರಣ ಸೈನಾಯಕ ಬೆಳಗಾವಿ ಉತ್ತರ ಮತ್ಕ್ಷೇತ್ರದ ಪ್ರಶ್ನೆಗಳಿಗೆ ಈಗಿನಿಂದಲೇ ಉತ್ತರ ಹುಡುಕಲು ಶುರು ಮಾಡಿದ್ದಾರೆ
ಶಾಸಕ ಫಿರೋಜ್ ಸೇಠ ಅವರು ಸತೀಶ ಜಾರಕಿಹೊಳಿ ಅವರ ಪರಮಾಪ್ತ ಕಿರಣ ಸೈನಾಯಕ ಸತೀಶ ಜಾರಕಿಹೊಳಿ ಅವರ ಕಟ್ಟಾ ಶಿಷ್ಯ ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸತೀಶ ಜಾರಕಿಹೊಳಿ ಯಾರಿಗೆ ಕೈ ಕೊಟ್ಟು ಯಾರ ಕೈ ಹಿಡಿಯುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ