ಬೆಳಗಾವಿ-ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಹೋರಾಟ ಜೋರಾಗಿಯೇ ನಡೆದಿದೆ.
ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಳನ್ನು ನಿಲ್ಲಿಸಿ ಹೋರಾಟ ಆರಂಭಿಸಿರುವ ಸಾರಿಗೆ ನೌಕರರು ಹೊಟ್ಟೆಯ ಮೇಲೆ ಕಲ್ಲಿಟ್ಟು,ಅರಬೆತ್ತಲೆಯಾಗಿ ಹೋರಾಟ ನಡೆಸಿದ್ದಾರೆ.
ಸಾರಿಗೆ ನೌಕರರು ನಡೆಸಿರುವ ಹೋರಾಟಕ್ಕೆ ವಿವಿಧ ರೈತಪರ ಸಂಘಟನೆಗಳು,ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಇಂದು ಬೆಳಿಗ್ಗೆಯಿಂದಲೇ ಪ್ರಯಾಣಿಕರು ಪರದಾಡುತ್ತಿದ್ದಾರೆ.ಬೆಳಗಾವಿ ನಗರ ಕರ್ನಾಟಕ,ಗೋವಾ,ಮಹಾರಾಷ್ಡ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿದ್ದು,ಬೆಳಗಾವಿಯಿಂದ ಗೋವಾ,ಮತ್ತು ಮಹಾರಾಷ್ಟ್ರಕ್ಕೆ ಹೋಗುವ ಪ್ರಯಾಣಿಕರು ಕಂಗಾಲಾಗಿದ್ದು,ದೂರದ ಊರುಗಳಿಗೆ ಹೋಗುವ ಪ್ರಯಾಣಿಕರ ಪರದಾಟ ಮುಂದುವರೆದಿದೆ,
ಇನ್ನೊಂದೆಡೆ ಸಾರಿಗೆ ನೌಕರರು ವಿನೂತನವಾಗಿ ಹೋರಾಟ ಮಾಡುತ್ತಿದ್ದಾರೆ, ಹೊಟ್ಟೆಯ ಮೇಲೆ ಕಲ್ಲು ಇಟ್ಟುಕೊಂಡು ಸರ್ಕಾರ ನಮ್ಮ ಹೊಟ್ಟೆಗೆ ಹೊಡೆಯುತ್ತಿದೆ ಎಂದು ಆಕ್ರೋಶ ವ್ಯೆಕ್ತಪಡಿಸಿದರೆ,ಬಸ್ ಕಂಡಕ್ಟರ್ ಗಳು ಪೀಪೀ (ಸೀಟಿ) ಊದಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಡಿ ಬಣದ ಬೆಳಗಾವಿ ಜಿಲ್ಲಾ ಅದ್ಯಕ್ಷ ರಣಗಟ್ಟಿಮಠ,ಸವದಿ ವಿರುದ್ಧ ಕಿಡಿಕಾರಿದ್ದು,ನೀಲಿ ಪ್ರೀಯ ಲಕ್ಷ್ಮಣ ಸವದಿಗೆ ದಿಕ್ಕಾರ ಎಂದು ಘೋಷಣೆ ಹಾಕುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆ ಬೆಳಗಾವಿಯಲ್ಲಿ ಸಾರಿಗೆ ನೌಕರರ ಖಾಕಿ ಹೋರಾಟದಲ್ಲಿ ನೀಲಿ ವಿರುದ್ಧ ಕಿಚ್ವು ಹೊರಬಂದಿದ್ದು ಸಾರಿಗೆ ನೌಕರರ ಹೋರಾಟ ಮುಂದುವರೆದಿದೆ.