*ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆ;ಕೃಷ್ಣಾ ನದಿಗೆ 2,06,532 ಕ್ಯೂಸೆಕ್ ನೀರಿನ ಒಳಹರಿವು..!*
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಚಿಕ್ಕೋಡಿ ಉಪವಿಭಾಗದಲ್ಲಿ ಬರುವ ರಾಯಭಾಗ, ನಿಪ್ಪಾಣಿ, ಅಥಣಿ , ಕಾಗವಾಡ, ಚಿಕ್ಕೋಡಿ ತಾಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು ಕೃಷ್ಣಾ ನದಿಗೆ 2,06,532 ಕ್ಯೂಸೆಕ್ ನೀರಿನ ಒಳಹರಿವು ಹರಿದು ಬರುತ್ತಿದೆ.
ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಕಳೆದ ಎಂಟು ದಿನಗಳಿಂದ ಧಾರಾಕಾರ ಮಳೆ ಹಿನ್ನೆಲೆ ನಿತ್ಯ 49,524ಕ್ಯೂಸೆಕ್ ಒಳಹರಿವಿನೊಂದಿಗೆ ಮಹಾರಾಷ್ಟ್ರದ ಕೋಯ್ನಾ ಡ್ಯಾಮ್ ಶೇ.83.23ರಷ್ಟು ಭರ್ತಿಯಾಗಿದೆ. 105ಟಿಎಂಸಿ ಸಂಗ್ರಹ ಸಾಮರ್ಥ್ಯದ ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಈಗಾಗಲೇ 87.60ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೋಯ್ನಾ ಅಣೆಕಟ್ಟಿನ 6ಗೇಟ್ ಮೂಲಕ 10,100ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರ ರಾಜಾಪೂರ್ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 1,75,400 ಕ್ಯೂಸೆಕ್ ನೀರು, ದೂದಗಂಗಾ ನದಿಯಿಂದ ಕೃಷ್ಣಾ ನದಿಗೆ 32,032 ಕ್ಯೂಸೆಕ್ ನೀರು ಸೇರಿ
ಒಟ್ಟು 2,06,532 ಕ್ಯೂಸೆಕ್ ಒಳಹರಿವಿನಿಂದ ಕೃಷ್ಣ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಈಗ ಕೊಯ್ನಾ ಡ್ಯಾಮ್ ನಿಂದ ನೀರು ಬಿಟ್ಟಿರುವುದಕ್ಕೆ ನದಿ ಪಾತ್ರ ಜನರಲ್ಲಿ ಮತ್ತೆ ಪ್ರವಾಹ ಆತಂಕ ಮನೆ ಮಾಡಿದೆ. ನದಿತೀರದ ಜಮೀನುಗಳಿಗೆ ನೀರು ನುಗ್ಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ