ಜಾರಕಿಹೊಳಿಗೆ ದೊಡ್ಡ ಹುದ್ದೆಯ ನಿರೀಕ್ಷೆಯಲ್ಲಿ ಅಭಿಮಾನಿಗಳು!
ಬೆಳಗಾವಿ- ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರೋ ಬೆಳಗಾವಿಯ ಇಷ್ಟು ವರ್ಷಗಳ ಕಾಲ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೇ ಈ ಸಲದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಜಿಲ್ಲೆಯಲ್ಲಿ 11 ಜನ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಪಕ್ಷ ಸಂಘಟನೆಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಶ್ರಮ ವಹಿಸಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಇಡೀ ರಾಜ್ಯವನ್ನು ಸುತ್ತಿ ಪಕ್ಷ ಸಂಘಟನೆಗೆ ಆದ್ಯತೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಾ ಬಳಿಕ ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಇನ್ನೂ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ ಸತೀಶ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದಲ್ಲಿ ಸತೀಶ ಜಾರಕಿಹೊಳಿಗೆ ದೊಡ್ಡ ಹುದ್ದೆ ಸಿಗಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಸಿದ್ದರಾಮಯ್ಯ ಜೊತೆಗೆ ಅನೇಕ ವರ್ಷಗಳಿಂದ ತೀರ ಹತ್ತಿರದ ಸಂಬಂಧವನ್ನು ಸತೀಶ ಜಾರಕಿಹೊಳಿ ಹೊಂದಿದ್ದಾರೆ. ಪಕ್ಷ ಸಂಘಟನೆ, ಸಿದ್ದರಾಮಯ್ಯ ಜೊತೆಗಿನ ಒಡಾನಾಟ ಸತೀಶ ಜಾರಕಿಹೊಳಿಗೆ ವರವಾಗೋ ಸಾಧ್ಯತೆ ಇದೆ. ರಾಜ್ಯದಲ್ಲಿ ಡಿಸಿಎಂ ಸ್ಥಾನ ಜಾರಕಿಹೊಳಿಗೆ ನೀಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಡಿಸಿಎಂ ಇಲ್ಲವೇ ಪ್ರಮುಖ ಖಾತೆ ಪಡೆದುಕೊಳ್ಳಲಿ ಎಂದು ಅವರ ಹಿತೈಶಿಗಳ ಒತ್ತಾಯವಾಗಿದೆ.
ಲಕ್ಷ್ಮೀ ಅಕ್ಕಾ ಲಕ್ಕಿ…!
ಮಂತ್ರಿಯಾಗೋದು ನಕ್ಕಿ..!
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ,ಕೆಪಿಸಿಸಿ ಮಹಿಳಾ ಅಧ್ಯಕ್ಷರಾಗಿ,ಪಕ್ಷದ ಸಂಘಟನೆಯ ಜೊತೆಗೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿ,ಅಪಾರ ಜನ ಮೆಚ್ಚುಗೆ ಗಳಿಸಿ,ಪ್ರಸಕ್ತ ಚುನಾವಣೆಯಲ್ಲಿ ರಾಜಕೀಯ ವೈರಿಗಳಿಂದ,ಆರೋಪ,ಟೀಕೆ ಟಿಪ್ಪಣಿಗಳನ್ನು ಸಹಿಸಿ,ತೀವ್ರ ಪ್ರತಿರೋಧದ ನಡುವೆಯೂ ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿ ಎರಡನೇಯ ಬಾರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಪರ್ವ ಈಗ ಬೆಳಗಾವಿ ಜಿಲ್ಲೆಯಲ್ಲಿ ಆರಂಭವಾಗಿದೆ.
ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಲಿಂಗಾಯತ ಸಮಾಜದ ಪ್ರಬಲ ನಾಯಕಿಯಾಗಿ ಹೊರಹೊಮ್ಮಿರುವ ಹೆಬ್ಬಾಳಕರ ಈ ಬಾರಿ ಮಂತ್ರಿ ಆಗೋದು ಖಚಿತ ಎಂದು ಅವರ ಅಭಿಮಾನಿಗಳು ಈಗಿನಿಂದಲೇ ಶುಭಾಶಯ ಕೋರುತ್ತಿದ್ದಾರೆ. ಲಕ್ಷ್ಮೀ ಅಕ್ಕಾ ಲಕ್ಕಿ,ಈಬಾರಿ ಮಂತ್ರಿಯಾಗೋದು ನಕ್ಕಿ.ಅನ್ನೋದು ಅವರ ಅಭಿಮಾನಿಗಳ ವಿಶ್ವಾಸ.
ಲಕ್ಷ್ಮಣ ಸವದಿ ಅವರಿಗೂ ಅದೃಷ್ಟ…!
ಬಿಜೆಪಿಯ ಆಂತರಿಕ ಕಚ್ಚಾಟದಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಭರ್ಜರಿ ಗೆಲುವು ಸಾಧಿಸಿರುವ ಲಕ್ಷ್ಮಣ ಸವದಿ ಅವರು ಸಿದ್ರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗೋದು ಖಚಿತ ಎಂದು ಹೇಳಲಾಗುತ್ತಿದ್ದು ರಾಮದುರ್ಗದ ಅಶೋಕ ಪಟ್ಟಣ ಅವರು ಮಂತ್ರಿಯಾಗಲು ಬೆಂಗಳೂರಿನಿಂದ ದೆಹಲಿವರೆಗೂ ಲಾಭಿ ನಡೆಸಿದ್ದು ಸತ್ಯ.
ಮೀಸೆ ಮಾವ, ವರ್ಕರ್ ಪ್ರಕಾಶ ಹುಕ್ಕೇರಿ ಸಚಿವ ಸ್ಥಾನದ ಆಕಾಂಕ್ಷಿ...
ಪ್ರಕಾಶ್ ಹುಕ್ಕೇರಿ ಅಂದ್ರೆ ಅಭಿವೃದ್ಧಿ,ಅಭಿವೃದ್ಧಿ ಅಂದ್ರೆ ಪ್ರಕಾಶ್ ಹುಕ್ಕೇರಿ ಎಂದು ರಾಜ್ಯದ ಜನ ಮಾತಾಡ್ತಾರೆ,ವಯಸ್ಸಾದರೂ ಎಂಎಲ್ಸಿ ಇಲೆಕ್ಷನ್ ಗೆದ್ದು ಈಗ ಮಗ ಗಣೇಶ ಹುಕ್ಕೇರಿಯನ್ನು ಜಿಲ್ಲೆಯಲ್ಲಿ ದಾಖಲೆ ಮತಗಳ ಅಂತರದಿಂದ ಗೆಲ್ಲಿಸಿ,ಪಕ್ಷದ ಸೂಚನೆ ಮೇರೆಗೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಲೋಕಸಭೆ ಚುನಾವಣೆಗೆ ಸ್ಪರ್ದಿಸಿ ಸಂಸಸದರಾಗಿದ್ದ ಪ್ರಕಾಶ್ ಹುಕ್ಕೇರಿ ಅವರು ತಮಗೂ ಸಚಿವ ಸ್ಥಾನ ನೀಡುವಂತೆ ವರಿಷ್ಠ ನಾಯಕರ ಎದುರು ಪಟ್ಟು ಹಿಡಿದಿದ್ದಾರೆ.