Breaking News

ಸರಕಾರದ ಯಡವಟ್ಟು,ವಿಜಯೋತ್ಸವದ ಬದಲು ಜಯಂತಿ….!!

ಬೆಳಗಾವಿ- ಇವತ್ತು ಕಿತ್ತೂರು ಉತ್ಸವ,ವೀರರಾಣಿಯ ಶೌರ್ಯದ ದಿನ,ಬ್ರಿಟಿಷರ ವಿರುದ್ಧ ಸಿಡಿದು ನಿಂತ ಐತಿಹಾಸಿಕ ದಿನ,ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ರುಂಡ ಚಂಡಾಡಿ,ಕ್ರಾಂತಿಯ ಕಹಳೆ ಊದಿದ ಕ್ರಾಂತಿಯ ದಿವಸ,ಕ್ರಾಂತಿ ನೆಲದ ವಿಜಯೋತ್ಸವದ ದಿನವೇ ಕಿತ್ತೂರು ಉತ್ಸವ.

ಅಕ್ಟೋಬರ್ 23 ರಂದು ಕಿತ್ತೂರು ವಿಜಯೋತ್ಸವ ಆಚರಣೆ ಮಾಡಲಾಗುತ್ತದೆ, ಆದ್ರೆ ಸರ್ಕಾರ ಮಾಡಿದ ಯಡವಟ್ಟಿನಿಂದಾಗಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಮಾದದಿಂದ ಇವತ್ತು ವಿಜಯೋತ್ಸವದ ಬದಲು,ರಾಣಿ ಚನ್ನಮ್ಮನ ಜಯಂತಿ ಉತ್ಸವ ಆಚರಣೆ ಮಾಡಲಾಗುತ್ತಿದೆ.

ಊಮಾಶ್ರೀ ಅವರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಆಗಿದ್ದಾಗ,ಸರ್ಕಾರಕ್ಕೆ ವಿಜಯೋತ್ಸವ ಮಾಡಲು ಅವಕಾಶ ಇಲ್ಲ,ಕಿತ್ತೂರು ವಿಜಯೋತ್ಸವವನ್ನು ,ರಾಣಿ ಚನ್ನಮ್ಮನ ಜಯಂತಿ ಉತ್ಸವವನ್ನಾಗಿ ಆಚರಣೆ ಮಾಡುವದಾಗಿ ಆದೇಶ ಹೊರಡಿಸಿರುವದರಿಂದ,ಎಲ್ಲರೂ ಇವತ್ತು ಚನ್ನಮ್ಮನ ಜಯಂತಿ ಇದೆ ಎಂದು ಭಾವಿಸಿ,ಸಾಮಾಜಿಕ ಜಾಲತಾಣಗಳಲ್ಲಿ ರಾಣಿ ಚನ್ನಮ್ಮನ ಜಯಂತಿಯ ಶುಭಾಶಯಗಳು ಎಂದು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನವ್ಹೆಂಬರ್ 14 ರಂದು ರಾಣಿ ಚನ್ನಮ್ಮನ ಜಯಂತಿ ಆಚರಣೆ ಮಾಡಲಾಗುತ್ತಿದೆ. ಆದ್ರೆ ಇವತ್ತು ಜಯಂತಿ ಉತ್ಸವ ಇಲ್ಲ ,ಇವತ್ತು ಆಚರಣೆ ಮಾಡುತ್ತಿರುವದು ಕ್ರಾಂತಿಯ ನೆಲ ಕಿತ್ತೂರಿನ ವಿಜಯೋತ್ಸವ ಎಂದು ಸರ್ಕಾರ ಆದೇಶ ಹೊರಡಿಸಬೇಕಾಗಿದೆ.

ಈ ಹಿಂದೆ ಊಮಾಶ್ರೀ ಅವರು,ವಿಜಯೋತ್ಸವದ ಬದಲು ಜಯಂತಿ ಉತ್ಸವ ಎಂದು ಆದೇಶ ಹೊರಡಿಸಿದಾಗ ಚನ್ನಮ್ಮನ ಅಭಿಮಾನಿಗಳು ಅದಕ್ಕೆ ತೀವ್ರ ವಿರೋಧ ವ್ಯೆಕ್ತಪಡಿಸಿದರೂ ಊಮಾಶ್ರೀ ಅದಕ್ಕೆ ಕ್ಯಾರೆ ಎನ್ನಲಿಲ್ಲ,ಆದೇಶ ಹಿಂಪಡೆಯಲಿಲ್ಲ ,ಹೀಗಾಗಿ ಸರ್ಕಾರ ಮಾಡಿದ ಯಡವಟ್ಟಿನಿಂದಾಗಿ ಅಭಿಮಾನಿಗಳು ಇಂದು ಗೊಂದಲಕ್ಕೀಡಾಗಿದ್ದಾರೆ.

ಹಿಂದಿನ ಕಾಂಗ್ರೆಸ್ ಸರಕಾರ ಮಾಡಿದ ತಪ್ಪನ್ನು ಇಂದಿನ ಸರ್ಕಾರ ಸರಿಪಡಿಸಲಿ,ಸಮಗ್ರ ಕಿತ್ತೂರಿನ ಇತಿಹಾಸ ರಚನೆಗಾಗಿ,ಲಂಡನ್ ಲೈಬ್ರರಿಯಲ್ಲಿಕೊ ಳೆಯುತ್ತಿರುವ,ಕಿತ್ತೂರಿನ ಇತಿಹಾಸದ ಪುರಾವೆಗಳನ್ನು ತರಲು ಇತಿಹಾಸ ಸಂಶೋಧಕರ ಸಮೀತಿ ರಚಿಸಿ ಲಂಡನ್ ಗೆ ಕಳುಹಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *