ಬೆಳಗಾವಿ-ರಾಜ್ಯೋತ್ಸವದ ದಿನ ಕನ್ನಡಿಗರ ಪಾಲಿಗೆ ಹಬ್ಬ,ಆದ್ರೆ ಈ ದಿನ ಮಹಾರಾಷ್ಟ್ರ ಏಕೀಕರಣ ಸಮೀತಿ ಈ ದಿನ ಕಪ್ಪು ದಿನ ,ಕರಾಳ ದಿನವನ್ನಾಗಿ ಆಚರಿಸಲು ಅವರ ಜೊತೆ ಒಳ ಒಪ್ಪಂದವನ್ನು ಮಾಡಿಕೊಂಡಿರುವ ಸ್ಥಳೀಯ ರಾಜಕಾರಣಿಗಳೇ ಕಾರಣ ಎಂದು ಕರವೇ ರಾಜ್ಯ ಕರವೇ ಉಪಾಧ್ಯಕ್ಷ ಹೆಚ್ ಎಸ್ ಸೋಂಪೂರ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಎಂಈಎಸ್ ಅವರ ಕಿತಾಪತಿ ನೋಡಿ ನಮ್ಮ ತೆಲೆ ಕೆಟ್ಟು ಹೋಗಿದೆ,ಈ ಬಾರಿ ಎಂ ಈ ಎಸ್ ಬಾಲ ಬಿಚ್ವಿದ್ರೆ ಅದಕ್ಕೆ ತಕ್ಕ ಉತ್ತರ ಕೊಡಲು ಕರವೇ ಸೇನಾನಿಗಳು ಸನ್ನದ್ಧರಾಗಿದ್ದಾರೆ, ರಾಜ್ಯೋತ್ಸವದ ದಿನ,ಎಂಈಎಸ್ ಕರಾಳ ದಿನ ಆಚರಣೆ ಮಾಡಿದ್ರೆ ಅದಕ್ಕೆ ಪರ್ಯಾಯವಾಗಿ ಪೀರನವಾಡಿಯ ರಾಯಣ್ಣನ ಮೂರ್ತಿಯ ಸ್ಥಳದಿಂದ ಚನ್ನಮ್ಮನ ವೃತ್ತದ ವರೆಗೆ ಬೈಕ್ ರ್ಯಾಲಿ ನಡೆಸುತ್ತೇವೆ ,ನಮಗೆ ಅನುಮತಿ ಕೊಡದಿದ್ದರೆ ನಾವು ರ್ಯಾಲಿ ನಡೆಸುತ್ತೇವೆ.ಎಂದು ಹೆಚ್ ಎಂ ಸೋಂಪೂರ ಅವರು ತಿಳಿಸಿದ್ದಾರೆ.
ಈ ಬಾರಿ ಸರ್ಕಾರ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಮಾಡಲು ಅನುಮತಿ ಕೊಟ್ಟರೆ ಜೀವದ ಹಂಗು ತೊರೆದು ಅದನ್ನು ತಡೆಯುತ್ತೇವೆ,ಅದಕ್ಕೆ ಅನುಮತಿ ಕೊಟ್ಟ ಸರ್ಕಾರದ ವಿರುದ್ಧ ಸಮರ ಸಾರುತ್ತೇವೆ ಎಂದು ಸೋಂಪೂರ ಎಚ್ಚರಿಕೆ ನೀಡಿದ್ರು.
ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.