ಬೆಳಗಾವಿ- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಕ್ಕೆ ನಿಂತಿರುವ ಅವರ ಸಹೋದರ ಹಾಗೂ ಲಖನ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಬಿಐ ತನಿಖೆ ಆದ್ರೆ,ಯಾರು ಎಲ್ಲಿ ಪ್ಯಾಂಟ್ ಬಿಚ್ವುತ್ತಾರೆ,ಲುಂಗಿ ಬಿಚ್ವುತ್ತಾರೆ ಗೊತ್ತಾಗಲಿದೆ.ಲಂಚ ಮಂಚ ಎಲ್ಲ ಹೊರಗೆ ಬರಲಿದೆ.ಎಂದು ಗುಡುಗಿದ್ದಾರೆ.
ಗೋಕಾಕಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಲಖನ್ ಜಾರಕಿಹೊಳಿ,ಕೆಪಿಸಿಸಿ ಅಂದ್ರೆ,ಕರ್ನಾಟಕ ಪ್ರದೇಶ್ ಸಿಡಿ ಕಮೀಟಿ ಎಂದು ವ್ಯಂಗ್ಯ ಮಾಡಿರುವ ಲಖನ್,ಬೆಳಗಾವಿ ಟು ಕನಕಪುರ.. ಸಿಡಿ ಫ್ಯಾಕ್ಟರಿ ಇರೋದು ಇಲ್ಲೇ ಎಂದು ಹೇಳಿದ್ದಾರೆ.
ಮಾರ್ಚ್ 3ನೇ ತಾರೀಖಿಗೆ ಎರಡು ವರ್ಷ ಆಯ್ತು, ಎಲ್ಲ ಷಡ್ಯಂತ್ರ ನಡೆದಿದೆ.2000ನೇ ಇಸವಿಯಿಂದ ಇದು ಇದೆ, ಸಿಬಿಐ ತನಿಖೆ ಒಂದೇ ಪರಿಹಾರ.ಪರಮೇಶ್ವರ, ಖರ್ಗೆ, ಸಿದ್ದರಾಮಯ್ಯ ಸಾಹೇಬರು ಇದ್ದಾಗ ಕಾಂಗ್ರೆಸ್ ಬೇರೆ ಇತ್ತು,ಸಿದ್ದರಾಮಯ್ಯ, ಖರ್ಗೆ ಸಾಹೇಬರು ನಮ್ಮ ಗುರುಗಳು ಅಂತಾ ಒಪ್ಪುತ್ತೇವೆ.ಎಂದು ಲಖನ್ ಹೇಳಿದ್ದಾರೆ.
ಈಗ ಸ್ಯಾಂಟ್ರೋ ರವಿ ಅಂತಾ ಏನು ತೋರಿಸುತ್ತಿದ್ದಾರಲ್ಲ,ಅಲ್ಟೋ 800 ಸ್ಟಾರ್ಟ್ ಆಗಿ ಬಿಎಂಡಬ್ಲ್ಯೂವರೆಗೂ ಇದೆ,ಕಾಂಗ್ರೆಸ್‌ನಲ್ಲಿ ಅವರ ಬಗ್ಗೆ ಯಾರೂ ಮಾತನಾಡಲ್ಲ,ಎಲ್ಲರ ಸಿಡಿ ಇವೆ,ನಮ್ಮ ಹೇಳಿಕೆ ಉಪೇಂದ್ರ ಎ ಫಿಲ್ಮ್ ಇದ್ದ ಹಾಗೇ ಅರ್ಥ ಆಗಲ್ಲ ಸ್ಟಡೀ ಮಾಡಬೇಕು.ನನ್ನ ಮಾತಿನಲ್ಲಿ ಓಪನ್ ಸಿಕ್ರೇಟ್ ಇದೆ ಎಂದು ಲಖನ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸಿಡಿ ಫ್ಯಾಕ್ಟರಿ ಸ್ಟಾರ್ಟ್ ಆಗಿ ಕನಕಪುರದಲ್ಲಿ ರಿಲೀಸ್ ಆಗಿದೆ.ಓಪನ್ ಆಗಿ ಹೇಳಿದ್ರೆ ನಾನು ಆ ಹೆಣ್ಣುಮಗಳು ಈ ಮಗಳು ಅಂತಾರೆ,ಒಂದು ವರ್ಷದಿಂದ ಸಿಬಿಐಗೆ ಕೊಡಬೇಕೆಂಬ ಒತ್ತಾಯ ಇದೆ.ಸಾಕಷ್ಟು ಜನ ಇದರಲ್ಲಿ ನೊಂದು ಬೆಂದು ಬೇಸತ್ತು ಹೋಗಿದ್ದಾರೆ.ನಮಗೆ ಜನ ಬೆಂಬಲ ಇದೆ, ಇಂತಹ ನೂರು ಸಿಡಿ ಬಂದರೂ ಹೆದರಲ್ಲ,ಒಂಟಿತೋಳ ಒಂಟಿತೋಳ ಅಂದ್ರು ಒಂಟಿತೋಳ ಏನ್ ಮಾಡಿತು,ಕಾಂಗ್ರೆಸ್ ಸರ್ಕಾರ ಬೀಳಲು ಬೆಳಗಾವಿಯವರೇ ಕಾರಣನಾವು ಸಿಂಪಲ್ ಆಗಿಯೇ ಇರ್ತೀವಿ, ಜನ ನಮ್ಮ ಜೊತೆ ಇರ್ತಾರೆ ಎಂದಿದ್ದಾರೆ ಲಖನ್…
ವಿಷಕನ್ಯೆ, ಮಟಾಷ್ ಲೆಗ್, ರಕ್ತ ಕಣ್ಣೀರು ಅಂತಾ ಜನ ಮಾತನಾಡ್ತಾರೆ,ಮಟಾಷ್ ಲೆಗ್ಅಂಆಯ್ತು,ಕುಮಾರಸ್ವಾಮಿ ಸರ್ಕಾರ ಹೋಯ್ತುಣ ಸಮ್ಮಿಶ್ರ ಸರ್ಕಾರ ಆಯ್ತುಆಮೇಲೆ ಇದ್ದಿದ್ದು ರಕ್ತ ಕಣ್ಣೀರು.ಎಂದು ಲಖನ್ ಡೈಲಾಗ್ ಹೊಡೆದಿದ್ದಾರೆ.