Home / ಬೆಳಗಾವಿ ನಗರ / ಸೂಪರ್ ಸೀಡ್ ಗೆ ಆಗ್ರಹಿಸಿ ಕುಂಭಾಭಿಷೇಕ

ಸೂಪರ್ ಸೀಡ್ ಗೆ ಆಗ್ರಹಿಸಿ ಕುಂಭಾಭಿಷೇಕ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು ಶಾಸಕರಾದ ಸಂಬಾಜಿ ಪಾಟೀಲ ಹಾಗು ಅರವಿಂದ ಪಾಟೀಲರನ್ನು ಶಾಸಕ ಸ್ಥಾನದಿಂದ ವಜಾ ಮಾಡುವದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಚನ್ನಮ್ಮಾಜಿ ಮೂರ್ತಿಗೆ ಕುಂಭಾಭಿಷೇಕ ನೆರವೇರಿಸಿ ವಿನೂತನವಾಗಿ ಪ್ರತಿಭಟಿಸಿದರು

ಬೆಳಗಾವಿಯ ಅಶೋಕ ವೃತ್ತದಿಂದ ಬೃಹತ್ತ ಪ್ರತಿಭಟನಾ ರ್ಯಾಲಿ ಹೊರಡಿಸಿದ ಕನ್ನಡದ ಕಾರ್ಯಕರ್ತರು ಎಂಈಎಸ್ ವಿರುದ್ಧ ಘೋಷನೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು

ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು ಇಬ್ಬರು ಎಂಈಎಸ್ ಶಾಸಕರನ್ನು ಕೂಡಲೇ ವಜಾ ಮಾಡಬೇಕು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಂಧರ್ಭದಲ್ಲಿ ಎಂಈಎಸ್ ಗೆ ಮರಾಠಿ ಮಹಾ ಮೇಳಾವ್ ನಡೆಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು

ಚನ್ನಮ್ಮ ವೃತ್ರದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಚನ್ನಮ್ಮ ಮೂರ್ತಿಗೆ ಕುಂಭಾಭಿಷೇಕ ಮಾಡಿದ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು

ಭೀಮಾ ಶಂಕರ ಪಾಟೀಲ ಬಾಬು ಸಂಗೋಡಿ ಸೇರಿದಂತೆ ನಣುರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *