ಬೆಳಗಾವಿ – ಬೆಳಗಾವಿ ಜಿಲ್ಲೆಯ ರಾಜಕಾರಣ ಯಾರಿಗೂ ಅರ್ಥವಾಗಲು ಸಾಧ್ಯವೇ ಇಲ್ಲ,ಇಲ್ಲಿ ನಡೆಯೋದು ಹೊಂದಾಣಿಕೆ ರಾಜಕಾರಣ ಹೀಗಾಗಿ ಯಾರು ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ,ಯಾರ ಕಾಲ ಎಳೆಯುತ್ತಾರೆ ಎನ್ನುವದನ್ನು ಕಲ್ಪನೆ ಮಾಡಿಕೊಳ್ಳಲೂ ಸಹ ಸಾಧ್ಯವಿಲ್ಲ.ಯಾಕಂದ್ರೆ ಇಲ್ಲಿ ಉಹೆಗೂ ನಿಲುಕದ ಡರ್ಟಿ ಪಾಲಿಟೀಕ್ಸ್ ನಡೆಯುತ್ತದೆ. ಇದು ಸತ್ಯ
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯಾವಾಗಲೂ ಒಂದು ಮಾತು ಹೇಳ್ತಾರೆ, ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ನನಗೆ ಬೆಳಗಾವಿ ರಾಜಕಾರಣ ಅರ್ಥವಾಗಿರಲಿಲ್ಲ ಇವತ್ತಿಗೂ ಅದು ಅರ್ಥ ಆಗಿಲ್ಲ.ಯಾರಿಗೂ ಅರ್ಥವಾಗದ ರಾಜಕಾರಣ ಇಲ್ಲಿ ನಡೆಯುತ್ತ ಬಂದಿದೆ ಇವತ್ತಿಗೂ ಅದು ಮುಂದುವರೆದಿದೆ. ಪಾತ್ರದಾರಿಗಳಷ್ಟೇ ಬದಲಾಗುತ್ತ ಬಂದಿದ್ದಾರೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಕ್ರಾಂತಿಯ ನೆಲ ಬೆಳಗಾವಿಯಲ್ಲೇ ನಡೆಸಲು ನಿರ್ಧರಿಸಲಾಗಿತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಖುದ್ದಾಗಿ ಬೆಳಗಾವಿಯ ಸಿಪಿಎಡ್ ಹಾಗೂ ಜಿಲ್ಲಾ ಕ್ರೀಡಾಂಗಣ ಸ್ಥಳ ಪರಶೀಲನೆ ಮಾಡಿ ಕೊನೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸುವದಾಗಿ ನಿರ್ಧರಿಸಿ ಈ ವಿಚಾರವನ್ನು ಬೆಳಗಾವಿಯಲ್ಲೇ ಘೋಷಣೆ ಮಾಡಿ ಹೋಗಿದ್ದರು.
ಬೆಳಗಾವಿಯ ಜಿಲ್ಲಾ ಕ್ರಿಡಾಂಗಣದಲ್ಲಿ ಎಲ್ಲ ಸಿದ್ಧತೆಗಳು ನಡೆದಿರುವಾಗಲೇ ಈಗ ಏಕಾ ಏಕಿ ಬೆಳಗಾವಿಯಲ್ಲಿ ನಡೆಯಬೇಕಿದ್ದ ಈ ಮಹತ್ವದ ಕಾರ್ಯಕ್ರಮ ಮೈಸೂರಿಗೆ ಹೈಜಾಕ್ ಆಗಲು ಕಾರಣವೇನು ? ಎಂಬ ಪ್ರಶ್ನೆ ಈಗ ಬೆಳಗಾವಿ ಜಿಲ್ಲೆಯ ಜನರನ್ನು ಕಾಡುತ್ತಿದ್ದೆ.ಈ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಶಿಪ್ಟ್ ಆಗಲು ಕಾರಣ ಏನು ? ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗೋದೆ ಇಲ್ಲ ಯಾಕಂದ್ರೆ ಈ ವಿಚಾರದಲ್ಲಿ ದೊಡ್ಡ ಮಟ್ಟದ ಡರ್ಟಿ ಪಾಲಿಟೀಕ್ಸ್ ನಡೆದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದ ವಿಚಾರದಲ್ಲಿ ಹೆಚ್ಚಿನ ಮುತವರ್ಜಿ ವಹಿಸಿದ್ದೇ ಈ ಕಾರ್ಯಕ್ರಮ ಶಿಪ್ಟ್ ಆಗಲು ಕಾರಣವಾಯಿತು.ಬೆಳಗಾವಿಯಲ್ಲಿ ಈ ಕಾರ್ಯಕ್ರಮ ನಡೆದ್ರೆ ಎಲ್ಲ ಕ್ರೆಡಿಟ್ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಗೃಹಲಕ್ಷ್ಮೀ ಕಾರ್ಯಕ್ರಮ ಬೆಳಗಾವಿಯಿಂದ ಎತ್ತಂಗಡಿ ಆಯಿತಾ…?? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಬೆಳಗಾವಿ ಜಿಲ್ಲೆಯ ಜನ ಈ ವಿಚಾರವನ್ನು ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿಗೆ ಹೈಜಾಕ್ ಮಾಡಿರುವ ವಿಚಾರ ಈಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ನಡೆಯುತ್ತಿದೆ ಎನ್ನುವದಕ್ಕೆ ಇದು ಸಂಕೇತವೇ ಎನ್ನುವದನ್ನು ಕಾಯ್ದು ನೋಡಬೇಕಾಗಿದೆ.
ಬೆಳಗಾವಿ ಕಾರ್ಯಕ್ರಮ ಮೈಸೂರಿಗೆ ಶಿಪ್ಟ್ ಆಗಿರುವ ಬೆನ್ನಲ್ಲಿಯೇ ಮಾಜಿ ಸಚಿವೆ ಉಮಾಶ್ರೀ ವಿಧಾನ ಪರಿಷತ್ತಿನ ಸದಸ್ಯರಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾಣದ ಕೈಗಳ ಕೆಲಸ ಮಾಡುತ್ತಿವೆ.ಎನ್ನುವದು ಸ್ಪಷ್ಟವಾಗುತ್ತದೆ.