ಬೆಳಗಾವಿ- ಕೆಎಲ್ಇ ಸಂಸ್ಥೆಯ ಆರ್.ಎಲ್.ಎಸ್. ಪದವಿ ಪೂರ್ಕಾಲೇಜಿನ ವಿದ್ಯಾರ್ಥಿ ಪ್ರದೀಪ ಹಳ್ಳೂರ ಎಂಬ ವಿದ್ಯಾರ್ಥಿ ಬಡನದ ನಡುವೆಯೂ ನೀಟ್ ಪರೀಕ್ಷೆಯಲ್ಲಿ 647 ಅಂಕ ಪಡೆದಿದ್ದಾನೆ. ಅವನಿಗೆ ಕೆಎಲ್ಇ ಸಂಸ್ಥೆಯು ಈ ವಿದ್ಯಾರ್ಥಿಗೆ ಶಿಷ್ಯ ವೇತನ ನೀಡಿ ಪ್ರೋತ್ಸಾಹಿಸಿದೆ ಎಂದು ಕೆಎಲ್ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು
ಶನಿವಾರ ಕೆಎಲ್ಇ ಆರ್ ಎಲ್ ಎಸ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವರ್ಷ ನೀಟ್ ಪರೀಕ್ಷೆಯಲ್ಲಿ ಕೆಎಲ್ಇಯ 600ಕ್ಕಿಂತಲೂ ಹೆಚ್ಚಿಗೆ ಅಂಕಗಳನ್ನು 31ಕ್ಕೂ ಅಧಿಕ ವಿದ್ಯಾರ್ಥಿಗಳು ಪಡೆದಿದ್ದಾರೆ. 500 ಕ್ಕೂ ಅಧಿಕ ಅಂಕಗಳನ್ನು 74ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಸಿಇಟಿ ಪರೀಕ್ಷೆಯಲ್ಲಿಯೂ ಸಹ 500ಕ್ಕಿಂತ ಕಡಿಮೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳು 38 ಜನ ಇದ್ದಾರೆ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಸಾಂಪ್ರದಾಯಿಕ ಶಿಕ್ಷಣ ದೂರ ಸರಿಯುತ್ತಿದೆ. ವೃತ್ತಿಪರ ಶಿಕ್ಷಣಗಳು ಸಾಕಷ್ಟು ಬದಲಾವಣೆಗಳಾಗಿವೆ. ಹೊಸದಾಗಿ ಕೋರ್ಸುಗಳು ಹುಟ್ಟಿಕೊಳ್ಳುತ್ತಿವೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಧ್ಯೇಯವಾಗುತ್ತಿದೆ ಎಂದರು.
ಗ್ರಾಮೀಣ ಭಾಗದ ಪ್ರತಿಭಾವಂತ ಬಡ ಮಕ್ಕಳಿಗೆ ನೀಟ್, ಸಿಇಟಿ ಪರೀಕ್ಷೆಯ ತರಬೇತಿಯನ್ನು ಸರಕಾರ ಉಚಿತವಾಗಿ ಕೊಡಿಸಲು ಮುಂದಾಗಬೇಕು ಎಂದರು.
ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.