Breaking News
Home / Breaking News / ಸ್ಮಾರ್ಟ್ ಸಿಟಿ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್….ವಾಹನ ಸವಾರರೇ ಹುಷಾರ್…..!!!

ಸ್ಮಾರ್ಟ್ ಸಿಟಿ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್….ವಾಹನ ಸವಾರರೇ ಹುಷಾರ್…..!!!

, LOCAL NEWS Leave a comment 349 Views

ಸ್ಮಾರ್ಟ್ ಸಿಟಿ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್….ವಾಹನ ಸವಾರರೇ ಹುಷಾರ್…..!!!ಬೆಳಗಾವಿ- ಬೆಳಗಾವಿ ನಗರ ಐತಿಹಾಸಿಕ ನಗರ ,ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ನಗರ,ರಾಜ್ಯದ ಎರಡನೇಯ ರಾಜಧಾನಿಯ ಪಟ್ಟಕ್ಕೇರಲಿರುವ ನಗರ,ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ನೂರು ಕೋಟಿ ಅನುದಾನ ಪಡೆಯುತ್ತಿರುವ ನಗರ ಇಷ್ಟೆಲ್ಲಾ ಗೌರವಗಳಿಗೆ ಕಾರಣವಾಗಿರು ಬೆಳಗಾವಿ ನಗರದ ರಸ್ತೆಗಳ ಸ್ಥಿತಿ ನೋಡಿ ಛೀ…ಅನಬೇಕೋ…ಥೂ..ಅನಬೇಕೋ ತಿಳಿಯುತ್ತಿಲ್ಲ

ಬೆಳಗಾವಿ ಮಹಾನಗರ ಪಾಲಿಕೆಗೆ ಸರ್ಕಾರ ಪ್ರತಿ ವರ್ಷ ತಪ್ಪದೇ ನೂರು ಕೋಟಿ ಅನುದಾನ ಕೊಡತೈತಿ ನಮ್ಮ ಅಧಿಕಾರಿಗಳು ನೂರು ಕೋಟಿಯನ್ನು ನಗರದ ರಸ್ತೆಗಳಿಗೇ ಸುರಿಯುತ್ತಾರೆ ಆದರೂ ಬೆಳಗಾವಿ ರಸ್ತೆಗಳ ಸ್ಥಿತಿ ಹೇಗಿದೆ ನೋಡ್ರಿ ಯಪ್ಪಾ
ಚಿತ್ರದಲ್ಲಿರುವ ರಸ್ತೆ ಬೆಳಗಾವಿಯ ಗುಡ್ ಶೆಡ್ ರಸ್ತೆ ಈ ರಸ್ತೆಗೆ ದುರಸ್ಥಿಯ ಭಾಗ್ಯ ಯಾವಾಗ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕೆಲವರಂತೂ ಈ ರಸ್ತೆ ಬೇಗನೆ ರಿಪೇರಿ ಆಗಲಿ ಅಂತಾ ಹರಕೆ ಹೊತ್ತಿದ್ದಾರೆ ಹರಕೆ ತೀರಿಸುವ ದಿನ ಯಾವಾಗ ಬರಬಹುದು ಎನ್ನುವದಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಶಾಸಕ ಅಭಯ ಪಾಟೀಲರು ಉತ್ತರಕೊಡಬೇಕು

ಪ್ರತಿ ವರ್ಷ ಪಾಲಿಕೆಗೆ ನೂರು ಕೋಟಿ ಅನುದಾನ ಬರತೈತಿ ಅದೆಲ್ಲಾ ರಸ್ತೆಗಳಿಗೆ ಡಾಂಬರ ಹಾಕಲು ಖರ್ಚು ಆಗತೈತಿ ಆದರೂ ರಸ್ತೆಗಳ ಪರಿಸ್ಥಿತಿ ಹಿಂಗ್ಯಾಕ್ರಿ ಅಂತಾ ಜನಾ ಕೇಳಾತಾರ ಅದಕ್ಕೆಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳು ಉತ್ತರ ಕೊಡಬೇಕ್ರಿ ಇಲ್ಲಾ ಅಂದ್ರೆ ಜನ ಧಂಗೆ ಏಳ್ತಾರ್ರೀ ಸಾಹೇಬ್ರ ಹುಷಾರ್…!!!

About BGAdmin

Check Also

ಎಪಿಎಂಸಿ ಚುನಾವಣೆ ಸಚಿವ ರಮೇಶ ಜಾರಕಿಹೊಳಿ ನೇತ್ರತ್ವದಲ್ಲಿ ಮಹತ್ವದ ಸಭೆ …..

ಬೆಳಗಾವಿ- ಸೋಮವಾರ ಬೆಳಗಾವಿ ಎಪಿಎಂಸಿ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತ್ರತ್ವದಲ್ಲಿ ಎಪಿಎಂಸಿ …

Leave a Reply

Your email address will not be published. Required fields are marked *