ಬೆಳಗಾವಿ- ಬೆಳಗಾವಿ ಲೋಕಸಭಾ ಉಪಚುನಾವಣೆ ಘೋಷಣೆ ಆಗಿಲ್ಲ ಆದ್ರೆ ಬಿಜೆಪಿ ಟಿಕೆಟ್ ಯಾರಿಗೆ ? ಎನ್ನುವ ಚರ್ಚೆ ಮಾತ್ರ ಜೋರಾಗಿ ನಡೆಯುತ್ತಿದೆ. ದಿನಕ್ಕೊಂದು ಚರ್ಚೆ,ಈ ಚರ್ಚೆಯಲ್ಲಿ ಹೊಸಹೊಸ ಹೆಸರುಗಳು ಪ್ರಸ್ತಾಪವಾಗುತ್ತಿವೆ.
ಬಿಜೆಪಿ ಸಿದ್ಧಾಂತವೇ ಬೇರೆ ಪಕ್ಷದ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದೆ ಎನ್ನುವ ಸುದ್ಧಿ,ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಸದ್ದು ಮಾಡಿದೆ.ಆ ಅಚ್ಚರಿಯ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ಚರ್ಚೆ ಈಗ ಶುರುವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡುವ ಅಭ್ಯರ್ಥಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರಬೇಕು,ಕನಿಷ್ಠ 20 ವರ್ಷಗಳ ಕಾಲ ಪಕ್ಷಕ್ಕಾಗಿ,ಪ್ರಾಮಾಣಿಕವಾಗಿ ಕೆಲಸ ಮಾಡಿರಬೇಕು,ಯಾವುದೇ ಹುದ್ದೆಗೆ ಆಸೆ ಪಡದೇ ಪಕ್ಷದ ಗೆಲುವಿಗೆ ಶ್ರಮಿಸಿರಬೇಕು,ಪಕ್ಕಾ ಹಿಂದುತ್ವವಾದಿ ಆಗಿರಬೇಕು,ಆರ್ ಎಸ್ ಎಸ್ ಸಂಘಟನೆಯಲ್ಲೂ ನಿರಂತರವಾಗಿ ಸೇವೆ ಮಾಡಿರಬೇಕು,ಅಂತಹ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಹುಡುಕಾಟ ನಡೆಸಿದ್ದು ಈ ಎಲ್ಲ ಮಾನದಂಡಗಳಿಗೆ ಬೆಳಗಾವಿಯ ಕ್ರೇಸ್ ವೈಸ್ ಟೇಲರ್ ಕೃಷ್ಣ ಭಟ್ ಅವರೇ ಫಿಟ್ ಆಗ್ತಾರೆ,ಅವರೇ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಕ್ಯಾಂಡಿಡೇಟ್ ಆಗ್ತಾರೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ಕೊಡಬೇಕು ಎನ್ನುವ ನಿರ್ಧಾರಕ್ಕೆ ಬಿಜೆಪಿ ಬಂದಿದ್ದು ಕಳೆದ ಎರಡೂವರೆ ದಶಕದಿಂದ ಬೆಳಗಾವಿಯಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘಟನೆಯಲ್ಲಿ ನಿರಂತರವಾಗಿ ಸೇವೆ ಮಾಡುತ್ತ ಬಂದಿರುವ ಕೃಷ್ಣ ಭಟ್ ಎಂದಿಗೂ ಯಾವುದೇ ಹುದ್ದೆಗೆ ಲಾಭಿ ಮಾಡಿಲ್ಲ,ಬಿಜೆಪಿ ಟಿಕೆಟ್ ನನಗೆ ಕೊಡಿ ಎಂದು ಯಾರ ಬಳಿಯೂ ಕೇಳಿಕೊಂಡಿಲ್ಲ,ಆರ್ ಎಸ್ ಎಸ್ ನಾಯಕರಿಗೆ ಅತೀ ಅಚ್ವುಮೆಚ್ಚಿನ ಕಾರ್ಯಕರ್ತನಾಗಿರುವ ಕೃಷ್ಣ ಭಟ್ ಬಿಜೆಪಿ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ ಅವರಿಗೆ ಟಿಕೆಟ್ ಕೊಡಿ ಎನ್ನುವ ಅಭಿಪ್ರಾಯ ಈಗ ಸಾಮಾನ್ಯವಾಗಿದೆ.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಚ್ಚರಿಯ ಅಭ್ಯರ್ಥಿ ಕೃಷ್ಣ ಭಟ್ ಆಗುವ ಎಲ್ಲ ಸಾಧ್ಯತೆಗಳು ಕಂಡುಬಂದಿವೆ.