ಮರಾಠಿ ಸಾಹಿತ್ಯ ಸಮ್ಮೇಳನಗಳ
ನೆಪದಲ್ಲಿ ಮರಾಠಿಗರಿಗೆ ಎಮ್ ಇ ಎಸ್
ಪ್ರಚೋದನೆಯ ವಿರುದ್ಧ ಸೋಮವಾರ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟಿಸಲಿವೆ.
ಬೆಳಗಾವಿ ಡಿಸಿ,ಎಸ್ಪಿ,ಪೋಲೀಸ್ಆಯುಕ್ತರಿಗೆ ಮನವಿ ಸಲ್ಲಿಸಿ ಬೆಳಗಾವಿಯಲ್ಲಿ ಎಂಈಎಸ್ ಮತ್ತು ಶಿವಸೇನೆಯ ಪುಂಡಾಟಿಕೆಗೆ ಲಗಾಮು ಹಾಕುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಿವೆ
ಬೆಳಗಾವಿ ಜಿಲ್ಲೆಯ ಬೆಳಗಾವಿ,ಖಾನಾಪುರ,ನಿಪ್ಪಾಣಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಗಡಿವಿವಾದವನ್ನು ಕೆದಕುವ,ಪ್ರಚೋದಿಸುವ ಚಟುವಟಿಕೆಗಳು ನಡೆದಿದ್ದು ಇವುಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಪರ ಸಂಘಟನೆಗಳು ಸೋಮವಾರ ದಿ.13 ರಂದು ಮಧ್ಯಾನ್ಹ 12 ಗಂಟೆಗೆ ರಾಜ್ಯ ಗೃಹ ಸಚಿವರಿಗೆ ಬೆಳಗಾವಿ ಜಿಲ್ಲಾಧಿಕಾರಿಗಳ,ಜಿಲ್ಲಾ ಪೋಲೀಸ್ ವರಿಷ್ಠರ ಮೂಲಕ ಮನವಿ ಸಲ್ಲಿಸಲಿವೆ.
ನಾಳೆ ಬೆಳಗಾವಿಯಲ್ಲಿ ನಡೆಯಲಿರುವ ಚಳುವಳಿಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕನ್ನಡದ ಸೇನಾನಿಗಳು ಸೇರುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಬೇಕಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ