Breaking News

ಬಿಜೆಪಿ ಎಂಈಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬೆಳಗಾವಿ:- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣಾ ಪರ್ವ ಆರಂಭವಾಗಿದೆ. ಬಿಜೆಪಿ ಹಾಗೂ ಎಮ್‍ಇಎಸ್ ಸಂಘಟಣೆಯ ಹಲವಾರು ಜನ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಲಕ್ಷ್ಮೀ ಹೆಬ್ಬಾಳಕರ ರವರನ್ನು ಬೆಂಬಲಿಸಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿನಯ ನಾವಲಗಟ್ಟಿ ರವರು ಬಿಜೆಪಿ ಹಾಗೂ ಎಮ್‍ಇಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಎಲ್ಲ ಮುಖಂಡರಿಗೆ ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಹಿರೇಬಾಗೇವಾಡಿ ಜಿಲ್ಲಾ ಪಂಚಾಯತಿ ಮತಕ್ಷೇತ್ರದ ಬಿಜೆಪಿ ಮುಖಂಡ ಸುರೇಶ ಇಟಗಿ, ಕೊಂಡಸ್ಕೊಪ್ಪ ಗ್ರಾಮದ ಬಸವರಾಜ ವಾಲಿ ಇಟಗಿ, ಗದಿಗೆಪ್ಪ ಗುರವನ್ನವರ, ಶಿವನಪ್ಪ ನಾಯ್ಕರ, ನಾಗಪ್ಪ ಕಂಠ, ಶಿವಪುತ್ರ ಹಳಿಮನಿ, ಸಲೀಮ ಸತ್ತೀಗೇರಿ, ಇಮ್ರಾನ, ಮಹಾಂತೇಶ ದೊಡ್ಗೌಡರ, ಶ್ರೀಕಾಂತ  ಕೊಳವಿ, ಅಬ್ದುಲ ಚಕ್ಕೆದ, ನಾಗಪ್ಪ ನಂದಿ, ಇರಫಾನ ಮುಲ್ಲಾ, ಅಬುಖತೀಬ ಹಾರೂನ ಮುಲ್ಲಾ, ಅಝರ ಪನಾಲಗಡ,
ಹಲಗಾ ಜಿಲ್ಲಾ ಪಂಚಾಯತಿ ಕ್ಷೇತ್ರದ ಗೋಪಾಲಗೌಡ ಪಾಟೀಲ, ಕೇಶವ ಚೌಗಲೆ, ಗುಂಡು ಚೌಗುಲೆ, ಸಂಜಯ ಮರಗನ್ನಾಚೆ, ಜ್ಯೋತಿಬಾ ಚೌಗಲೆ, ರಾಹುಲ ನಿಂಗಾನಿ, ದೀಪಕ ಕಾಕತಕರ, ಶಿವಲಿಂಗ ತ್ಯಾಗನಿ, ಸಾತು ಸಗದಿ, ಮಹಾದೇವ ತಾರೀಕರ, ನಾಗಪ್ಪ ಬುರಾಗಿ, ಲಕ್ಷ್ಮಣ ಮುಚ್ಚಂಡಿ, ರಮೇಶ ಕೋಲೆಕಾರ, ಪೀರಾಜಿ ರಾಜಗೋಳಿ, ಮಾರುತಿ ತಳವಾರ, ಅಡಿವೆಪ್ಪ ತಳವಾರ, ಬಸವರಾಜ ತಳವಾರ, ಗಜಾನನ ಖನಗಾಂವಕರ, ಬಸು ಲಕ್ಕಮ್ಮನವರ ಸೇರಿದಂತೆ ಹಲವಾರು ಜನ ಬಿಜೆಪಿ ಹಾಗೂ ಎಮ್‍ಇಎಸ್ ಮುಖಂಡರು ಹಾಗೂ ಐದುನೂರಕ್ಕು ಹೆಚ್ಚು ಕಾರ್ಯಕರ್ತರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕೆ ಮಾಧ್ಯಮ ಮಿತ್ರರ ಜೊತೆ ಮಾತನಾಡಿದ ಸುರೇಶ ಇಟಗಿ ನಮ್ಮ ಮನೆತನ ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದೆ. ಎರಡು ವರ್ಷದ ಹಿಂದೆ ಕಾರನಾಂತರಗಳಿಂದ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿದ್ದೇ ಈ ಮತ್ತೆ ನನ್ನ ಸ್ವಂತ ಗೂಡಿಗೆ ಸೇರಿದ್ದೇನೆ. ಹಿರೇಬಾಗೇವಾಡಿಯ ಸಿಂದ್ಧನಬಾಂವಿ ಕೆರೆ ತುಂಬಿಸುವ ಕನಸು ತಮ್ಮ ತಂದೆಯವರದಾಗಿತ್ತು. ಲಕ್ಷ್ಮೀ ಹೆಬ್ಬಾಳಕರವರು ಅಧಿಕಾರ ಇಲ್ಲದಿದ್ದರೂ ಸರ್ಕಾರದ ಮೇಲೆ ಒತ್ತಡ ಹೇರಿ ಈ ಭಾಗದ ರೈತರ ಕನಸನ್ನು ನನಸು ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳಕವರ ಸಾಮಾಜಿಕ ಕಾರ್ಯಗಳಿಗೆ ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಅವರನ್ನು ಈ ಬಾರಿ ಗೆಲ್ಲಿಸು ಸಂಕಲ್ಪ ಮಾಡಿದ್ದೇನೆಂದು ಸುರೇಶ ಇಟಗಿ ಹೇಳಿದರು.
ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ತಾ.ಪಂ. ಅಧ್ಯಕ್ಷ ಶಂಕರ ಗೌಡ ಪಾಟೀಲ, ಸಿ.ಸಿ.ಪಾಟೀಲ, ಹಿರೇಬಾಗೇವಾಡಿಯ ದರ್ಗಾ ಅಜ್ಜನವರು ಅಡಿವೇಶ ಇಟಗಿ, ಶ್ರೀಕಾಂತ ಮದುಬರಮನ್ನವರ, ಮಹ್ಮದಗೌಸ ಜಾಲಿಕೊಪ್ಪ, ನ್ಯಾಯವಾದಿ ಯಳ್ಳೂರ, ಪ್ರಕಾಶ ಪಾಟೀಲ, ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಈ ಬಾರಿ ಮತದಾರರು ನನ್ನ ಕೈ ಹಿಡಿಯುತ್ತಾರೆ
ಬೆಳಗಾವಿ
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆಯಿದೆ. ಚುನಾವಣಾ ಪ್ರಚಾರದ ವೇಳೆ ಕ್ಷೇತ್ರದ ಜನತೆಯಿಂದ ವ್ಯಾಪಕ ಬೆಂಬಲ ಸಿಗುತ್ತಿದ್ದು, ಈ ಬಾರಿ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಗ್ರಾಪಂ ಸದಸ್ಯೆಯಲ್ಲದಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿz್ದÉೀನೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ಹಲಗಾ ಮತ್ತು ಬಾಗೇವಾಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಹಾಗು ಎಂಈಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.  ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಜಾತ್ಯಾತೀತವಾಗಿ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದ ಮೇಲೆ ಕಾರ್ಯನಿರ್ವಹಿಸಿz್ದÉೀನೆ ಎಂದು ಅವರು ಹೇಳಿದರು.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಧ್ಯೋಯವಾಗಿದೆ ಎಂದ ಅವರು, ಕಾಶ್ಮೀರ ಅತ್ಯಾಚಾರ ಪ್ರಕರಣ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನ ಅತ್ಯಾಚಾರವೆಸಗಿದ ಪ್ರಕರಣದ ಕುರಿತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮೌನ ಮುರಿಯಬೇಕು. ಕಚೇರಿಯಲ್ಲಿ ಕುಳಿದುಕೊಳ್ಳದೇ ಮಹಿಳೆಯರ ಪರವಾಗಿ ತಮ್ಮ ನಿಲುವು ಖಚಿತಪಡಿಸಬೇಕು ಎಂದು ಆಗ್ರಹಿಸಿದರು. ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.
18 ಮಹಿಳೆಯರಿಗೆ ಟಿಕೆಟ್
ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು 18 ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿದೆ. ಇದು ತೃಪ್ತಿಯಾಗದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದೆ. ರಾಜ್ಯದ 22 ಮಹಿಳೆಯರಿಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಕೋರಲಾಗಿತ್ತು ಎಂದು ಅವರು ಹೇಳಿದರು.
ಎ. 20 ರಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಆಯ್ಕೆಬಯಿಸಿ ಅಪಾರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು. ಕಿತ್ತೂರು ಟಿಕೆಟ್ ಹಂಚಿಕೆ ವಿಚಾರ ಪಕ್ಷದ ಹೈಕಮಾಂಡ್‍ಗೆ ಬಿಟ್ಟ ವಿಚಾರವಾಗಿದೆ. ಕ್ಷೇತ್ರದಲ್ಲಿ  ಯಾರೂ ಪಕ್ಷ ವಿರೋಧಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಲ್ಲ. ಕೆಲ ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿದ್ದು ,  ಪಕ್ಷದ ವೇದಿಕೆಯಲ್ಲಿ ಅದನ್ನು ಶಮನಗೊಳಿಸಲಾಗಿದೆ ಎಂದು ಅವರು ಹೇಳಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *