Breaking News

ಸವದಿ ಮಾಡಿದ್ರು ಬಸ್ ರೈಡ್….ಸಿಎಂ ಹೇಳಿದ್ರು ರೈಟ್…ರೈಟ್…!

*ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ: ಡಿ.ಸಿ.ಎಂ. ಸವದಿ ಪರಿಶೀಲನೆ*

*ಸಿ.ಎಂ. ಯಡಿಯೂರಪ್ಪ ಶ್ಲಾಘನೆ*

ಬೆಂಗಳೂರಿನ ಶಾಂತಿನಗರದ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಬೆಳಿಗ್ಗೆ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ ಕೈಗೊಂಡು ಈ ಬಸ್ಸಿನ ಕಾರ್ಯಕ್ಷಮತೆಯನ್ನು ಖುದ್ದಾಗಿ ಪರಿಶೀಲಿಸಿದರು. ವಿಧಾನಸೌಧಕ್ಕೆ ಈ ಬಸ್ಸು ತಲುಪಿದಾಗ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಈ ಬಸ್ಸನ್ನು ಪರಿಶೀಲಿಸಿ ನೂತನ ವ್ಯವಸ್ಥೆಯನ್ನು ಶ್ಲಾಘಿಸಿದರು.
ಬಿ.ಎಂ.ಟಿ.ಸಿ. ಅಧ್ಯಕ್ಷರಾದ ಶ್ರೀ ನಂದೀಶ್ ರೆಡ್ಡಿ ಹಾಗೂ ಬಿ.ಎಂ.ಟಿ.ಸಿ.ಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕೇಂದ್ರ ಸರ್ಕಾರವು ಫೇಮ್-2 ಯೋಜನೆ ಅಡಿಯಲ್ಲಿ ಪ್ರತಿ ಬಸ್ಸಿಗೆ ನೀಡುವ 55 ಲಕ್ಷ ರೂ. ಮತ್ತು ಕರ್ನಾಟಕ ಸರ್ಕಾರವು ನೀಡುವ ರೂ.33.33 ಲಕ್ಷ (ಪ್ರತಿ ಬಸ್ಸಿಗೆ) ಆರ್ಥಿಕ ಸಹಾಯವನ್ನು ಸಂಯೋಜಿಸಿಕೊಂಡು ಪ್ರತಿ ಬಸ್ಸಿಗೆ ರೂ.88.33 ಲಕ್ಷಗಳಂತೆ (ರೂ.55 ಲಕ್ಷ+ರೂ.33.33 ಲಕ್ಷ) ಪ್ರೋತ್ಸಾಹಧನದೊಂದಿಗೆ ಎಲೆಕ್ಟ್ರಿಕ್ ಬಸ್ಸುಗಳ ಸಂಚಾರವನ್ನು ಹಂತಹಂತವಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಣ ಸವದಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರಿನಲ್ಲಿ ವಿವಿಧ ಕಂಪನಿಗಳು ತಾವು ತಯಾರಿಸಿದ ಎಲೆಕ್ಟ್ರಿಕ್ ಬಸ್‍ಗಳನ್ನು ನಿಗದಿತ ಅವಧಿಗೆ ಪ್ರಾಯೋಗಿಕವಾಗಿ ಸಂಚಾರಕ್ಕೆ ಒದಗಿಸಲಿವೆ, ಇವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮುಂದೆ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನು ಅನುಮತಿ ನೀಡಲು ನಮ್ಮ ಸರ್ಕಾರ ಉದ್ದೇ ಶಿಸಿದೆ. ಎಲೆಕ್ಟ್ರಿಕ್ ಬಸ್‍ಗಳ ಬಳಕೆಯಿಂದ ಮಾಲಿನ್ಯದ ಪ್ರಮಾಣ ಕಡಿಮೆಯಾಗುವುದಲ್ಲದೇ ಸಾರಿಗೆ ಸಂಸ್ಥೆಗಳಿಗೆ ವೆಚ್ಚದಲ್ಲಿ ಉಳಿತಾಯವೂ ಸಾಧ್ಯವಾಗಲಿದೆ. ಅಷ್ಟೇಅಲ್ಲ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವುದಕ್ಕೂ ಸಾಧ್ಯವಾಗಲಿದೆ ಎಂದು ಶ್ರೀ ಸವದಿ ಅವರು ವಿವರಿಸಿದರು.

ಶ್ರೀ ಸವದಿ ಅವರು ಇಂದು ಪರಿಶೀಲಿಸಿದ ಮೆ|| ಓಲೆಕ್ಟಾ ಗ್ರೀನ್‍ಟೆಕ್ ಸಂಸ್ಥೆಯ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಬಸ್ಸಿನ ವಿವರಗಳು ಈ ಕೆಳಕಂಡಂತೆ ಇರುತ್ತದೆ.

ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ಸಿನ ಉದ್ದ 12 ಮೀಟರ್ ಇದ್ದು, ಫ್ಲೋರ್ ಎತ್ತರ 400ಮಿ.ಮೀ ಇರುತ್ತದೆ.

34+1 ಪ್ರಯಾಣಿಕರ ಆಸನಗಳನ್ನು ಹೊಂದಿರುತ್ತದೆ.

ಆಟೋಮ್ಯಾಟಿಕ್ ಗೇರ್ ವ್ಯವಸ್ಥೆಯಿದ್ದು, ಮುಂಬದಿ ಹಾಗೂ ಹಿಂಬದಿ ಡಿಸ್ಕ್ ಬ್ರೇಕ್ ಒಳಗೊಂಡಂತೆ ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಷ್‍ನ ಹೊಂದಿರುತ್ತದೆ.

ಒಂದು ಬಾರಿ ಚಾರ್ಜ್ ಮಾಡಿದಲ್ಲಿ 200-250 ಕಿ.ಮೀಗಳ ಹವಾ ನಿಯಂತ್ರಣದೊಂದಿಗೆ ಸಂಚಾರ ದಟ್ಟಣೆಯಲ್ಲಿ ಚಲಿಸುತ್ತದೆ ಹಾಗೂ ಮಧ್ಯದಲ್ಲಿ ಚಾರ್ಜಿಂಗ್ ವ್ಯವಸ್ಥೆಯನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ.

100-125 ಪ್ರಯಾಣಿಕರ ಸ್ಥಿರ ತೂಕದೊಂದಿಗೆ ಕಾರ್ಯಾಚರಣೆ ಮಾಡಬಹುದು

ಈ ಬಸ್ಸುಗಳಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರ ಅನುಕೂಲಕ್ಕಾಗಿ ನಿಲಿಂಗ್ ಮೆಕ್ಯಾನಿಸಂ ವೀಲ್ ಚೇರ್ ವ್ಯವಸ್ಥೆ ಅಳವಡಿಸಲಾಗಿರುತ್ತದೆ.

ಈ ಬಸ್ಸು ಕೇಂದ್ರ ಮೋಟಾರು ವಾಹನ ನಿಯಮಾನುಸಾರವಿದ್ದು, ಎಐಎಸ್052 ಮತ್ತು ಹೋಮೋಲೋಗೆಶನ್ ಆಗಿರುತ್ತದೆ.

ಬಸ್ಸಿನಲ್ಲಿ ಇದಲ್ಲದೇ ಬೇರೆ ವಿನ್ಯಾಸಗಳಾದ ಮೊಬೈಲ್ ಚಾರ್ಜ್‍ಗಾಗಿ ಯುಎಸ್‍ಬಿ ಚಾರ್ಜರ್ ವ್ಯವಸ್ಥೆ, ಎಮೆರ್ಜೆನ್ಸಿ ಅಲಾರ್ಮ್, ನಿಲುಗಡೆ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗಾಜು ಒಡೆಯಲು ಸುತ್ತಿಗೆ, ಸುರಕ್ಷತೆಗಾಗಿ ತುರ್ತು ನಿರ್ಗಮನ ವ್ಯವಸ್ಥೆಯನ್ನು ಒದಗಿಸಲಾಗಿರುತ್ತದೆ.

ಟ್ರ್ಯಾಕಷನ್ ಬ್ಯಾಟರಿಯು ಕೂಲೆಂಟ್ ಮೆಕಾನಿಸಂ ಹೊಂದಿರುವ ಲಿ-ಆಯನ್‍ದಾಗಿದ್ದು, ಇದು ಬ್ಯಾಟರಿಯ ತಾಪಮಾನ ನಿಯಂತ್ರಿಸಿ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ.

ಬಸ್ ತಯಾರಿಕ ಕಂಪನಿಯವರು ತಿಳಿಸಿರುವಂತೆ, ಸದರಿ ಬಸ್ ಪ್ರತಿ ಕಿಮೀ ಆಚರಣೆಗೆ 1.2 ರಿಂದ 1.4 KWH ವಿದ್ಯುತ್‍ಶಕ್ತಿ ಬಳಕೆಯಾಗುತ್ತದೆ.

ಸುಮಾರು 2 ರಿಂದ 3 ಗಂಟೆಯಲ್ಲಿ ಫಾಸ್ಟ್ ಚಾರ್ಜಿಂಗ್‍ನೊಂದಿಗೆ ಬಸ್ಸನ್ನು ಚಾರ್ಜ್ ಮಾಡಬಹುದು.

 

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *