Breaking News
Home / Breaking News / ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿ ಚೋಪ್ರಾ ಬಂಡಾಯ

ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿ ಚೋಪ್ರಾ ಬಂಡಾಯ

1,220 Views

ಬೆಳಗಾವಿ- ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುವ ಮುನ್ನವೇ ಬಂಡಾಯ ಭುಗಿಲೆದ್ದಿದೆ ಪಕ್ಷದ ಪ್ರಬಲ ಆಕಾಂಕ್ಷಿ ಆನಂದ ಚೋಪ್ರಾ ಅವರಿಗೆ ಕೈ ಟಿಕೆಟ್ ಕೈತಪ್ಪುವ ಭೀತಿಯಿಂದ ಚೋಪ್ರಾ ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ನೀಡಿದ್ದಾರೆ

ಟಿಕೆಟ್ ಘೋಷಣೆಯಾಗುವ ಮುನ್ನವೇ ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು ಈ ಕ್ಷೇತ್ರದಲ್ಲಿ ಚೋಪ್ರಾ ಬೆಂಬಲಿಗರು ಸಭೆ ನಡೆಸಿ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ

ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕೈ ಟಿಕೆಟ್ ಗಾಗಿ ಆಕಾಂಕ್ಷಿ ಅಭ್ಯರ್ಥಿಗಳಾದ ಆನಂದ ಚೋಪ್ರಾ ಹಾಗೂ ವಿಶ್ವಾಸ ವೈದ್ಯ ನಡುವೆ ಬಿಗ್ ಫೈಟ್ ನಡೆದಿತ್ತು ವಿಶ್ವಾಸ ವೈದ್ಯ ಗೆ ಕಾಂಗ್ರೆಸ್ ಟಿಕೆಟ್ ಖಾತ್ರಿಯಾದ ವಿಷಯ ಆನಂದ ಚೋಪ್ರಾಗೆ ತಿಳಿಯುತ್ತಿದ್ದಂತೆ ಚೋಪ್ರಾ ಬಂಡಾಯದ ಬಾವುಟ ಹಾರಿಸುವ ತೀರ್ಮಾಣ ಕೈಗೊಂಡಿದ್ದಾರೆ

ಆನಂದ ಚೋಪ್ರಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಓಡಾಡಿಕೊಂಡು ಯಾತ್ರೆಯನ್ನು ಯಶಸ್ವಿಗೊಳಿಸಿದ್ದರು ಈಗ ಏಕಾಏಕಿ ಟಿಕೆಟ್ ಆಕಾಂಕ್ಷಿ ಆನಂದ ಚೋಪ್ರಾಗೆ ಟಿಕೆಟ್ ಕೈ ತಪ್ಪುವ ಭೀತಿ ಪ್ರಾರಂಭವಾಗಿದೆ.
ಸಾವಿರಾರು ಬೆಂಬಲಿಗರ ಜೊತೆಗೆ ಆನಂದ ಚೋಪ್ರಾ ಸಭೆ ನಡೆಸುತ್ತಿದ್ದಾರೆ‌.
ಬೆಂಬಲಿಗರು ಹಾಗೂ ಅಭಿಮಾನಿಗಳಿಂದ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧೆಗೆ ಒತ್ತಾಯ ಮಾಡುತ್ತಿದ್ದರೆ ಇನ್ನೂ ಕೆಲ ಬೆಂಬಲಿಗರಿಂದ ಸ್ಪರ್ಧಿಸುವಂತೆ ಕಣ್ಣಿರು ಹಾಕುತ್ತಿದ್ದಾರೆ.

ಬೆಂಬಲಿಗರ ಒತ್ತಾಯ ಮೇರೆಗೆ ಪಕ್ಷೇತರರಾಗಿ ಸ್ಪರ್ಧೆಗೆ ಆನಂದ ಚೋಪ್ರಾ ನಿರ್ಧಾರ ಮಾಡಿದ್ದಾರೆ‌.

About BGAdmin

Check Also

ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ್ ಜಾರಕಿಹೊಳಿ ಹಾಜರ್

ಬೆಳಗಾವಿ-ರಾಷ್ಟ್ರಪತಿಗಳನ್ನು ಸ್ವಾಗತಿಸಲು ಬೆಳಗಾವಿಯ ಸಾಂಬ್ರಾ ಎರಪೋರ್ಟ ಗೆ ಸಚಿವ ರಮೇಶ ಜಾರಕಿಹೋಳಿ ಆಗಮಿಸಿದರು ಸರ್ಕಾರಿ ವಾಹನ ಬಿಟ್ಟು ಎಸ್ಕಾಟ್ ಇಲ್ಲದೇ …

Leave a Reply

Your email address will not be published. Required fields are marked *