Breaking News

ಬ್ರಿಗೇಡ್ ಎಫೆಕ್ಟ ,ಸಂಗೊಳ್ಳಿ ರಾಯಣ್ಣನ ಉತ್ಸವಕ್ಕೆ ಸಿಎಂ ದೌಡು

ಬ್ರಿಗೇಡ್ ಎಫೆಕ್ಟ್; ಸಂಗೊಳ್ಳಿ ಉತ್ಸವಕ್ಕೆ ಸಿಎಂ ದೌಡು ‌‌ ಬೆಳಗಾವಿ, ಜ. ೨೭: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವ ಕೇವಲ ಹೋಬಳಿ ಮಟ್ಟಕ್ಕೆ ಸೀಮಿತವಾಗಿತ್ತು. ಆದರೆ ಬಿಜೆಪಿ ನಾಯಕ ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡುತ್ತಿದ್ದಂತೆಯೇ ರಾಯಣ್ಣನ ಉತ್ಸವಕ್ಕೆ ಈ ವರ್ಷ ಎಲ್ಲಿಲ್ಲದ ಮಹತ್ವ ಬಂದಿದ್ದು, ಈ ಉತ್ಸವಕ್ಕೆ ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಉತ್ಸವಕ್ಕೆ ರಾಜ್ಯಮಟ್ಟದ ಮಾನ್ಯತೆ ನೀಡಿದ್ದಾರೆ. ಪ್ರತಿವರ್ಷ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣನ ಉತ್ಸವ ನಡೆಯುತ್ತಾ ಬರುತ್ತಿದೆ. ಈ ಉತ್ಸವದಲ್ಲಿ ಹೇಳಿಕೊಳ್ಳುವಂತಹ ಗಣ್ಯರು ಭಾಗವಹಿಸುತ್ತಿರಲಿಲ್ಲ. ಜಿಲ್ಲಾಧಿಕಾರಿ,ಅಪರ ಜಿಲ್ಲಾಧಿಕಾರಿಗಳು ಉದ್ಘಾಟಿಸಿದ ಇತಿಹಾಸವೂ ಇದೆ. ಕನ್ನಡ ಸಂಸ್ಕೃತಿ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ಆಗಮಿಸುತ್ತಿದ್ದರು. ಕೂಡಲಸಂಗಮದಲ್ಲಿ ಈಶ್ವರಪ್ಪನವರು ಬ್ರಿಗೇಡ್ ಸಮಾವೇಶವನ್ನು ಮಾಡಿದ್ದೇ ತಡ, ಈ ಸಾಲಿನ ಸಂಗೊಳ್ಳಿ ಉತ್ಸವಕ್ಕೆ ಹೈಟೆಕ್ ಟಚ್ ಸಿಕ್ಕಿದೆ. ಸ್ವತಹ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದರಿಂದ ಸಂಗೊಳ್ಳಿಯ ಜನರೂ ಭಾರೀ ನಿರೀಕ್ಷೆ ಹೊತ್ತು ಕುಳಿತುಕೊಂಡಿದ್ದಾರೆ. ಕಿತ್ತೂರು ಉತ್ಸವಕ್ಕೆ ಬರುವಂತೆ ಮುಖ್ಯಮಂತ್ರಿಯವರನ್ನು ಪರಿಪರಿಯಾಗಿ ಕೋರಿಕೊಂಡಿದ್ದರೂ, ಅವರು ಸಮಾರಂಭಕ್ಕೆ ಬರಲಿಲ್ಲ. ಕಿತ್ತೂರಿಗೆ ಬಂದರೆ ಅಧಿಕಾರದ ಕುರ್ಚಿ ಕಳೆದುಕೊಳ್ಳಬೇಕಾದೀತೆಂಬ ಮೂಢನಂಬಿಕೆಗೆ ಜೋತು ಬಿದ್ದಿದ್ದರೋ ಏನೋ? ಆದರೆ ಇದೀಗ ಸಂಗೊಳ್ಳಿ ಉತ್ಸವಕ್ಕೆ ಸ್ವಯಂ ಆಸಕ್ತಿಯಿಂದ ಮುಖ್ಯಮಂತ್ರಿ ಆಗಮಿಸುತ್ತಿದ್ದು,ಹಾಲುಮತಸ್ಥ ಸಮಾಜದ ಮನವೊಲಿಕೆಗೆ ಈಗಿನಿಂದಲೇ ಕಸರತ್ತು ಶುರುಮಾಡಿದ್ದಾರೆ. ಅದೇನೇ ಇರಲಿ, ಒಟ್ಟಾರೆ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ ಇಂದು ರಾಜಕೀಯ ದಾಳವಾಗಿ ಬಳಸಲ್ಪಡುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ

ರಾಯಣ್ಣನ ಉತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಗೊಳ್ಳಿ,ಹಾಗು ನಂದಗಡಗ ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಯತ್ರಾಸ್ಥಳಗಳನ್ನಾಗಿ ಮಾಡುವದು ಸರ್ಕಾರದ ಸಂಕಲ್ಪವಾಗಿದೆ ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಮಾದರಿಯ ಅಕ್ಯಾಡಮಿ ಸ್ಥಾಪನೆಗೆ ನೂರು ಎಕರೆ ಜಮೀನು ಗುರುತಿಸಲಾಗಿದೆ ನಂದಗಡ ಗ್ರಾಮದಲ್ಲಿ ಅತ್ಯಾಧುನಿಕ ತಂತ್ರದ್ಞಾನದ ಮ್ಯುಜಿಯಂ ಸ್ಥಾಪನೆಗೆ ೧೨.೩೦ ಎಕರೆ ಜಮೀನು ಪಡೆದುಕೊಳ್ಳಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇನೀಡಿದರು

ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಶಾಶ್ವತ ಪ್ರಾಧಿಕಾರ ಆಗಿದ್ದು, ಈ ಪ್ರಾಧಿಕಾರದ ವತಿಯಿಂದ ಸಂಗೊಳ್ಳಿ ಹಾಗೂ ನಂದಗಡ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳನ್ನು ಕೂಡ ಅಭಿವೃದ್ಧಿಪಡಿಸಲಾಗುವುದು ಗ್ರಾಮ ವಿಕಾಸ ಯೋಜನೆಯಲ್ಲಿ ಸಂಗೊಳ್ಳಿ ಗ್ರಾಮದ ಅಭಿವೃದ್ಧಿಗೆ ೭೫ ಲಕ್ಷ ನೀಡುವದಾಗಿ ಸಿಎಂ ಉತ್ಸವದಲ್ಲಿ ಘೋಷಣೆ ಮಾಡುವದರ ಜೊತೆಗೆ ಸಂಗೊಳ್ಳಿ ಬೇವಿನ ಕೊಪ್ಪ ಗ್ರಾಮದ ನಡುವೆ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು

ಕಿತ್ತೂರು ಸಂಸ್ಥಾನವನ್ನು ಬ್ರಿಟಿಷರಿಂದ ವಶಪಡಿಸಿಕೊಂಡು ಚನ್ನಮ್ಮನನ್ನು ರಾಣಿಯನ್ನಾಗಿ ಮಾಡುವುದೇ ರಾಯಣ್ಣನ ಹೋರಾಟ ಆಗಿತ್ತು. ಅದಕ್ಕಾಗಿಯೇ ತನ್ನ ಪ್ರಾಣ ಪಣಕ್ಕಿಟ್ಟು ಹೋರಾಡಿದ ರಾಯಣ್ಣನ ದೇಶಪ್ರೇಮ- ನಾಡಭಕ್ತಿ ನಮಗೆಲ್ಲ ಸ್ಫೂರ್ತಿಯಾಗಿದೆ-

ಬ್ರಿಟಿಷರು ಒಡೆದು ಆಳುವ ಮೂಲಕ ಎಲ್ಲ ಸಂಸ್ಥಾನಗಳನ್ನು ವಶಪಡಿಸಿಕೊಂಡರು. ಒಂದು ವೇಳೆ ನಮ್ಮವರ ಕುತಂತ್ರಕ್ಕೆ ಬಲಿಯಾಗದಿದ್ದರೆ ರಾಯಣ್ಣ ಕಿತ್ತೂರನ್ನು ಸ್ವತಂತ್ರಗೊಳಿಸಿ ಚನ್ನಮನನ್ನು ಮರು ಪ್ರತಿಷ್ಠಾಪನೆ ಮಾಡಿರುತ್ತಿದ್ದ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

 

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *