ಬೆಳಗಾವಿ- ರಾಜ್ಯೋತ್ಸವದ ದಿನ ಎಂಈಎಸ್ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನನಗಿಲ್ಲ ಅದು ರಾಜ್ಯಪಾಲರ ವ್ಯಾಪ್ತಿಗೆ ಬರುತ್ತದೆ ನಾಡು ನುಡಿ ನೆಲ ಜಲದ ವಿಚಾರದಲ್ಲಿ ಹೊಸ ಕಮೀಟಿ ಸೆಟಪ್ ಮಾಡುವ ವಿಚಾರ ಇದೆ ಎಂದು ವಿಧಾನಸಭೆಯ ಅಧ್ಯಕ್ಷ ಕೋಳಿವಾಡ ತಿಳಿಸಿದರು
ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನದ ಪೂರ್ವ ತಯಾರಿಯ ಪರಶೇಲನೆ ನಡೆಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಅವರು ನಾಡು ನುಡಿಯ ವಿಚಾರದಲ್ಲಿ ಸಮಸ್ಯೆಗಳು ಎದುರಾದರೇ ಅವುಗಳನ್ನು ನಿಭಾಯಿಸಲು ನಾಡು ನುಡಿ ನೆಲ ಜಲದ ರಕ್ಷಣೆಗೆ ಪ್ರತ್ಯೇಕ ಶಾಸನ ಭದ್ದ ಕಮೀಟಿ ಮಾಡುವ ಚಿಂತನೆ ನಡೆದಿದೆ ನಾನು ಒಬ್ಬ ಕನ್ನಡಿಗನಾಗಿ ರಾಜ್ಯೋತ್ಸವದ ದಿನ ನಡೆದ ಕರಾಳ ದಿನದ ಘಟನೆಯನ್ನು ಖಂಡಿಸುತ್ತೇನೆ ಎಂದರು
ನವ್ಹೆಂಬರ ೨೧ ರಿಂದ ಬೆಳಗಾವಿಯಲ್ಲಿ ಹದಿನೈದು ದಿನಗಳ ಕಾಲ ಅಧಿವೇಶನ ನಡೆಯುತ್ತದೆ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಅವಕಾಶ ಕೊಡುತ್ತೇವೆ ಒಂದು ದಿನ ಮಹಾದಾಯಿ ಯೋಜನೆಯ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದು ವಿಧಾನಸಭಾದ್ಯಕ್ಷ ಕೋಳಿವಾಡ ತಿಳಿಸಿದರು
ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ ಕನ್ನಡದ ಹಬ್ಬದ ದಿನ ನಡೆದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದರು