ಬೆಳಗಾವಿ- ಬೆಳಗಾವಿ ನಗರದ ಮಡಿಲಲ್ಲಿರುವ ಐತಿಹಾಸಿಕ ರಾಜಹಂಸಗಡ ಕೋಟೆ ಅಭಿವೃದ್ಧಿ ಹಾಗು ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ತ್ ಮೂರ್ತಿ ನಿರ್ಮಾಣದ ವಿಚಾರ ಈಗ ರಾಜಕೀಯ ಅಸ್ತ್ರವಾಗಿದೆ.ಇದರ ಕ್ರೆಡಿಟ್ ಪಡೆಯಲು ರಾಜಕೀಯ ಸಂಘರ್ಷ ಶುರುವಾಗಿದೆ.
ನಿಜ ಹೇಳಬೇಂದ್ರೆ ಸಂಜಯ ಪಾಟೀಲರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾಗ ರಾಜಹಂಸಗಡ ಹಿಲ್ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದ್ದರು,ಇಲ್ಲಿ ಅತೀ ಎತ್ತರವಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸುವದಾಗಿ ಸಂಜಯ ಪಾಟೀಲ ಘೋಷಣೆ ಮಾಡುವದಷ್ಟೇ ಅಲ್ಲ,ಆಗಿನ ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ಧನ್ ರೆಡ್ಡಿ ಅವರನ್ನು ರಾಜಹಂಸಗಡಕ್ಕೆ ಕರೆಯಿಸಿ ಯೋಜನೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದನ್ನು ಸ್ವತ: ನಾವೇ ವರದಿ ಮಾಡಿದ್ದು ನಮಗೆ ನೆನಪಿದೆ.
ಪ್ರವಾಸೋದ್ಯಮ ಇಲಾಖೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಹಾಗೂ ಶಾಸಕರ ಅನುದಾನ ಬಳಕೆ ಮಾಡಿ, ರಾಜಹಂಸಗಡ ಕೋಟೆ ಪ್ರದೇಶದ ಅಭಿವೃದ್ಧಿ ಆಗಿದೆ.ಅಲ್ಲಿ ಬೃಹತ್ ಶಿವಾಜಿ ಮಹಾರಾಜದ ಮೂರ್ತಿಯೂ ನಿರ್ಮಾಣವಾಗಿದ್ದು ಮಾರ್ಚ್ ತಿಂಗಳಲ್ಲಿ ಇದರ ಲೋಕಾರ್ಪಣೆ ಕಾರ್ಯಕ್ರಮ ನಡೆಸಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಯಾರಿ ನಡೆಸಿರುವ ಬೆನ್ನಲ್ಲಿಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜಹಂಸಗಡದ ಅಭಿವೃದ್ಧಿಗೆ, ಮೂರ್ತಿ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದು ಬಿಜೆಪಿ ಸರ್ಕಾರ, ಆದ್ರೆ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮವನ್ನಾಗಿಸಲು ಬಿಡೋದಿಲ್ಲ.ನಮ್ಮ ಸಿಎಂ ಜೀವಂತ ಇದ್ದಾರೆ,ಅವರನ್ನು ಕರೆಯಿಸಿ ರಾಜಹಂಸಗಡದ ಮೂರ್ತಿ ಉದ್ಘಾಟಿಸುತ್ತೇನೆ.ಸ್ವತ ನಾನೇ ರಾಜಹಂಸಗಡಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ತಿರಗೇಟು ನೀಡಿದ್ದು,ರಾಜಹಂಸಗಡ ಅಭಿವೃದ್ಧಿ ಉದ್ಘಾಟನೆಯ ವಿಚಾರ ಈಗ ಇಬ್ಬರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ರಾಜಹಂಸಗಡದ ಅಭಿವೃದ್ಧಿಯ ರೂವಾರಿ ಸಂಜಯ ಪಾಟೀಲ ಇನ್ನುವರೆಗೆ ಈ ವಿಚಾರದಲ್ಲಿ ಎಂಟ್ರಿ ಮಾಡಿಲ್ಲ, ಈಗ ಸದ್ಯಕ್ಕೆ ರಮೇಶ್ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಟಾಂಗ್ ಕೊಟ್ಟಿದ್ದು, ರಾಜಹಂಸಗಡದಲ್ಲಿ ಗ್ರಾಮೀಣ ಕ್ಷೇತ್ರದ ರಾಜಕೀಯ ಸಂಘರ್ಷ ನಡೆಯುವುದು ಖಚಿತವಾದಂತಾಗಿದೆ.
ರಾಜಹಂಸಗಡದ ಅಭಿವೃದ್ಧಿಗೆ ಯಾವ ಇಲಾಖೆ ಎಷ್ಟು ಅನುದಾನ ನೀಡಿದೆ.ಇದರ ಅಭಿವೃದ್ಧಿಗೆ ಎಷ್ಟು ಕೋಟಿ ರೂ ಅನುದಾನ ಖರ್ಚಾಗಿದೆ ಅನ್ನೋದು ಗೊತ್ತಾದರೆ. ಬಹುಶ ಈ ಕ್ಷೇತ್ರದ ಕನ್ನಡಿಗರು ಬೆಚ್ಚಿಬಿದ್ದರೂ ಅಚ್ಚರಿ ಇಲ್ಲ.