ಕಿಡ್ನ್ಯಾಪ್ ಕೇಸ್ ನಲ್ಲಿ ಭಾಗಿಯಾದ ಮೂವರು ಜನ ಆರೋಪಿಗಳ ಬಂಧನ
ಬೆಳಗಾವಿ- ಚನ್ನಮ್ಮನ ಕಿತ್ತೂರಿನಲ್ಲಿ ಇತ್ತೀಚಿಗೆ ಅಪಹರಣವಾಗಿದ್ದ ಪಟ್ಟಣ ಪಂಚಾಯತಿ ಸದಸ್ಯ ಪತ್ತೆಯಾಗಿದ್ದು ಈ ಪ್ರಕರಣದಲ್ಲಿ ಭಾಗಿಯಾದ ಮೂವರುಚ ಆರೋಪಿಗಳನ್ನು ಬಂಧಿಸಲಾಗಿದೆ.ಕಿಡ್ನ್ಯಾಪ್ ಆಗಿದ್ದ ಕಿತ್ತೂರ ಪಟ್ಟಣ ಪಂಚಾಯತಿಯ ಬಿಜೆಪಿ ಸದಸ್ಯ ನಾಗರಾಜ್ ಅಸುಂಡಿಯನ್ನು ಪೋಲೀಸರು ಸುರಕ್ಷಿತವಾಗಿ ಕರೆತಂದಿದ್ದಾರೆ.
ಹಾವೇರಿಯ ಬಂಕಾಪೂರದ ಬಳಿ ಕಿಡ್ಯಾಪ್ ಆಗಿದ್ದ ನಾಗರಾಜ್ ಅಸುಂಡಿ ಅವರನ್ನು ಪತ್ತೆ ಮಾಡಿರುವ ಪೋಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಮೂವರು ಜನ ಆರೋಪಿತರನ್ನು ಬಂಧಿಸುವ ಮೂಲಕ ಪೋಲೀಸರು ಕಿತ್ತೂರಿನ ಕಿಡ್ನ್ಯಾಪ್ ಖೇಲ್ ಖತಂ ಮಾಡಿದ್ದಾರೆ.
ಹೇಬಿಯಸ್ ಕಾರ್ಬಸ್ ಕೇಸ್ ದಾಖಲಿಸಿದ ಕಾರಣ ,ಅಪಹರಣವಾಗಿದ್ದ ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ್ ಅಸುಂಡಿ ಅವರನ್ನು ಬೈಲಹೊಂಗಲದ ಜೆಎಂಎಫ್ ಸಿ ಪ್ರಥಮ ದರ್ಜೆಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.ನ್ಯಾಯಾಧೀಶರು ನಾಗರಾಜ್ ಅಸುಂಡಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಕಿತ್ತೂರು ಪಟ್ಟಣ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು,ಬಿಜೆಪಿಯ ಸಂಖ್ಯಾಬಲವನ್ನು ಕುಗ್ಗಿಸಲು ಕಾಂಗ್ರೆಸ್ ಬಿಜೆಪಿ ಸದಸ್ಯನ್ನು ಅಪಹರಣ ಮಾಡಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ನಾಗರಾಜ್ ಅಸುಂಡಿಯವರನ್ನು ಅಪಹರಣ ಮಾಡಿದ್ದ ಮೂವರನ್ನು ಬಂಧಿಸಲಾಗಿದ್ದು ಖುರ್ಚಿಗಾಗಿ ಕಿತ್ತೂರಿನಲ್ಲಿ ನಡೆದ ಖೇಲ್ ಖತಂ ಆಗಿದೆ.