ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಬಳಿಕ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ ಇಂದು ಸೋನೋಲಿ ಗ್ರಾಮಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಗ್ರಾಮಸ್ಥರು ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಗೆ ಅವರನ್ನು ಕರೆದುಕೊಂಡು ಹೋಗಿ ಕ್ಷೇತ್ರದ ಶಾಸಕರಿಗೆ ಶಾಲೆಯ ದರ್ಶನ ಮಾಡಿಸಿದರು
ಶಾಲೆಯ ದ್ವಾರದಲ್ಲಿ ರಸ್ತೆಯಲ್ಲಿ ನೀರು ನಿಂತಿದೆ ಮಳೆಯ ನೀರು ಶಾಲೆಯ ದ್ವಾರದ ಬಳಿಯ ಗೋಬರ್ ಗ್ಯಾಸ್ ಹೊಂಡದಲ್ಲಿ ನೀರು ತುಂಬಿಕೊಂಡಿದೆ ಶಾಲೆಗೆ ಹೋಗುವ ಚಿಕ್ಕ ಮಕ್ಕಳ ಜೀವ ಆತಂಕದಲ್ಲಿದೆ ಎಂದು ಗ್ರಾಮಸ್ಥರು ಶಾಲೆಯ ದುಸ್ಥಿತಿ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಗಮನ ಸೆಳೆದರು
ಬೆಳಗುಂದಿ ಪಕ್ಕದ ಸೋನೋಲಿ ಗ್ರಾಮದ ಶಾಲೆಯ ಪರಿಸ್ಥಿತಿ ನೋಡಿ ದಂಗಾದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕೂಡಲೇ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ.ಹಾಗು ಗ್ರಾಮ ಪಂಚಾಯತಿಯ ಪಿಡಿಓ ಅವರನ್ನು ಸ್ಥಳಕ್ಕೆ ಕರೆಯಿಸಿ ಕೂಡಲೇ ನೀರು ತುಂಬಿಕೊಂಡಿರುವ ಶಾಲೆ ಪಕ್ಕದಲ್ಲಿರುವ ಗೋಬರ್ ಗ್ಯಾಸ್ ಹೊಂಡದ ಪಕ್ಕ ಕಪೌಂಡ್ ವಾಲ್ ನಿರ್ಮಿಸುವಂತೆ ಸೂಚನೆ ನೀಡಿದರು
ಚಿಕ್ಕ ಮಕ್ಕಳು ಹೊಂಡದ ಪಕ್ಕದ ರಸ್ತೆಯಿಂದ ಶಾಲೆಗೆ ಹೋಗುತ್ತಿದ್ದಾರೆ ಮಕ್ಕಳ ರಕ್ಷಣೆಗಾಗಿ ತಕ್ಷಣ ಹೊಂಡದ ಪಕ್ಕ ಕಪೌಂಡ್ ಗೋಡೆ ನಿರ್ಮಿಸಬೇಕು ವಿ ವಿಷಯದಲ್ಲಿ ವಿಳಂಬ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಹೆಬ್ಬಾಳಕರ ಅಧಿಕಾರಿಗಳಿಗೆ ಸೂಚನೆ ನೀಡಿದರು
ಇದಾದ ಬಳಿಕ ಶಾಲೆಯ ಎಸ್ ಡಿ ಎಂ ಸಿ ಸದಸ್ಯರ ಜೊತೆ ಸಭೆ ಮಾಡಿ ಶಾಲೆಯ ಸಮಸ್ಯೆಗಳನ್ನು ಆಲಿಸಿದರು
ಸೋರುತ್ತಿರುವ ಶೀಥೀಲಗೊಂಡಿರುವ ಶಾಲೆಯ ಮೂರು ಕೊಠಡಿಗಳನ್ನು ನೆಲಸಮ ಮಾಡಿ ಮೂರು ಹೊಸ ಕೊಠಡಿಗಳನ್ನು ನಿರ್ಮಿಸುವ ದಾಗಿ ಹೆಬ್ಬಾಳಕರ ಭರವಸೆ ನೀಡಿದ್ರು