ಡಿಸೆಂಬರ್ 9 ರ ನಂತರ ರಾಜ್ಯರಾಜಕಾರದಲ್ಲಿ ಮಹತ್ವದ ಬೆಳವಣಿಗೆ- ಕುಮಾರಸ್ವಾಮಿ
ಬೆಳಗಾವಿ
ಡಿಸೆಂಬರ್ ೯ ರ ನಂತರ ರಾಜ್ಯ ರಾಜಕೀಯ ದಲ್ಲಿ ಜೆಡಿ ಎಸ್ ಮತ್ತೆ ಕಿಂಗ್ ಮೇಕರ್ ಆಗಲಿದೆ
ಮತ್ತೊಮ್ಮೆ ರಾಜ್ಯದಲ್ಲಿ ಸಮಿಶ್ರ ಸರ್ಕಾರ ಬರಯವ ಸುಳಿವು ಬಿಟ್ಟುಕೊಟ್ಟದ್ದು ಮಾಜಿ ಸಿ ಎಂ ಕುಮಾರಸ್ವಾಮಿ
ಹಿರೇನಂದಿ ಗ್ರಾಮದಲ್ಲಿ ಅಶೋಕ ಪೂಜಾರಿಯವರ ಪರವಾಗಿ ಮತಯಾಚುಸಿ ಮಾದ್ಯಮಗಳ ಜೊತೆ
ಮಾತನಾಡಿದ ಅವರು
ಡಿಸೆಂಬರ್ ಒಂಬತ್ತರ ನಂತರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತವೆ,ಮುಂದಿನ ದಿನಗಳಲ್ಲಿ ಅಶೋಕ ಪೂಜಾರಿಯೂ ಮಂತ್ರಿಯಾಗುತ್ತಾರೆ ಎಂದರು
ಹಾಗಾದ್ರೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾರಾ ? ಎಂದು ಮಾದ್ಯಗಳ ಪ್ರಶ್ನೆಗೆ ಉತ್ತರಿಸಿದ ಅವರು
ರಾಜ್ಯದ ಜನ ಕಿಂಗ್ ಮೆಕರ್ ನಾನಲ್ಲಾ ಕಿಂಗ್ ಮೇಕರ್ ಎಂದರು
ಹಿರೇನಂದಿ ಗ್ರಾಮದಲ್ಲಿ ೧ಕೋಟಿ ೮೦ ಲಕ್ಷ ಇದೊಂದೆ ಗ್ರಾಮಕ್ಕೆ ಸಾಲಮನ್ನಾ ಆಗಿದೆ
ನಮ್ಮ ಅಭ್ಯರ್ಥಿ ದೊಡ್ಡ ಸಕ್ಕರೆ ಕಾರ್ಖಾನೆ ಕಟ್ಟಿ ಬಿಲ್ ಬಾಕಿ ಉಳಿಸಿಕೊಂಡಿಲ್ಲ, ಬಿಲ್ ಬಾಕಿ ಉಳಿಸಿಕೊಂಡು ಸಾಹುಕಾರ್ ಗಿರಿ ಮಾಡುತ್ತಿಲ್ಲ, ಹೆಸರು ಹೇಳದೆ ರಮೇಶ್ ಜಾರಕಿಹೊಳಿ ವಿರುದ್ದ ಹರಿಹಾಯ್ದರು ಕುಮಾರಸ್ವಾಮಿ,
ರೈತಪರವಾದ ಕಾರ್ಯಕ್ರಮ ಅನುಷ್ಠಾನಕ್ಕೆ ಕೈ ಜೋಡಿಸಿ ನಮ್ಮ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದ ಕುಮಾರಸ್ವಾಮಿ ಯಾವುದೇ ರೈತನ ಸಾಲ ಮನ್ನಾ ಈವರೆಗೆ ಆಗದೇ ಹೋಗಿದ್ದರೆ ಈಗಲೇ ಅಧಾರ್ ಕಾರ್ಡ ಕೊಡಿ ಹತ್ತು ನಿಮಿಷದಲ್ಲಿ ರಸಲ್ಟ ಹೇಳುತ್ತೇನೆ.ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಿರೇನಂದಿ ಗ್ರಾಮದಲ್ಲಿ ರೈತರ ಗಮನ ಸೆಳೆದರು
ಹಿರೇನಂದಿ ಗ್ರಾಮದ ನಂದೀಶ್ವರನ ದರ್ಶನ ಪಡೆದ ಕುಮಾರಸ್ವಾಮಿ ಗ್ರಾಮದಲ್ಲಿ ರೋಡ್ ಶೋ ನಡೆಸಿದರು.