Breaking News

ಮುಂದೆ ಕಾಲ ಇದೆ ನಾವು ಇರ್ತಿವಿ ನೀವು ಇರ್ತಿರಿ….!!

ಬೆಳಗಾವಿ-ಈಗ ಬೆಳಗಾವಿಯಲ್ಲಿ ಫ್ಲಾಯಿಂಗ್ ಸೀಝನ್ ನಡೆಯುತ್ತಿದೆ. ಈ ಸೀಝನ್ ದಲ್ಲಿ ಯಾವ ಹಕ್ಕಿ ವಲಸೆ ಬರುತ್ತಿದೆ ಯಾವುದು ವಲಸೆ ಹೋಗುತ್ತಿದೆ ಎಂದು ಗುರುತಿಸುವದು ಬಹು ಕಷ್ಟ ಯಾಕಂದ್ರೆ ಇಲ್ಲಿ ಎಲ್ಲ ಹಕ್ಕಿಗಳ ಧ್ವನಿ ಒಂದೇ ಸ್ವರದಲ್ಲಿ ಕೇಳಿಸುತ್ತಿದೆ ಸ್ವರದಲ್ಲಿ ಅಪಸ್ವರ ಕೇಳಿದಾಗ ಮಾತ್ರ ಜನರಿಗೆ ಸತ್ಯ ಗೋತ್ತಾಗತೈತಿ……

ಇಂದು ಸೋಮವಾರ ಬಸವಣ್ಣನ ವಾರ,ಹೀಗಾಗಿ ಬೆಳಗಾವಿಯಲ್ಲಿ ರಾಜಕೀಯ ನಾಯಕರ ಕೂಡಲ ಸಂಗಮ ಗೋಚರವಾಯಿತು.ಸೋಮವಾರ ಬೆಳಗಾವಿ ಡಿಸಿಸಿ ಬ್ಯಾಂಕ್ ಮೀಟೀಂಗ್ ಇತ್ತು ಮೀಟೀಂಗ್ ಶುರುವಾಗುವ ಮುನ್ನ ಬೆಳಗಾವಿ ಸದಾಶಿವ ನಗರದಲ್ಲಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಮನೆಯಲ್ಲಿ ನಾಯಕರು ಸವದಿ ಸಾಹುಕಾರ್ ಜೊತೆ ಲಂಚ್ ಪೇ ಚರ್ಚಾ ಮಾಡಿ ನಂತರ ಒಂದೇ ಕಾರಿನಲ್ಲಿ ಡಿಸಿಸಿ ಬ್ಯಾಂಕಿಗೆ ಬಂದು ಮೀಟಿಂಗ್ ಮಾಡಿದ್ದು ವಿಶೇಷ ಸವದಿ ಅವರ ಜೊತೆ ರಮೇಶ್ ಕತ್ತಿ,ಅಣ್ಣಾಸಾಹೇಬ್ ಜೊಲ್ಲೆ,ಮಹಾಂತೇಶ್ ದೊಡ್ಡಗೌಡ್ರ ಸೇರಿದಂತೆ ಹಲವಾರು ಜನ ನಾಯಕರು ಸವದಿ ಅವರ ಜೊತೆ ಇದ್ರು.

ಡಿಸಿಸಿ ಬ್ಯಾಂಕ್ ಮೀಟೀಂಗ್ ಎಲ್ಲ ನಿರ್ದೇಶಕರ ಮಂಡಳಿ ಹಾಜರಾಗಿತ್ತು.ಆದ್ರೆ ನಿರ್ದೇಶಕರಾಗಿರುವ ಸವದಿ ಅವರ ಜೊತೆ ಬಿಜೆಪಿ ನಾಯಕರು ಒಟ್ಟಿಗೆ ಲಂಚ್ ಮಾಡಿದ್ದು ಒಟ್ಟಿಗೆ ಒಂದೇ ಕಾರಿನಲ್ಲಿ ಬ್ಯಾಂಕಿಗೆ ಬಂದಿಳಿದ ಚಿತ್ರಣ ಎಲ್ಲರ ಗಮನ ಸೆಳೆಯಿತು.

ಬ್ಯಾಂಕಿನ ಮೀಟೀಂಗ್ ಶುರುವಾಗುವ ಮುನ್ನ ಲಕ್ಷ್ಮಣ ಸವದಿ ಮಾದ್ಯಮಗಳ ಜೊತೆ ಮಾತನಾಡಿದರು.ಬೋರ್ಡ್ ಮೀಟಿಂಗ್ ಮಾಡುವ ಸಲುವಾಗಿ ಬಂದಿದ್ದೆವೆ. ವಿಶೇಷ ಎನೂ ಇಲ್ಲ ಎಲ್ಲರೂ ಸೇರಿ ಮೀಟಿಂಗ್ ಮಾಡ್ತಿವಿ ಎಂದ ಅವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಚುನಾವಣೆ ಒಳಗೆ ಕೆಳಗಿಳಿಸುತ್ತಿರಾ ಎಂಬ ಪ್ರಶ್ನೆಗೆ ಅದೆಲ್ಲವೂ ಸಹ ಊಹಾಓಪೋಹ. ಯಾವ ಟೀಂ ಇಲ್ಲ, ರಮೇಶ ಕತ್ತಿ ಇರಲಿ ನಾನಿರಲಿ ಪಕ್ಷಾತೀತವಾಗಿಯೇ ನಡೆದುಕೊಂಡು ಬಂದಿದ್ದೆವೆ. ಒಂದುವರೆ ವರ್ಷದಲ್ಲಿ ಚುನಾವಣೆ ಬರುತ್ತೆ ಎಂದರು.

ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಅಂತಹ ಯಾವುದೇ ಬೆಳಗವಣಿಗೆ ಪ್ರಸ್ತಾವಣೆ ನನ್ನ ಮುಂದೆ ಈವರೆಗೂ ಬಂದಿಲ್ಲ. ನನ್ನ ಮುಂದೆ ಅಂತಹ ಪ್ರಶ್ನೆಯೇ ಬಂದಿಲ್ಲ ಎಂದರು.

ಸವದಿಯವರನ್ನು ಬಿಜೆಪಿಗೆ ಕರೆತರಲು ಒಂದು ಟೀಂ ರೆಡಿಯಾಗಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಎಲ್ಲ ಸಹಜವಾಗಿ ನಡೆಯುವಂತದ್ದು ಅವರು ಟೀಂ ಮಾಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ಚಿನ್ಹೆಯ ಮೇಲೆ ಆಯ್ಕೆಯಾಗಿದ್ದೆನೆ. ಕಾಂಗ್ರೆಸ್ ಪಕ್ಷದ ಶಾಸಕನಾಗಿ ಕೆಲಸ ಮಾಡ್ತಿದ್ದಿನಿ. ಅಂತಹ ಪ್ರಶ್ನೆ ನನ್ನ ಮುಂದೆ ಇಲ್ಲ. ಇನ್ನು ನಾನಾಗಲಿ ನನ್ನ ಮಗನಾಗಲಿ ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ಅದಕ್ಕಾಗಿ ನಾನಾಗಲಿ ನನ್ನ ಮಗನಾಗಲಿ ಅರ್ಜಿಯನ್ನೂ ಸಹ ಹಾಕಿಲ್ಲ ಎಂದರು.

ಲಕ್ಷ್ಮಣ ಸವದಿ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಂಡು ನಂತರ ಮಾತಾಡ್ತಿನಿ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ನನ್ನ ಮನಸಿನಲ್ಲಿ ಏನಿದೆ ಎಂದು ಯಾರಿಗೂ ತಿಳಿದುಕೊಳ್ಳಲು ಆಗಲ್ಲ. ಅದು ನನಗೆ ಮತ್ತು ಆ ಭಗವಂತನಿಗೆ ಮಾತ್ರ ಗೊತ್ತು ಎಂದರು.

ಇನ್ನು ಬಿ.ಎಲ್‌. ಸಂತೋಷ ಅವರು ನಿಮ್ಮನ್ನ ಸಂಪರ್ಕ ಮಾಡೋಕೆ ಪ್ರಯತ್ನ ಮಾಡಿದ್ದಾರಾ ಎಂಬುದಕ್ಕೆ ಅವರ್ಯಾರು ನನ್ನ ಸಂಪರ್ಕ ಮಾಡಿಲ್ಲ ಈಗ ಆ ಪ್ರಶ್ನೆ ಉದ್ಭವಿಸಲ್ಲ. ಅವರಿಗೆ ಅವಶ್ಯಕತೆ ಅನಿವಾರ್ಯ ಇದ್ದಾಗ ಸ್ವಾಭಾವಿಕವಾಗಿ ಕೇಳ್ತಾರೆ. ಆದರೆ ತೀರ್ಮಾಣ ಮಾಡೋದು ನಾನು ಅಲ್ವೆ ಎಂದು ಪ್ರಶ್ನಿಸಿದರು.

ಸಿಎಂ ಅವರು ನಮ್ಮನೆಯ ಯಜಮಾನ‌ ಇದ್ದಹಾಗೆ ಅವರು ನನ್ನ ಜೊತೆ ಮಾತನಾಡೋದು ಎನು ತಪ್ಪಾ ಎಂದು ಪ್ರಶ್ನಿಸಿದ ಲಕ್ಷ್ಮಣ ಸವದಿ ನಾನು ಪಕ್ಷ ಬಿಡ್ತಿನಿ ಎಂದಾದರೆ ಅವರು ಎನಾದ್ರು ಹೇಳೊಕೆ ಸಾಧ್ಯ ಎಂದರು. ಇನ್ನು ಇತ್ತಿಚೆಗೆ ಡಿಕೆಶಿ ಭೇಟಿ ಮಾಡಿ ಮಾತುಕತೆ ಮಾಡಿದ್ದಕ್ಕೆ ನಮ್ಮ ಕ್ಷೇತ್ರದಲ್ಲಿ ಒಂದು ನೀರಾವರಿ ಯೋಜನೆ ಮಂಜೂರಾಗಿದೆ. ಅದರ ಟೆಂಡರ್ ಪ್ರಕ್ರಿಯೆ ಆಗಿದೆ ಅದನ್ನು ಭೂಮಿ ಪೂಜೆ ಮಾಡಿ ಚಾಲನೆ ನೀಡಿ ಎಂದು ಹೇಳೊಕೆ ಹೋಗಿದ್ದೆ. ಹೀಗಾಗಿ ಡಿಕೆಶಿಗೆ ಭೇಟಿಯಾಗಿ ಮಾತಾಡಿದ್ದೆನೆ ಅಷ್ಟೇ ಎಂದರು.

ಲಕ್ಷ್ಮಣ ಸವದಿ, ಅಲ್ಲಿ ಡಿಸಿಎಂ ಆಗಿದ್ರು ಇಲ್ಲೂ ಸಹ ಡಿಸಿಎಂ ಆಗ್ತಿರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ನೋಡೊಣ ಮುಂದೆ ಕಾಲ ಇದೆ ನಾವು ಇರ್ತಿವಿ ನೀವು ಇರ್ತಿರಿ ಎಂದರು.

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *