Breaking News

14 ಪಿಎಚ್‌ಡಿ, 10 ಪೋಸ್ಟ್ ಡಾಕ್ಟರಲ್ , 37 ಚಿನ್ನದ ಪದಕ ಕೊಡ್ತಾರೆ…

ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೆರ), ಡೀಮ್ಡ್ ಟು ಬಿ ಯೂನಿವರ್ಸಿಟಿಯ 12 ನೇ ಘಟಿಕೋತ್ಸವವು ಇದೇ ಬುಧವಾರ, ದಿ. 3 ಆಗಸ್ಟ್ 2022 ರಂದು ಬೆಳಿಗ್ಗೆ 11.00 ಗಂಟೆಗೆ, ಕಾಹೆರ ಆವರಣದಲ್ಲಿರುವ ಕೆಎಲ್‌ಇ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.

ರಾಜ್ಯದ ಉನ್ನತ ಶಿಕ್ಷಣ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ – ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ ಸಿ ಎನ್ ಅಶ್ವಥ್‌ನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾಹೆರನ ಕುಲಪತಿ ಹಾಗೂ ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಘಟಿಕೋತ್ಸವದಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣಗೊಂಡ ಅಭ್ಯರ್ಥಿಗಳು ಮತ್ತು ನಿಯಂತ್ರಕ ಮಂಡಳಿಗಳ ನಿಬಂಧನೆಗಳಿಗೆ ಅನುಗುಣವಾಗಿ ಇಂಟರ್ನ್ಶಿಪ್ ಸೇರಿದಂತೆ 28ನೇ ಜುಲೈ 2022 ಅಥವಾ ಅದಕ್ಕೂ ಮೊದಲು ಆಯಾ ಪದವಿಗಳು ಮತ್ತು ಡಿಪ್ಲೋಮಾಗಳ ಪ್ರಮಾಣಪತ್ರ ಮಾನದಂಡಗಳನ್ನು ಪೂರೈಸಿದ ಅಭ್ಯರ್ಥಿಗಳನ್ನು ನೀಡಲಾಗುತ್ತಿದೆ.

14 ಪಿಎಚ್‌ಡಿ, 10 ಪೋಸ್ಟ್ ಡಾಕ್ಟರಲ್ , 37 ಚಿನ್ನದ ಪದಕಗಳು ಸೇರಿದಂತೆ ಆರೋಗ್ಯ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಒಟ್ಟು 1502 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರಮಾಣ ಪತ್ರ ನೀಡಲಾಗುತ್ತಿದೆ. 494 ಸ್ನಾತಕೋತ್ತರ ಪದವಿ, 909 ಪದವಿ, 11 ಸ್ನಾತಕೋತ್ತರ ಡಿಪ್ಲೊಮಾ, 34 ಸರ್ಟಿಫಿಕೇಟ್ ಕೋರ್ಸ್, 8 ಫೆಲೋಶಿಪ್ ಮತ್ತು 22 ಡಿಪ್ಲೊಮಾ ಪ್ರಮಾಣ ಪತ್ರ ನೀಡಲಾಗುತ್ತದೆ.
ಘಟಿಕೋತ್ಸವದ ವಿವರಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ www.kledeemeduniversity.edu.in ನೋಡಬಹುದು.

TO CONDUCT 12th CONVOCATION ON 03-08-2022

The 12th Convocation of the KLE Academy of Higher Education and Research (KAHER), Deemed-to-be-University, Belagavi, Karnataka will be held on Wednesday, the 3rd August 2022 at 11.00 AM at KLE Centenary Convention Centre, JNMC Campus, Belagavi, Karnataka. Dr. C.N.Ashwath Narayan, Hon. Minister for Higher Education, Electronics, Information Technology – Biotechnology, Science and Technology, Skill Development, Entrepreneurship and Livelihood, Government of Karnataka, Bengaluru will be the Chief Guest and deliver the Convocation Address. Dr. Prabhakar Kore, Chancellor, KAHER and Chairman, KLE Society will preside.

The candidates who are declared qualified for the award of Degree/Diploma and fulfil the criteria for the award of the respective Degrees and Diplomas on or before 28th July 2022 including Internship in conformity with the Rules and Regulations of the respective Regulating Councils, are being awarded in this Convocation.

In this Convocation, a total of 1502 Degrees are being awarded in various disciplines of Health Science including 37 Gold Medals for their academic achievements in their respective courses / specialties which include 14 Ph.D., 10 Post-doctoral (DM/M.Ch), 494 Post-Graduate, 909 Under-Graduate, 11 Post-Graduate Diploma, 34 Certificate Course, 8 Fellowship and 22 Diploma.

The details of the Convocation are disseminated on the University website www.kledeemeduniversity.edu.in

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *