Breaking News

ಬೆಳಗಾವಿಗೆ ವಂದೇ ಮಾತರಂ ರೈಲು ತರಲು ಸಿಡಿದೆದ್ದ ಕರವೇ….!!

ಬೆಳಗಾವಿ- ಕೇಂದ್ರ ಸರ್ಕಾರದ ಯೋಜನೆಗಳು ಕೇವಲ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಿಗೆ ಸೀಮೀತವಾಗುತ್ತಿದ್ದು,ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ವಂದೇ ಮಾತರಂ ರೈಲನ್ನು ದಾರವಾಡದಿಂದ ಬೆಳಗಾವಿ ವರೆಗೂ ಓಡಿಸಲು ಕ್ರಮ ಕೈಗೊಳ್ಳಬೇಕೆಂದು ಕರವೇ ಒತ್ತಾಯಿಸಿ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದೆ.

ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತ್ರತ್ವದಲ್ಲಿ ಬೆಳಗಾವಿಯ ಚನ್ನಮ್ಮ ವೃತ್ತದಿಂದ ಜಿಲ್ಕಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದ ಯೋಜನೆಗಳ ಹಂಚಿಕೆಯಲ್ಲಿ ವಿಮಾನ,ಹಾಗು ರೈಲು ಸೇವೆಗಳ ವಿಚಾರದಲ್ಲಿ ಬೆಳಗಾವಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು ಇದಕ್ಕೆ ಬೆಳಗಾವಿ ಜಿಲ್ಲೆಯ ಇಬ್ಬರು ಸಂಸದರು ಹಾಗು ರಾಜ್ಯಸಭಾ ಸದಸ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕರವೇ ಆರೋಪಸಿದೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಅನೇಕ ವಿಮಾನ ಸೇವೆಗಳು ರದ್ದಾಗಿವೆ,ಈಗ ವಂದೇ ಮಾತರಂ ರೈಲು ಧಾರವಾಡ- ಹುಬ್ಬಳ್ಳಿ ನಗರಗಳ ಪಾಲಾಗಿದ್ದು ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಡಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವಿದ್ಯುತ್ ದರವನ್ನು ಹೆಚ್ಚಿಸಿ ರಾಜ್ಯದ ಬಡಜನರಿಗೆ ಮೋಸ ಮಾಡಿದೆ.ಅಂಗೈಯಲ್ಲಿ ಅರಮನೆ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಬಡವರ್ಗದವರನ್ನು ಸುಲಿಗೆ ಮಾಡುತ್ತಿದೆ.ಸರ್ಕಾರ ನುಡಿದಂತೆ ನಡೆಯಬೇಕು, ವಿದ್ಯುತ್ ದರ ಹೆಚ್ಚಳದ ನಿರ್ಧಾರ ವಾಪಸ್ ಪಡೆದು ರಾಜ್ಯದ ಎಲ್ಲ ಬಡ ಕುಟುಂಬಳಿಗೆ ಕೊಟ್ಟ ಮಾತಿನಂತೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ವಚನ ನಿಭಾಯಿಸಬೇಕು ಎಂದು ದೀಪಕ ಗುಡಗನಟ್ಟಿ ಅವರು ಒತ್ತಾಯಿಸಿದ್ದಾರೆ.

ವಂದೇ ಮಾತರಂ ರೈಲು ಬೆಳಗಾವಿಗೆ ಬರಬೇಕು,ವಿದ್ಯುತ್ ದರ ಹೆಚ್ಚಳ ಮಾಡುವ ನಿರ್ಧಾರ ವಾಪಸ್ ಪಡೆಯಬೇಕು ಎಂದು ಬೆಳಗಾವಿ ಜಿಲ್ಲೆಯ ಕರವೇ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದ್ದಾರೆ.

ಕರವೇ ರಾಜ್ಯ ಸಂಚಾಲಕ,ಮಹಾದೇವ ತಳವಾರ,ಸುರೇಶ್ ಗವಣ್ಣವರ,ಹೊಳೆಪ್ಪಾ ಸುಲದಾಳ,ಬಾಳು ಜಡಗಿ,ಗಣೇಶ್ ರೋಕಡೆ,ರಮೇಶ್ ಯರಗಣ್ಣವರ,ದಶರಥ ಬನೋಶಿ,ಕೃಷ್ಣಾ ಪಾಟೀಲ ( ಕಿಟ್ಟು) ಸೇರದಂತೆ ಹಲವಾರು ಜನ ಕರವೇ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *