Breaking News

ಅರವಿಂದ್ ಪಾಟೀಲ ಬಿಜೆಪಿಗೆ,ಸಿಎಂ ಸಹಮತ- ಡಿಸಿಎಂ ಸವದಿ

ಬೆಳಗಾವಿ-ಡಿಸಿಸಿ ಬ್ಯಾಂಕ್ ಚುನಾವಣೆ ಇಂದು ನಡೆಯುತ್ತಿದೆ. 16 ನಿರ್ದೇಶಕ ಸ್ಥಾನದ ಪೈಕಿ ಈಗಾಗಲೇ 13ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ.
ಮೂರು ಕ್ಷೇತ್ರದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ.
ಖಾನಾಪುರ ಕ್ಷೇತ್ರದಲ್ಲಿ ಎನೂ ಕುತೂಹಲ ಇಲ್ಲ ಮತದಾರರು ಜಾನರಿದ್ದಾರೆ. ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಡಿಸಿಸಿ ಬ್ಯಾಂಕ್ ಚುನಾವಣೆಯ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಖಾನಾಪುರ ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರು ಸ್ಪರ್ಧೆ, ಮಾಜಿ ಶಾಸಕ ಅರವಿಂದ್ ಪಾಟೀಲ್ ಕೂಡ ಸ್ಪರ್ಧೆ ಮಾಡಿದ್ದಾರೆ.
ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ಶಕ್ತಿ ತುಂಬುವ ಬ್ಯಾಂಕ್.
ನಾನು ಮೂವತ್ತು ವರ್ಷದಿಂದ ನಿರಂತರವಾಗಿ ನಿರ್ದೇಶಕನಾಗಿದ್ದೇನೆ  ಎಂಇಎಸ್ ನ ಅರವಿಂದ್ ಪಾಟೀಲ್ ಗೆ ಬಿಜೆಪಿ ಬೆಂಬಲ ವಿಚಾರ.
ಅರವಿಂದ್ ಪಾಟೀಲ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.ಕೆಲವೇ ದಿನಗಳಲ್ಲಿ ಅರವಿಂದ್ ಪಾಟೀಲ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಡಿಸಿಎಂ ಸವದಿ ಹೇಳಿದರು.

ಈಗಾಗಲೇ ಒಂದು ಬಾರಿ ಅರವಿಂದ್ ಪಾಟೀಲ್ ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದಾರೆ.
ಸಿಎಂ ಯಡಿಯೂರಪ್ಪ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.ಎಂದರು ಲಕ್ಷ್ಮಣ ಸವದಿ.

ಸಚಿವ ಸಂಪುಟ ವಿಸ್ತರಣೆ ವಿಚಾರ.
ರಾಜ್ಯದಲ್ಲಿನ ಚುನಾವಣೆ ಫಲಿತಾಂಶ ಮತ್ತು ಬಿಹಾರ ಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆ.
ದೆಹಲಿಗೆ ತೆರಳಿ ವರಿಷ್ಠರ ಗಮನಕ್ಕೆ ತಂದು ಸಂಪುಟ ವಿಸ್ತರಣೆ ಮಾಡುತ್ತೇವೆ ಅಂತಾ ಸಿಎಂ ಹೇಳಿದ್ದಾರೆ.
ಬಸವಕಲ್ಯಾಣ ಕ್ಷೇತ್ರದಿಂದ ಸಿಎಂ ಪುತ್ರ ವಿಜಯ್ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ. ನನಗೆ ಆ ವಿಚಾರದ ಕುರಿತು ನಿಖರವಾದ ಮಾಹಿತಿ ಇಲ್ಲ.
ಸಿಎಂ ಯಡಿಯೂರಪ್ಪ ಆದಷ್ಟು ಬೇಗ ಬದಲಾವಣೆ ಆಗ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ. ಸಿದ್ದರಾಮಯ್ಯ ಅವರ ಹೇಳಿಕೆ ರಾಜಕೀಯ ಹೇಳಿಕೆ. ಉಪಚುನಾವಣೆಯಲ್ಲಿ ಜನರಿಗೆ ಗೊಂದಲ ಉಂಟುಮಾಡಲು ಹೇಳಿದ ಮಾತು.
ವಿರೋಧ ಪಕ್ಷ ಸ್ಥಾನದಿಂದ ಸಿದ್ದರಾಮಯ್ಯ ತೆಗೆಯುವ ಹುನ್ನಾರ ನಡೆದಿದೆ ಅಂತಾ‌. ಯಡಿಯೂರಪ್ಪ ಅವರಿಗೂ ಖಚಿತ ಮಾಹಿತಿ ಸಿಕ್ಕಿದೆ ಅಂತಾ ಹೇಳಿದ್ದಾರೆ.
ಈ ಅವಧಿ ಮುಗಿಯುವವರೆಗೂ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ.ಎಂದು ಲಕ್ಷ್ಮಣ ಸವದಿ ಹೇಳಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *