ಬೆಳಗಾವಿ-ಲಕ್ಷ್ಮಣ ಸವದಿಗೆ ಸಿಎಂ ಆಗುವಂತೆ ಜೈನ ಮುನಿಗಳು ಆಶೀರ್ವಾದ ಮಾಡಿದ್ದಾರೆ.ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಜೈನ್ ಮುನಿಗಳಿಂದ ಆಶೀರ್ವಾದ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತ್ ವೈರಲ್ ಆಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದ ಪಂಚಕಲ್ಯಾಣ ಮಹೋತ್ಸವದಲ್ಲಿ ಜೈನ ಮುನಿಗಳು ಆಶೀರ್ವಾದ ಮಾಡಿದ್ದಾರೆ.ಪೂಜ್ಯ ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರಿಂದ ಲಕ್ಷ್ಮಣ ಸವದಿ ಆಶೀರ್ವಾದ ಪಡೆದಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಯಾರು ಸಿಎಂ ಆಗಿಲ್ಲ,ನೀವು ಮುಂದೆ ಸಿಎಂ ಆಗಿ ಎಂದು ಆಶೀರ್ವದಿಸಿದ ಜೈನ ಮುನಿಗಳು,ಸಿಎಂ ಆಗುವಂತೆ ಆಶೀರ್ವಾದ ಮಾಡುತ್ತಿದ್ದಂತೆ ತಲೆಬಾಗಿ ನಮಸ್ಕರಿಸಿದ ಸವದಿ ಮುನಿಗಳ ಆಶೀರ್ವಾದ ಪಡೆದಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ