ಬೆಳಗಾವಿ- ಪಕ್ಕದ ಮಹಾರಾಷ್ಡ್ರದಲ್ಲಿ ಮತ್ತು ಬೆಳಗಾವಿಯ ಗಡಿಯಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿರುವ ಕಾರಣ,ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ.
ಕೃಷ್ಣಾ, ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ.ನದಿಗಳುಪಾತ್ರ ಬಿಟ್ಟು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನದಿಯ ನೀರು ಪಕ್ಕದ ಗದ್ದೆಗಳಿಗೆ ನುಗ್ಗುತ್ತಿದೆ.ಕೃಷ್ಣಾ ನದಿಯ ಒಳಹರಿವು ಸಧ್ಯ 95 ಸಾವಿರ ಕ್ಯೂಸೆಕ್ಸ್ ಇಷ್ಟು ದಿನ 65 ಸಾವಿರ ಕ್ಯುಸೆಕ್ಸ್ ಇದ್ದ ಒಳ ಹರಿವು ಇವತ್ತು ದಿಢೀರ್ ಅಂತಾ ಮೂವತ್ತು ಸಾವಿರ ಹೆಚ್ಚಾಗಿದೆ.ನೀರಿನ ಮಟ್ಟ ಏರಿಕೆ ಹಿನ್ನೆಲೆ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 7 ಸೇತುವೆಗಳು ಜಲಾವೃತ ಆಗಿವೆ.
ದೂದಗಂಗಾ ನದಿಯ ಚಿಕ್ಕೋಡಿ ತಾಲೂಕಿನ ದತ್ತವಾಡ – ಮಲ್ಲಿಕವಾಡ, ನಿಪ್ಪಾಣಿ ತಾಲೂಕಿನ ಭೋಜ – ಕಾರದಗಾ, ಭೋಜವಾಡಿ – ಕುನ್ನೂರುವೇದಗಂಗಾ ನದಿಯ ನಿಪ್ಪಾಣಿ ತಾಲೂಕಿನ ಜತ್ರಾಟ – ಭೀವಶಿ,ಅಕ್ಕೋಳ – ಸಿದ್ನಾಳ,ಕೃಷ್ಣಾ ನದಿಯ ಚಿಕ್ಕೋಡಿ ತಾಲೂಕಿನ ಮಾಂಜರಿ – ಭಾವನ ಸೌಂದತ್ತಿ,ಹೀರಣ್ಯಕೇಶಿ ನದಿಯ ಹುಕ್ಕೇರಿ ತಾಲೂಕಿನ ಯರನಾಳ – ಮದಮಕ್ಕನಾಳ ಸೇತುವೆಗಳು ಸೇರಿದಂತೆ ಒಟ್ಟು 7 ಸೇತುವೆಗಳು ಜಲಾವೃತ ಆಗಿವೆ.
ಪರ್ಯಾಯ ಮಾರ್ಗಗಳ ಮೂಲಕ ಜನರ ಸಂಚಾರ ಶುರುವಾಗಿದೆ.ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಗ್ರಾಮ ದೇವತೆ ಬಂಗಾಲಿ ಬಾಬಾ ದೇವಸ್ಥಾನ ದೂದಗಂಗಾ ನದಿ ನೀರಿನಿಂದ ಜಲಾವೃತಗೊಂಡಿದೆ.ನದಿ ತೀರಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ.