ಬೆಳಗಾವಿ-ಯಾರ ಬಗ್ಗೆಯೂ ನಾನು ಕಮೆಂಟ್ ಮಾಡುವುದಿಲ್ಲಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿ, ನಂತರ ಹೇಳುತ್ತೇನೆ
ಇದೇ ತಿಂಗಳು 13 ರಂದು ಕ್ಷೇತ್ರದ ಸಭೆ ಕರೆದು ತೀರ್ಮಾನಿಸುತ್ತೇನೆ. ಜನರು ತೆಲೆಂದರೆ ತೇಲುತ್ತೇನೆ ಮುಳುಗಿ ಎಂದರೆ ಮುಳುಗುತ್ತೇನೆ, ಜನರು ಮನೆಯಲ್ಲಿ ಇರು ಎಂದರೆ ಇರುತ್ತೇನೆ.ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಅಥಣಿಯ ತಮ್ಮ ನಿವಾಸದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಜನರು ನನಗೆ ಸ್ಪರ್ಧೆ ಮಾಡೆಂದರೆ ಮಾಡುತ್ತೇನೆ.ಹತ್ತು ವರ್ಷಗಳಿಂದ ಜನರಿಗೆ ನಾ ಹೇಳಿದಂತೆ ಕೇಳಿದ್ದಾರೆಆದರೆ ಈಗ ಜನರು ಹೇಳಿದಂತೆ ನಾನು ಕೇಳಬೇಕಾಗಿದೆ.ಈ ಬಾರಿ ನಾನು ಜನತಾ ನ್ಯಾಯಾಲಯದಲ್ಲಿ ಹೋಗುತ್ತೇನೆ ಜನರು ಹೀಗೆ ಹೇಳುತ್ತಾರೋ ಹಾಗೆ ಮಾಡುತ್ತೇನೆ.ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಿಎಂ ನನ್ನ ಜೊತೆ ಮಾತನಾಡುತ್ತೇನೆ ಎಂದು ದೆಹಲಿಯಲ್ಲಿ ಹೇಳಿದ್ದಾರೆ ಅವರು ನನ್ನ ಸಂಪರ್ಕಿಸಿದ ನಂತರ ನನ್ನ ತೀರ್ಮಾನವನ್ನು ಮಾಡುತ್ತೇನೆ.ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ ಒಂದು ಮಹೇಶ್ ಕುಮ್ಟಳಿಗೂ ಕೊಡಬೇಕು ಇಲ್ಲ ಅಂದ್ರೆ ನನಗೆ ಕೊಡಬೇಕು ಇಲ್ಲವೆಂದರೆ ಮೂರನೇ ವ್ಯಕ್ತಿಗೆ ಕೊಡಬೇಕು.ಕ್ಷೇತ್ರದ ಜನರನ್ನು ಕೇಳುತ್ತೇನೆ ನಾನು ಬೇಕು ಇನ್ಯಾರಾದರೂ ಬೇಕು. ಅಂತಿಮವಾಗಿ ಜನರ ನಿರ್ಧಾರವೇ ಅಂತಿಮವಾಗಿರುತ್ತದೆ.ನನಗೆ ಹೈಕಮಾಂಡ್ ನಿಂದ ಯಾವುದೇ ಕರೆ ಬಂದಿಲ್ಲ ಮತ್ತು ಯಾವುದೇ ಸಂದೇಶವನ್ನು ಬಂದಿಲ್ಲ
ಮೊದಲು ಟೆಲಿಗ್ರಾಂ ಬರುತ್ತಿದ್ದವು, ಇನ್ನು ಯಾವುದು ಬಂದಿಲ್ಲ.ಕಾಂಗ್ರೆಸ್ ಸೇರ್ಪಡೆ ಆಗುತ್ತೀರಿ ಎನ್ನುವ ವಿಚಾರಕ್ಕೆ ಮುಂಗಾರು ಮಳೆ ಯಾವಾಗ ಬರುತ್ತೆ ಅನ್ನುವುದು ಗೊತ್ತಿಲ್ಲ.ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ