ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಾವು ಬೇಕಾದ್ರೆ ಶಂಕರಾಚಾರ್ಯ ಶಿಷ್ಯರಿಗೆ, ಚೆನ್ನಮ್ಮಳ ಶಿಷ್ಯ ಇಲ್ಲವೇ ರಾಯಣ್ಣನ ಶಿಷ್ಯರಿಗೆ ಟಿಕೆಟ್ ನೀಡುತ್ತೇವೆ. ಆದರೆ ಮುಸ್ಲಿಂ ಸಮಾಜಕ್ಕೆ ಬೆಳಗಾವಿಯಲ್ಲಿ ನಾವು ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದರು.
ಕುರುಬ ಸಮಾಜದ ಯಾವೊಬ್ಬ ಸಂಸದ ಇಲ್ಲ ಎಂಬ ಪ್ರಶ್ನೆಗೆ ಕಾಂಗ್ರೆಸಿನವರು ಎಷ್ಟೋ ಜನರಿಗೆ ಟಿಕೆಟ್ ಕೊಟ್ರು. ಆದ್ರೆ ಒಬ್ಬರು ಗೆಲ್ಲಲಿಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಎಂಬುವುದನ್ನು ಪಕ್ಷ ತೀರ್ಮಾನಿಸಲಿದೆ. ಆದ್ರೆ ಮುಸ್ಲಿಂರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದರು.
ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಡಿ.ಕೆ.ಶಿವಕುಮಾರ್ ಹೇಳಿಕೆ ಮುಟ್ಟಾಳತನದ ಹೇಳಿಕೆ ಎಂದ ಕೆ.ಎಸ್.ಈಶ್ವರಪ್ಪ ಈ ರೀತಿ ಹೇಳಿಕೆ ಕೊಡೋಕೆ ಡಿ.ಕೆ.ಶಿವಕುಮಾರ್ ಗೆ ನಾಚಿಕೆ ಆಗಬೇಕು ಎಂದು ಈಶ್ವರಪ್ಪ ಆಕ್ರೋಶ ವ್ಯೆಕ್ತ ಪಡಿಸಿದರು.
ವಿಡಿಯೋ ಲೀಕ್ ಆಗಿದೆ ಅಂದ್ರೆ ಆ ವಿಡಿಯೋ ಇವರ ಹತ್ತಿರ ಇರಬೇಕಲ್ಲ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಇದ್ದು ಆರೋಪ ಮಾಡುವುದಕ್ಕೆ ಅವರಿಗೆ ಪೂರ್ಣ ಅಧಿಕಾರ ಇದೆ. ವಿಡಿಯೋ ಇದೆ ಅಂತಾ ಹೇಳುವುದು ರಾಜ್ಯದ ಜನರ ದಿಕ್ಕು ತಪ್ಪಿಸುವಂತಹದ್ದು.
ವಿಡಿಯೋ ಲೀಕ್ ಆಗಿದೆ ಎಂಬ ಕಾಪಿ ನಿಮ್ಮಲ್ಲಿದ್ದರೆ ಬಿಡುಗಡೆ ಮಾಡಲಿ. ಎನೇ ಅಪಾದನೇ ಮಾಡಬೇಕು ಅಂದ್ರೇ ಡಾಕ್ಯುಮೆಂಟ್ ಬೇಕು. ಎಂದು ಈಶ್ವರಪ್ಪ ಡಿಕೆಶಿ ವಿರುದ್ಧ ವಾಗ್ದಾಳಿ ಮಾಡಿದ್ರು.
ಕಾಂಗ್ರೆಸ್ ನೆಲ ಕಚ್ಚಿ ಹೋಗಿದ್ದು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಂಎಲ್‌ಎ ಯಾರು, ಎಂಎಲ್‌ಸಿ ಯಾರು, ಮಂತ್ರಿ ಯಾರು ಅಂತಾ ಹೇಳಲಿ.
ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡೋದನ್ನ ಉಗ್ರವಾಗಿ ಖಂಡನೆ ಮಾಡ್ತೀನಿ. ಆ ವಿಡಿಯೋ ಇದ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಲಿ.
ಆ ಎಂಎಲ್‌ಸಿ, ಮಂತ್ರಿ ಯಾರು ಅನ್ನೋದನ್ನಾದರೂ ಹೇಳಲಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ರು