ಬೆಳಗಾವಿ- ರಾಣಿ ಕಿತ್ತೂರು ಚನ್ನಮ್ಮ ವಿಶ್ವ ವಿದ್ಯಾಲಯ ವನ್ನು ಹಿರೇಬಾಗೇವಾಡಿ ಗ್ರಾಮಕ್ಕೆ ಸ್ಥಳಾಂತರ ಮಾಡದೇ ಕ್ರಾಂತಿಯ ನೆಲ ಕಿತ್ತೂರಿಗೆ ವಿಶ್ವವಿದ್ಯಾಲಯ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಚನ್ನಮ್ಮನ ಕಿತ್ತೂರಿನಲ್ಲಿ ಹೋರಾಟ ಶುರುವಾಗಿದೆ.
ಕಿತ್ತೂರು ಸಂಸ್ಥಾನ ಕಲ್ಮಠದ ಶ್ರೀಗಳ ಸಾನಿದ್ಯದಲ್ಲಿ ಇಂದು ಚನ್ನಮ್ಮನ ಕಿತ್ತೂರಿನಲ್ಲಿ ದೊಡ್ಡ ಹೋರಾಟವೇ ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೆಂದ್ರ ಶ್ರೀಗಳು ಚನ್ನಮ್ಮನ ಕಿತ್ತೂರಿನಲ್ಲೇ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕೆಂದು ಬೆಳಗಾವಿ ಜಿಲ್ಲೆಯ ಹದಿನೆಂಟು ಜನ ಶಾಸಕರು,ಮೂವರು ಎಂ ಪಿ ಗಳು ಸಹಿ ಮಾಡಿ ಕೊಡಬೇಕು,ಅವರು ಸಹಿ ಮಾಡಿ ಕೊಡದಿದ್ದರೆ ಚನ್ನಮ್ಮನ ಹೆಸರು ಹೇಳಲು ಅವರೆಲ್ಲರೂ ಅಯೋಗ್ಯರು,ಕಿತ್ರೂರಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆಗೆ ಅವರೆಲ್ಲರೂ ಸಹಿ ಮಾಡಿ ಕೊಡದೇ ರಾಣಿ ಚನ್ನಮ್ಮನ ಹೆಸರು ತಗೊಂಡ್ರೆ ಅವರ ನಾಲಿಗೆ ಕತ್ತರಿಸಿ ಬಿಡ್ತೀವಿ ಎಂದು ಕಿತ್ತೂರು ಕಲ್ಮಠದ ಶ್ರೀಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಹಿರೇಬಾಗೇವಾಡಿ ಗ್ರಾಮಕ್ಕೆ ಸ್ಥಳಾಂತರ ಮಾಡುವದಕ್ಕೆ ಕಿತ್ತೂರಿನ ಶಾಸಕ ಮಹಾಂತೇಶ ದೊಡ್ಡಗೌಡ್ರ ಅವರು ಸಹಿ ಮಾಡಿರುವದಕ್ಕೆ ಹೋರಾಟಗಾರರು ದೊಡ್ಡಗೌಡ್ರ ವಿರುದ್ಧ ಕಿಡಿ ಕಾರಿದರು
ಕ್ರಾಂತಿಯ ನೆಲ ಕಿತ್ತೂರಿನಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಆಗ್ರಹಿಸಿ ಕ್ರಾಂತಿ ಶುರುವಾಗಿದೆ.