Breaking News

ಕೆ ಎಲ್ ಇ ಸಂಸ್ಥೆಯ ಅದ್ಯಕ್ಷರಾಗಿ ಮಹಾಂತೇಶ್ ಕೌಜಲಗಿ,ಕಾರ್ಯಾದ್ಯಕ್ಷರಾಗಿ ಪ್ರಭಾಕರ ಕೋರೆ ಅವಿರೋಧ ಆಯ್ಕೆ

ಕೆ ಎಲ್ ಇ ಸಂಸ್ಥೆಯ ಅದ್ಯಕ್ಷರಾಗಿ ಮಹಾಂತೇಶ್ ಕೌಜಲಗಿ,ಕಾರ್ಯಾದ್ಯಕ್ಷರಾಗಿ ಪ್ರಭಾಕರ ಕೋರೆ ಅವಿರೋಧ ಆಯ್ಕೆ

ಬೆಳಗಾವಿ- ರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿರುವ ಬೆಳಗಾವಿ ಕೆ ಎಲ್ ಇ ಸಂಸ್ಥೆಯ ಅದ್ಯಕ್ಷರಾಗಿ ಮಹಾಂತೇಶ್ ಕೌಜಲಗಿ,ಕಾರ್ಯಾದ್ಯಕ್ಷರಾಗಿ ಪ್ರಭಾಕರ ಕೋರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಳಗಾವಿಯಲ್ಲಿ ಪತ್ರಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಕೆ ಎಲ್ ಇ ಸಂಸ್ಥೆಯ ಕಾರ್ಯಾದ್ಯಕ್ಷ ಪ್ರಭಾಕರ ಕೋರೆ 104 ವರ್ಷಗಳ ಇತಿಹಾಸ, 270 ಅಂಗ ಸಂಸ್ಥೆಗಳನ್ನು ಹೊಂದಿರುವ 16 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು, ಒಂದು ಲಕ್ಷ 25 ಸಾವಿರಕ್ಕೂ ಹೆಚ್ವು ವಿದ್ಯಾರ್ಥಿಗಳನ್ನು ಹೊಂದಿರುವ ಕೆ ಎಲ್ ಇ ಸಂಸ್ಥೆಯಲ್ಲಿ ಸತತವಾಗಿ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಪ್ರಜಾಪ್ರಭುತ್ವದ ಅಡಿ ಸಂಸ್ಥೆ ಕೆಲಸ ಮಾಡುತ್ತಿದೆ .ಎಂದು ಪ್ರಭಾಕರ ಕೋರೆ ಹೇಳಿದರು.

ಕೆಎಲ್ಇ ನೂತನ ಅಧ್ಯಕ್ಷರಾಗಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಉಪಾಧ್ಯಕ್ಷರಾಗಿ ವೀರುಪಾಕ್ಷಪ್ಪ ಹನಜಿ, ಶಿವಲಿಂಗಪ್ಪ ತಟ್ಟೇವಾಡಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಅಶೋಕ ಬಾಗೇವಾಡಿ, ಮಹಾಂತೇಶ ಕವಟಗಿಮಠ, ಅಮಿತ್ ಕೋರೆ, ಮಹಾದೇವಪ್ಪ ಮುನವಳ್ಳಿ, ಈಶ್ವರಪ್ಪ ಮುನವಳ್ಳಿ, ರುದ್ರಗೌಡ ಪಾಟೀಲ, ಡಾ. ವಿ.ಐ.ಪಾಟೀಲ, ಶಿವಮೊಗ್ಗಪ್ಪ ಪಾಟೀಲ, ವಿಜಯ ಬಸಪ್ಪ ಪಟ್ಟೇದ, ವೀರುಪಾಕ್ಷಿ ಸಾಧುನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಸಂಸ್ಥೆ ಭಾಷಾತೀತವಾಗಿ, ಜಾತ್ಯಾತೀತವಾಗಿ ಕೆಎಲ್ಇ ಸಂಸ್ಥೆ ಸೇವೆ ನೀಡುತ್ತ ಬಂದಿದೆ.
ಕೆಎಲ್ ಇ ಸಂಸ್ಥೆಗೆ ಸತತ ಮೂರು ಬಾರಿ ಕೆಎಲ್ಇ ಸಂಸ್ಥೆಗೆ ಹ್ಯಾಟ್ರಿಕ್ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದರು.
ಬರುವ ಮೂರು ವರ್ಷದಲ್ಲಿ ಹುಬ್ಬಳ್ಳಿಯಲ್ಲಿ 600 ಕೋಟಿ ರು. ವೆಚ್ಚದಲ್ಲಿ ಕೆಎಲ್ಇ ಮೆಡಿಕಲ್ ಕಾಲೇಜು, ಬೆಂಗಳೂರಿನಲ್ಲಿ 300 ಕೋಟಿ ರು. ವೆಚ್ಚದಲ್ಲಿ 600 ಹಾಸಿಗೆಯುಳ್ಳ ಆಸ್ಪತ್ರೆ. ಮುಂಬೈನಲ್ಲಿ ಕಾಲೇಜು, ಪುಣೆಯಲ್ಲಿ 200 ಹಾಸಿಗೆಯ ಆಸ್ಪತ್ರೆ ಉದ್ಘಾಟನೆ. ಹಾಗೂ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಗಾಗಿ 120 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.

ಸಾಂಬ್ರಾದಲ್ಲಿ ಅಲೋಪಥಿಕ್ ಆಸ್ಪತ್ರೆ ನಿರ್ಮಾಣ, ಚಿಕ್ಕೋಡಿಯಲ್ಲಿ ಸಿಬಿಎಸ್ಸಿ ಶಾಲೆ ನಿರ್ಮಾಣ ಸೇರಿದಂತೆ ಮಹಾರಾಷ್ಟ್ರದ ಭಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಶಿವಾನಂದ ಕೌಜಲಗಿ, ಮಹಾಂತೇಶ ಕವಟಗಿಮಠ, ಅಮಿತ ಕೋರೆ, ಮಹಾಂತೇಶ ಕೌಜಲಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *