ಬೆಳಗಾವಿ-ವೀರರಾಣಿ ಕಿತ್ತೂರು ಚನ್ನಮ್ಮಾಜಿಯ,ಕಿತ್ತೂರಿನಲ್ಲಿ ಕೋಟೆ ನಿರ್ಮಾಣದ ವಿಚಾರ,ಈಗ ವಿವಾದಕ್ಕೆ ಕಾರಣವಾಗಿದೆ, ಸರ್ಕಾರ ಕಿತ್ತೂರು ಬಿಟ್ಟು, ಬಚ್ಚನಕೇರಿಯಲ್ಲಿ ಕೋಟೆ ನಿರ್ಮಾಣಕ್ಕೆ ಮುಂದಾಗಿದ್ದು,
ಕಿತ್ತೂರಿನ ಜನ,ಕಿತ್ತೂರು ಪಟ್ಟಣದಲ್ಲಿ ಕೋಟೆ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.ರಾಣಿ ಚೆನ್ನಮ್ಮ ಅರಮನೆಯ ಪ್ರತಿರೂಪ ಕಟ್ಟಡ ನಿರ್ಮಾಣಕ್ಕೆ ಅಣಿಯಾದ ಸರ್ಕಾರ,ಕಿತ್ತೂರಲ್ಲಿರುವ ಕೋಟೆ ಪಕ್ಕವೇ ಮತ್ತೊಂದು ಕೋಟೆ ನಿರ್ಮಿಸುವ ಯೋಜನೆ ಇತ್ತು, ಆದ್ರೆ ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ ಅರಮನೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ ಮಾಡಿರುವದಕ್ಕೆ,ಕಿತ್ತೂರಿನ ಮಠಾಧೀಶರು ಸೇರಿದಂತೆ ಕಿತ್ತೂರಿನ ವಿವಿಧ ಸಂಘ ಸಂಸ್ಥೆಗಳು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.
ಬಚ್ಚನಕೇರಿಯಲ್ಲಿ
ಕೋಟೆಯ ಪ್ರತಿರೂಪ ಅರಮನೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ ಮಾಡಿದೆ.ಅರಮನೆ ನಿರ್ಮಾಣಕ್ಕೆ ಬಚ್ಚನಕೇರಿ ಗ್ರಾಮದಲ್ಲಿರುವ 57 ಎಕರೆ ಜಾಗ ಮೀಸಲಿಡಲು ಸರ್ಕಾರ ನಿರ್ಧಾರ ಕೈಗೊಂಡಿದೆ,ಅರಮನೆ ನಿರ್ಮಾಣಕ್ಕೆ ಸರ್ಕಾರಿ ಜಾಗ ಕಿತ್ತೂರು ಪ್ರಾಧಿಕಾರಕ್ಕೆ ನೀಡಲು ಉದ್ದೇಶಿಸಿರುವ ಸರ್ಕಾರದ ಕ್ರಮಕ್ಕೆ ಕಿತ್ತೂರಿನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.
ಸರ್ಕಾರದ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಬೈಲಹೊಂಗಲ ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದು ಬಚ್ಚನಕೇರಿಯ 57 ಎಕರೆ ಸರ್ಕಾರಿ ಜಮೀನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡುವಂತೆ ಸೂಚಿಸಿ,ಈ ಸಂಬಂಧ ಆಕ್ಷೇಪಗಳಿದ್ರೆ ಸಮರ್ಥಣಿಯ ಕಾರಣ ನೀಡಲು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ.
ಬಚ್ಚನಕೇರಿಯಲ್ಲಿ ಅರಮನೆ ನಿರ್ಮಾಣಕ್ಕೆ ಮುಂದಾಗಿರುವ ಜಿಲ್ಲಾಡಳಿತ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಚ್ಚನಕೇರಿಯಲ್ಲಿ ಕಿತ್ತೂರು ಕೋಟೆಯ ಪ್ರತಿರೂಪ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸರ್ಕಾರದ ಕ್ರಮ ಖಂಡಿಸಿ ಆ. 2 ಕ್ಕೆ ಕಿತ್ತೂರು ಬಂದ್ ಕರೆ ನೀಡಿದ್ದಾರೆ ಕಿತ್ತೂರಿನ ಜನ.
ಐತಿಹಾಸಿಕ ಕಿತ್ತೂರು ಕೋಟೆಯ ಪ್ರತಿರೂಪ ಅರಮನೆ ಪಟ್ಟಣದಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿ,ಸರ್ಕಾರದ ಆದೇಶ ಖಂಡಿಸಿ ಕಿತ್ತೂರು ಪಟ್ಟಣ ಬಂದ್ ಕರೆ ನೀಡಿದ್ದಾರೆ.
ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಿತ್ತೂರು ಬಂದ್ ಕರೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.ನಿಚ್ಚಣಕಿಯ ಮಡಿವಾಳೇಶ್ವರ ಮಠದಿಂದ ಚನ್ನಮ್ಮ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.
ಬಳಿಕ ಬೆಳಗಾವಿಗೆ ಆಗಮಿಸಿ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದ್ದು.ಪ್ರತಿಭಟನೆಯಲ್ಲಿ 10 ಸಾವಿರಕ್ಕೂ ಅಧಿಕ ಜನರು ಸೇರುವಂತೆ ಸ್ವಾಮೀಜಿಗಳ ಮನವಿ ಮಾಡಿದ್ದಾರೆ.