ಬೆಳಗಾವಿ- ಬೆಳಗಾವಿಯಲ್ಲಿ,ವ್ಯಸನಮುಕ್ತ ಭಾರತ,ಡ್ರಗ್ಸ್ ಮುಕ್ತ ಭಾರತ,ಫಿಟ್ ಇಂಡಿಯಾ,ಕೊರೋನಾ ಮುಂಜಾಗೃತಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು,ಕೆ ಎಸ್ ಆರ್ ಪಿ ಪೋಲೀಸ್ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಗಾವಿಯಲ್ಲಿ ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿಯ ಚನ್ನಮ್ಮನ ವೃತ್ತದಲ್ಲಿ ಬೆಳಗಾವಿ ನಗರ ಪೋಲೀಸ್ ಆಯುಕ್ತರು,ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ,ರ್ಯಾಲಿಗೆ ಹಸಿರು ನಿಶಾನೆ ತೋರಿಸಿದರು,
ವಿವಿಧ ವಿಷಯಗಳ ಕುರಿತು ಜನಜಾಗೃತಿ ಮೂಡಿಸುವ ಸೈಕಲ್ ರ್ಯಾಲಿ ಯಲ್ಲಿ ಪೋಲೀಸ್ ಅಧಿಕಾರಿಗಳು ಗಣ್ಯರು ಭಾಗವಹಿಸಿದ್ದರು.
ರ್ಯಾಲಿ,ಉದ್ಯಮಭಾಗ ಪೀರನವಾಡಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವಿತಾಯು ಬಳಿ ಇರುವ ಕೆ ಎಸ್ ಆರ್ ಪಿ ಕಮಾಂಡೆಂಟ್ ಸೆಂಟರ್ ಬಳಿ ಮುಕ್ತಾಯವಾಯಿತು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ