Breaking News

ಮೀಸಲಾತಿಗಾಗಿ ಹೆಬ್ಬಾಳಕರ್ ಮನೆಯಲ್ಲಿ ಆಗ್ರಹ ಪತ್ರ…

ಬೆಳಗಾವಿ ಕೂಡಲಸಂಗಮ ಮಹಾಪೀಠದ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ನಡೆಯುತ್ತಿರುವ ಶಾಸಕರುಗಳ ಮನೆಯಲ್ಲಿ ಪಂಚಮಸಾಲಿ ಆಗ್ರಹ ಪತ್ರ ಚಳುವಳಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಳೆಗಾಲದ ಅಧಿವೇಶನದಲ್ಲಿ ಮೀಸಲಾತಿ ಹಕ್ಕನ್ನು ಸರ್ಕಾರಕ್ಕೆ ಪ್ರತಿಪಾದಿಸುವಂತೆ ಹಕ್ಕೊತ್ತಾಯದ ಪತ್ರವನ್ನು ಶ್ರೀಗಳು ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ನೀಡಿದ್ರು.

ಇದೇ ಸಮಯದಲ್ಲಿ ಹೆಬ್ಬಾಳಕರ್ ಕುಟುಂಬದ ಸದಸ್ಯರೆಲ್ಲರೂ ಸಮಾಜದ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಶ್ರಮಿಸಲು ಸದಾ ಬದ್ಧರಿದ್ದೇವೆ ಎಂದು ಶ್ರೀಗಳ ನಿಯೋಗಕ್ಕೆ ಭರವಸೆ ನೀಡಿದ್ರು

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಪಂಚಮಸಾಲಿ ಸಮಾಜದ ಹಿರಿಯ ಹಾಗೂ ಕಿರಿಯ ಮುಖಂಡರು, ಪಂಚಸೇನಾ ಘಟಕದ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Check Also

ಬೆಳಗಾವಿ ಹೈವೇಯಲ್ಲಿ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣ

ಬೆಳಗಾವಿ: ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ನಿನ್ನೆ ತಡರಾತ್ರಿ ಬೆಳಗಾವಿ ತಾಲ್ಲೂಕಿನ ಮುತ್ಯಾನಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ …

Leave a Reply

Your email address will not be published. Required fields are marked *