ಬೆಳಗಾವಿ-ಕಿತ್ತೂರು, ವೀರರಾಣಿ ಚನ್ನಮ್ಮನ ಕ್ರಾಂತಿಯ ನೆಲ,ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲಿ, ವೀರಮಾತೆಯ ಹೋರಾಟದಿಂದಾಗಿ ಈ ಕ್ರಾಂತಿಯ ಕಿತ್ತೂರು ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿತ್ತು.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಕಿತ್ತೂರು ಕ್ಷೇತ್ರದ ಎಂ.ಕೆ ಹುಬ್ಬಳ್ಖಿಯಲ್ಲೇ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.ಶಾಸಕರ ಜನ್ಮ ದಿನದ ಅಂಗವಾಗಿ ಇವತ್ತು ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಎಂ.ಕೆ ಹುಬ್ಬಳ್ಳಿಯಲ್ಲೇ ನಡೆಯುತ್ತಿವೆ.ಅದಕ್ಕಾಗಿ ಎಂ.ಕೆ ಹುಬ್ಬಳ್ಳಿಯಲ್ಲಿ ದೊಡ್ಡ ಶಾಮಿಯಾನಾ ಕೂಡಾ ಹಾಕಲಾಗಿದೆ.
ಇತ್ತೀಚಿಗೆ ಯಾಕೋ ಏನೋ ಗೊತ್ತಿಲ್ಲ,ಕಿತ್ತೂರವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳೇ ಕ್ರಾಂತಿಯ ನೆಲ ಕಿತ್ತೂರನ್ನು ಕಡೆಗಣಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಈಗ ಎಂ.ಕೆ ಹುಬ್ಬಳ್ಳಿಯಲ್ಲಿ ಜನ್ಮ ದಿನದ ಕಾರ್ಯಕ್ರಮ ಆಯೋಜಿಸಿ ಎಂ.ಕೆ ಹುಬ್ಬಳ್ಳಿಯೇ ಕಿತ್ತೂರಿನ ಪವರ್ ಸೆಂಟರ್ ಎಂದು ತೋರಿಸಿದ್ದಾರೆ.
ಇತ್ತೀಚಿಗೆ ಕಾಂಗ್ರೆಸ್ ಮುಖಂಡ,ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಾಬಾಸಾಹೇಬ್ ಪಾಟೀಲ ನೇಗಿನಹಾಳದಿಂದ ,ಎಂ.ಕೆ ಹುಬ್ಬಳ್ಳಿಯವರೆಗೆ ತಿರಂಗಾ ರ್ಯಾಲಿ ನಡೆಸಿ,ಎಂ.ಕೆ ಹುಬ್ಬಳ್ಳಿಯಲ್ಲೇ ಸಮಾರೋಪ ಸಮಾರಂಭ ಮಾಡಿ,ಎಂ.ಕೆ ಹುಬ್ಬಳ್ಳಿಯಲ್ಲಿ ಸಾವಿರಾರು ಜನರನ್ನು ಸೇರಿಸಿ ದೊಡ್ಡ ಕಾರ್ಯಕ್ರಮ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ನೋಡಿದ್ರೆ,ಎಂ.ಕೆ ಹುಬ್ಬಳ್ಳಿ ಈಗ ಕಿತ್ತೂರು ಕ್ಷೇತ್ರದ ಪವರ್ ಸೆಂಟರ್ ಆಗಿದೆ ಅನ್ನೋದು ಖಾತ್ರಿಯಾಗಿದೆ.
ಸರ್ಕಾರ ಕಿತ್ತೂರು ಕೋಟೆಯ, ಪ್ರತಿರೂಪವನ್ನು ಕಿತ್ತೂರು ಬಿಟ್ಟು ಪಕ್ಕದ ಗ್ರಾಮದಲ್ಲಿ ನಿರ್ಮಿಸುವ ಯೋಜನೆ ರೂಪಿಸಿತ್ತು,ಕಿತ್ತೂರಿನ ಜನ,ಕಿತ್ತೂರು ಕೋಟೆಯನ್ನು ಕಿತ್ತೂರಿನಲ್ಲೇ ನಿರ್ಮಿಸುವಂತೆ ಬೀದಿಗೀಳಿದು ಹೋರಾಟ ಮಾಡುವ ಪರಿಸ್ಥಿತಿಯೂ ಎದುರಾಗಿದ್ದು ದುರ್ದೈವ.
ಕಿತ್ತೂರು ಕ್ರಾಂತಿಯ ನೆಲ,ವೀರರಾಣಿ ಕಿತ್ತೂರು ಚನ್ನಮ್ಮ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೋರಾಟ ಮಾಡಿದ ಪವಿತ್ರ ನೆಲ,ಈ ನೆಲವನ್ನು ಕಿತ್ತೂರಿನ ಜನಪ್ರತಿನಿಧಿಗಳೇ ಗೌರವಿಸದಿದ್ದರೆ,ಇನ್ಯಾರು ಗೌರವಿಸಬೇಕು ನೀವೇ ಹೇಳಿ,