ಬೆಳಗಾವಿ : ನಗರದಲ್ಲಿ ಅಳವಡಿಸಿದ ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕನ್ನಡ ಭಾಷೆಯನ್ನು ರಾಜ್ಯ,ಆಡಳಿತ ಭಾಷೆಯಾಗಿ ಪ್ರದಾನವಾಗಿ ಬಳಸಬೇಕೆಂದು ಸ್ಪಷ್ಟ ಆದೇಶವಿದ್ದರೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕೆಲ ಜಾಹೀರಾತು ಫಲಕಗಳು, ಹೋರ್ಡಿಂಗಗಳು, ಅಂಗಡಿ ಮುಗಟ್ಟುಗಳು, ಶಾಲಾ ಕಾಲೇಜು ಸೇರಿದಂತೆ ರಾಜಕಾರಣಿಗಳ ಶುಭಾಷಯ ಕಟೌಟಗಳಲ್ಲಿ ಕನ್ನಡವನ್ನು ಬಳಸದೆ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿವೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಎಲ್ಲ ಜಾಹೀರಾತು ಫಲಕಗಳು, ಹೋರ್ಡಿಂಗಗಳಲ್ಲಿ ಶೇ.75 ಪ್ರತಿಶತ ಕನ್ನಡ ಭಾಷೆಯಲ್ಲಿ ಬಳಸಬೇಕುಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಬಾಳು ಜಡಗಿ ದೇವೇಂದ್ರ ತಳವಾರ, ಗಜಾನನ ಶಿಂಗೆ, ಕರೆಪ್ಪ ಕೊಚ್ಚರಗಿ, ಲಗಮಣ್ಣಾ ಅಂಕಲಗಿ, ರಮೇಶ ತಳವಾರ, ಬಸವರಾಜ ಅವರೋಳ್ಳಿ, ನಿಂಗರಾಜ ಗುಂಡ್ಯಾಗೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.