Breaking News

ಬೆಳಗಾವಿ ಕರವೇ ಸಂಘಟನೆಯಲ್ಲಿ ಮೇಜರ್ ಸರ್ಜರಿ……!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ್ರ ಬಣ) ಸಂಘಟನೆಯನ್ನು ಜಿಲ್ಲೆಯಲ್ಲಿ ಇನ್ನಷ್ಡು ಬಲಿಷ್ಠ ಗೊಳಿಸಲು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಮೇಜರ್ ಸರ್ಜರಿ ಮಾಡಿದ್ದು ಹೊಸ ಪದಾಧಿಕಾರಿಗಳನ್ನು ನೇಮಿಸಿ ಸಂಘಟನೆಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹಲವು ಕರವೇ ತಾಲ್ಲೂಕು ಅಧ್ಯಕ್ಷರನ್ನು ಬದಲಾಯಿಸಿ ನೂತನ ಅಧ್ಯಕ್ಷರನ್ನು ನೇಮಿಸಿದ್ದು,ತಾಲ್ಲೂಕುಗಳಲ್ಲಿ ಕ್ರಿಯಾಶೀಲ ರಾಗಿರುವ ಕೆಲವು ಜನ ಹೋರಾಟಗಾರರಿಗೆ ಬೆಳಗಾವಿ ಜಿಲ್ಲಾ ಸಮೀತಿಯಲ್ಲಿ ಸ್ಥಾನ ನೀಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನೆಗೆ ಹೊಸ ಸ್ವರೂಪ ಕೊಟ್ಟಿದ್ದಾರೆ.

ರಾಮದುರ್ಗ ತಾಲ್ಲೂಕು ಅಧ್ಯಕ್ಷರನ್ನಾಗಿ ಕುಮಾರ್ ರಾಠೋಡ್, ಅಥಣಿ ತಾಲ್ಲೂಕಾ ಅಧ್ಯಕ್ಷರನ್ನಾಗಿ,ಶಬ್ಬೀರ ಸಾತಬಚ್ಚೆ,ಬೆಳಗಾವಿ ತಾಲ್ಲೂಕಾ ಅಧ್ಯಕ್ಷರನ್ನಾಗಿ ಸತೀಶ ಗುಡದವರ ಹಾಗೂ ಕಿತ್ತೂರು ತಾಲ್ಲೂಕು ಅಧ್ಯಕ್ಷರನ್ನಾಗಿ, ರುದ್ರಗೌಡ ಪಾಟೀಲ. ( ನಾವಲಗಟ್ಟಿ) ಅವರನ್ನು ನೇಮಕ ಮಾಡಲಾಗಿದೆ.

ಇತ್ತೀಚಿಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕರವೇ ಸಂಘಟನೆಯ ಸಭೆಯಲ್ಲಿ ಹೊಸ ಪಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಸಂಚಾಲಕರಾಗಿ ಲಗಮಣ್ಣಾ ಬಿ ಮಾಳಂಗಿ, ಸಲಾಂ ಖಲಿ.ಪ್ರಕಾಶ ಲಮಾಣಿ,ಸಿದರಾಯಿ ನಾಯಿಕ,ರೈತ ಘಟಕದ ಜಿಲ್ಲಾ ಸಂಚಾಲಕರಾಗಿ,ಲಿಂಗರಾಜ ಗೂಂಡ್ಯಾಗೋಳ,ಬೆಳಗಾವಿ ನಗರ ಅಧ್ಯಕ್ಷರನ್ನಾಗಿ,ವಾಸು ಬಸನಾಯಿಕ,ಬೆಳಗಾವಿ ನಗರ ಪ್ರಧಾನ ಕಾರ್ಯದರ್ಶಿಯಾಗಿ,ಅಭಿಷೇಕ ಅಗಸಗಿ,ಬೆಳಗಾವಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ,ಅರ್ಜುನ್ ಕಾಂಬಳೆ,ಬೆಳಗಾವಿ ತಾಲ್ಲೂಕು ಉಪಾಧ್ಯಕ್ಷರಾಗಿ,ಮಂಜುನಾಥ ರಾಠೋಡ್, ಬೆಳಗಾವಿ ನಗರ ಸಂಚಾಲಕರಾಗಿ,ಗಂಗಾರಾಮ್ ಶಿಗಿಹಳ್ಳಿ,ಅವರನ್ನು ನೇಮಿಸಲಾಗಿದೆ.

ಹೊಸ ಪಾಧಿಕಾರಿಗಳ ಆಯ್ಕೆ ಮಾಡಲಾದ ಕರವೇ ಜಿಲ್ಲಾ ಮಟ್ಟದ ಸಭೆಯಲ್ಲಿ ಕರವೇ ರಾಜ್ಯ ಸಂಚಾಲಕರಾದ ಮಹಾದೇವ ತಳವಾರ,ಸುರೇಶ್ ಗವಣ್ಣವರ,ಗಣೇಶ್ ರೋಕಡೆ,ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸೇರಿದಂತೆ ಕರವೇ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *