ಬೆಳಗಾವಿ- ಬೆಳಗಾವಿ ನಗರ ಹಾಗು ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರಿ ಧವಸ ಧಾನ್ಯಗಳ ಜತೆಗೆ ಚಹಾಪುಡಿ ಬೆಳೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡುವಂತೆ ನ್ಯಾಯ ಬೆಲೆ ಅಂಗಡಿಕಾರರು ಒತ್ತಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಚನ್ನಮ್ಮಾ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಕರವೇ ನ್ಯಾಯ ಬೆಲೆ ಅಂಗಡಿಕಾರರ ವಿರುದ್ದ ಘೋಷನೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ನ್ಯಾಯಬೆಲೆ ಅಂಗಡಿಗಳಲ್ಲಿ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ ಬೇರೆ ವಸ್ತುಗಳನ್ನು ಖರೀದಿಸಿರೇ ಮಾತ್ರ ಪಡಿತರ ನೀಡುತ್ತೇವೆ ಎಂದು ಅಂಗಡಿಕಾರರು ಒತ್ತಡ ಹೇರುತ್ತಿದ್ದಾರೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನಿಡಿದರು
ಗಣೇಶ ರೋಕಡೆ, ಸುರೇಶ ಗವನ್ನವರ ರಾಮಾ ವಣ್ಣೂರ ಶಾಂತಾ ಟಿಸಿ ಮೊದಲಾದವರು ಉಪಸ್ಥಿತರಿದ್ದರು
ಇನ್ನೊಂದು ಕಡೆ ನ್ಯಾಯ ಬೆಲೆ ಅಂಗಡಿಕಾರರು ಪ್ರಟಿಭಟನೆ ನಡೆಸಿದರು ಪಡಿತರ ಪಡೆಯಲು ಸರ್ಕಾರದಿಂದ ಕೂಪನ್ ಪದ್ಧತಿ ಜಾರಿ ವಿಚಾರ. ಸರ್ಕಾರದ ನಿರ್ಧಾರ ವಿರೋಧಿಸಿ ೧೫ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ರಾಜೀನಾಮೆ. ಅ.೨ ರ ವರೆಗೆ ಸರ್ಕಾರಕ್ಕೆ ಗಡವು. ನೀಡಿದ್ದಾರೆ ಸಾಮೂಹಿಕ ರಾಜೀನಾಮೆ ಬೇದರಿಕೆ. ಅಂಗಡಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ೧೦ ಸಾವಿರ ರೂಪಾಯಿ ಗೌರವ ಧನ ನೀಡಬೇಕು. ನ್ಯಾಯಬೆಲೆ ಅಂಗಡಿ ವಿದ್ಯುತ್ ಬಿಲ್ , ಬಾಡಿಗೆ ಸರ್ಕಾರದಿಂದ ನೀಡಲು ಆಗ್ರಹ. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …