ಬೆಳಗಾವಿ- ಮಹಾರಾಷ್ಟ್ರದ ಕೋಯ್ನಾ ಡ್ಯಾಂ ಸಾಮರ್ಥ್ಯ ಇರೋದು 105 TMC ಇವತ್ತು ಶನಿವಾರ ಮಧ್ಯಾಹ್ನದ ವರೆಗೆ ಈ ಡ್ಯಾಂ ನಲ್ಲಿ ಕೇವಲ 71 TMC ಮಾತ್ರ ಭರ್ತಿಯಾಗಿದೆ.ಹೀಗಾಗಿ ಕೃಷ್ಣಾ ನದಿಗೆ ಪ್ರವಾಹ ಬರುವ ಸಾಧ್ಯತೆ ತೀರಾ ಕಡಿಮೆ.
ಕೋಯ್ನಾ ಜಲಾಶಯ ಭರ್ತಿಯಾಗಲು ಇನ್ನೂ 34 TMC ನೀರು ಬೇಕು ,ಈ ಜಲಾಶಯ ತುಂಬಲು ಕೆಲವೇ TMC ನೀರು ಬೇಕಾಗಿರುವ ಸಂಧರ್ಭದಲ್ಲಿ ಈ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ.
ಈಗ ಸದ್ಯಕ್ಕೆ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ,ವೇರಣಾ ದೂದಗಂಗಾ ಸೇರಿದಂತೆ ಉಳಿದ ಯಪ ನದಿಗಳಿಂದ ಸುಮಾರು 1ಲಕ್ಷ 50 ಸಾವಿರ ಕ್ಯುಸೆಕ್ಸ ನೀರು ಮಾತ್ರ ಕೃಷ್ಣಾ ನದಿಗೆ ಹರಿದು ಬರುತ್ತಿದೆ.ಜೊತೆಗೆ ಅಲಮಟ್ಟಿ ಜಲಾಶಯದಿಂದ ಇವತ್ತು 2 ಲಕ್ಷ 20 ಸಾವಿರ ಕ್ಯುಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ.ಇವತ್ತಿನ ಅಪಡೇಟ್ ಪ್ರಕಾರ ಕೃಷ್ಣಾ ನದಿಯಲ್ಲಿ ಇನ್ ಪ್ಲೋ ಗಿಂತ ಔಟ್ ಫ್ಲೋ ಹೆಚ್ಚಾಗಿದ್ದು ಕೃಷ್ಣಾ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗುವದು ತೀರಾ ಕಡಿಮೆ.
ಕೋಯ್ನಾ ಜಲಾಶಯ ತುಂಬಬೇಕು,ಈ ಜಲಾಶಯದಿಂದ ಸುಮಾರು 1 ಲಕ್ಷ ಕ್ಯುಸೆಕ್ಸ ನೀರು ಬಿಡಬೇಕು,ಕೋಯ್ನಾ ಜಲಾಶಯ ಮತ್ತು ಕೃಷ್ಣಾ ನದಿಯ ಉಪನದಿಗಳ ಮುಖೇನ ಕೃಷ್ಣಾ ನದಿಗೆ ಪ್ರತಿದಿನ 2 ಲಕ್ಷ ಕ್ಯುಸೆಕ್ಸ್ ಗೂ ಹೆಚ್ಚು ನೀರು ಹರಿದು ಬಂದ್ರೆ ಮಾತ್ರ ಕೃಷ್ಣಾ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಸಾಧ್ಯ
ಈಗ ಸದ್ಯಕ್ಕೆ ಎಲ್ಲಿಯೂ ಕರ್ನಾಟಕ ಮುಳಗುತ್ತಿಲ್ಲ ಜನ ಭಯ ಪಡುವ ಅಗತ್ಯವಿಲ್ಲ.