ಬೆಳಗಾವಿ
ರಾಯಣ್ಣನನ್ನು, ಚನ್ನಮ್ಮನನ್ನು ಒಪ್ಪಿಕೊಳ್ಳದ ಕೆಲ ಪುಂಡರು ಅವರ ಪುತ್ಥಳಿ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕನ್ನಡಿಗರಾದ ನಾವು ಶಿವಾಜಿಯನ್ನು ಹೇಗೆ ಒಪ್ಪಿಕೊಳ್ಳಬೇಕು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪೀರನವಾಡಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲು ಬಿಡದ ಕಿಡಿಗೇಡಿಗಳು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯಾಕೆ ನಿರ್ಮಾಣ ಮಾಡಬೇಕು. ಪೀರನವಾಡಿಯಲ್ಲಿ ರಾಯಣ್ಣನ ಪ್ರತಿಷ್ಠಾಪನೆ ಮಾಡಲು ಬಿಡದ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲಾಗುವುದು.
ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ರಾಜ್ಯ ಕೇಳುತ್ತಿರುವ ಜನಪ್ರತಿನಿದಿಗಳು. ರಾಜಕಾರಣದ ತೆವಲಿಗಾಗಿ ಅಖಂಡ ಕರ್ನಾಟಕ ಒಡೆಯುವ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ.
ನಂಜುಂಡಪ್ಪ ವರದಿಗೆ ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದ ಜನಪ್ರತಿನಿದಿಗಳು ಮಾಡಿರುವುದು ದುರ್ದೈವದ ಸಂಗತಿ.
ಯಾವುದೇ ಕಾರಣಕ್ಕೂ ಉ.ಕ.ಪ್ರತ್ಯೇಕ ರಾಜ್ಯಕ್ಕೆ ನಮ್ಮ ಬೆಂಬಲವಿಲ್ಲ. ಕರ್ನಾಟಕದ ಅಖಂಡತೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿದಿಗಳು ಕೆಲಸ ಮಾಡಬೇಕು.
ಅಖಂಡ ಕರ್ನಾಟಕದಲ್ಲಿ ಒಡಕಿನ ದನಿಗಳು ಎಳುತ್ತಿರುವುದು ವಿಷಾಧನಿಯ ಎಂದರು.
ಬಾಬು ಸಂಗೋಡಿ, ಸುನೀಲ್ ಪಾಟೀಲ, ಪ್ರವೀಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.