ಬೆಳಗಾವಿ- ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕೊಡುವ ವಿಚಾರದಲ್ಲಿ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ ಸಮರ ಶುರುವಾಗಿದೆ.ಮಾಜಿ ಮಂತ್ರಿ ಮುರುಗೇಶ್ ನಿರಾಣಿ ಅವರು ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಬಹಿರಂಗ ಸವಾಲು ಹಾಕುವ ಮೂಲಕ ಪಂಚಮಸಾಲಿ ಹೋರಾಟಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ, ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕೊಟ್ಟರೆ ಬಿಜೆಪಿ ಮಂತ್ರಿಗಳಿಗೆ ಕುಂದಾ ಕೊಟ್ಟು ಸನ್ಮಾನ ಮಾಡ್ತೀನಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ರು ಈಗ ಅವರ ಸರ್ಕಾರವಿದೆ ಲಕ್ಷ್ಮೀ ಹೆಬ್ಬಾಳಕರ್ ಮಂತ್ರಿಯಾಗಿದ್ದಾರೆ ಅವರು ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ದೊರಕಿಸಿ ಕೊಟ್ಟರೆ ಒಂದು ಲಕ್ಷ ಜನ ಸೇರಿಸಿ, ಒಂದು ಕೆಜಿ ಬಂಗಾರದ ಆಭರಣ ಕೊಟ್ಟು ಸನ್ಮಾನ ಮಾಡ್ತೀವಿ ಎಂದು ಬಿಜೆಪಿ ಮುಖಂಡ ಮುರುಗೇಶ್ ನಿರಾಣಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸವಾಲು ಹಾಕಿದ್ದಾರೆ.
ಮಾದ್ಯಮಗಳ ಜೊತೆ ಮಾತನಾಡಿರುವ ಮುರುಗೇಶ್ ನಿರಾಣಿ,ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೇವಲ ಮೂರೇ ದಿನದಲ್ಲಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕೊಡಸ್ತೀನಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ರು,ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಆಗಿವೆ. ಮೀಸಲಾತಿ ದೊರಕಿಸಿ ಕೊಟ್ರಾ ? ಎಂದು ನಿರಾಣಿ, ಹೆಬ್ಬಾಳಕರ್ ಅವರಿಗೆ ಸವಾಲು ಹಾಕಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕೊಡುವ ವಿಚಾರದಲ್ಲಿ ಕೆಲವು ನಾಯಕರು ಬಾರಕೋಲ್ ತಗೊಂಡು ಓಡಾಡ್ತಾ ಇದ್ರು ಈಗ ಬಾರಕೋಲ್ ಮತ್ತೆ ಹೊರಗೆ ತೆಗೆಯಲಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಕೊಟ್ಟ ಮಾತಿನಂತೆ ನಡೆಯಲಿ ಈ ವಿಚಾರದಲ್ಲಿ ರಾಜಕಾರಣ ಬೇಡ, ಲಕ್ಷ್ಮೀ ಹೆಬ್ಬಾಳಕರ್ ಅಧಿಕಾರಕ್ಕೆ ಬರುವ ಮೊದಲು ಏನ್ ಹೇಳಿದ್ರು ಆ ಪ್ರಕಾರ ನಡೆದು ತೋರಿಸಲಿ, ಅವರಿಗೆ ಒಂದು ಜೋಡು ಬಂಗಾರದ ಬಳೆ ಅಷ್ಟೇ ಅಲ್ಲ ಒಂದು ಕೆಜಿ ಬಂಗಾರದ ಆಭರಣ ಕೊಟ್ಟು ಸನ್ಮಾನ ಮಾಡ್ತೀವಿ ಎಂದು ಮುರುಗೇಶ್ ನಿರಾಣಿ ಸವಾಲು ಹಾಕುವ ಮೂಲಕ ಪಂಚಮಸಾಲಿ ಸಮಾಜದ ಹೋರಾಟದಲ್ಲಿ ವೀರಾವೇಶದಿಂದ ಭಾಷಣ ಮಾಡಿದ್ದ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ನಿರಾಣಿ ಬಂಗಾರದ ಸವಾಲ್ ಹಾಕಿದ್ದಾರೆ.ಇದಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಕೊಡುವ ಉತ್ತರ ಏನು ? ಕಾದು ನೋಡೋಣ..