ಬೆಳಗಾವಿ-
ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ರೈತರ ಬಗ್ಗೆ ಸರ್ಕಾರಕ್ಕೆ ಯಾವುದೇ ಆಸಕ್ತಿ ಇಲ್ಲ. ನಾಳೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ದೇಶದ ೫೩ ರೈತ ಸಂಘಟನೆಗಳ ಸಭೆ.ನಡೆಯಲಿದೆ ಎಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ ಹೇಳಿದ್ದಾರೆ
ರೈತ ಸಾಲ ಮನ್ನಾ, ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಆಗ್ರಹ. ಮಾಡಿರುವ ಅವರು ನಾಳೆ ಸಾಂಗಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ , ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ರೂಪರೇಷ ಸಿದ್ಧವಾಗಲಿದೆ ಎಂದು ಕುರುಬರ ಶಾಂತಕುಮಾರ ಹೇಳಿದರು
ರಾಜ್ಯದಲ್ಲಿ ಕಬ್ಬು ಬೆಳೆಯಲ್ಲಿ ಶೇ೫೦ ರಷ್ಟು ಇಳಿಮುಖವಾಗಿದೆ ತಕ್ಷಣ ಪ್ರತಿಟನ್ ಕಬ್ಬಿಗೆ ಎಫ್ ಆರ್ ಪಿ ಅನ್ವಯ ಬೆಲೆ ಹೆಚ್ಚಳಗೊಳಿಸಬೇಕು. ಕಬ್ಬು ಬೆಳೆಯುವ ರೈತರಿಗೆ ಉಚಿತ ಬೀಜ, ಬಡ್ಡಿ ರಹಿತ ಸಾಲ ನೀಡಬೇಕು.ಎಂದು ಶಾಂತಕುಮಾರ ಒತ್ತಾಯ ಮಾಡಿದರು
ಸರ್ಕಾರಿ ನೌಕರರಿಗೆ ವೇತನ ಆಯೋಗ ರಚನೆ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ಕೊಡಿಸುವ ಮನಸ್ಸು ಮಾಡುತ್ತಿಲ್ಲ ಎಂದು ಶಾಂತಕುಮಾರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದರು