ಬೆಳಗಾವಿ ಸಮೀಪದ ತಿಲಾರಿ ಘಾಟಿನಲ್ಲಿರುವ ಫಿಕನಿಕ್ ಸ್ಪಾಟಿನಲ್ಲಿ ಈಜುತಿದ್ದ ಮೂವರು ಕಾಲೇಜು ಹುಡುಗಿಯರಲ್ಲಿ ಜೀವದ ಹಂಗು ತೊರೆದು ಇಬ್ಬರು ಯುವತಿಯರ ಪ್ರಾಣ ಉಳಿಸಿದ ಅಂಗವೀಕಲ ಯುವಕನ ಧೈರ್ಯವನ್ನು ಮೆಚ್ಚಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಯುವಕನಿಗೆ ಸನ್ಮಾನಿಸಿ ಲಕ್ಷ್ಮೀತಾಯಿ ಫೌಂಡೇಶನ್ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುದ್ರೆಮನಿ ಗ್ರಾಮದ ಮನೋಜ ಪರಶುರಾಮ ಧಾಮನೆಕರ ವಿಕಲಾಂಗನಾದರೂ ನೀರಿನಲ್ಲಿ ಮುಳುಗುತ್ತಿದ್ದ. ಬೆಳಗಾವಿಯ ಇಬ್ಬರೂ ಕಾಲೇಜ ವಿದ್ಯಾರ್ಥಿನಿಯರನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ಹಿನ್ನಲೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಈ ಯುವಕನನ್ನು ತಮ್ಮ ಕಛೇರಿಗೆ ಕರೆಯಿಸಿ ಸನ್ಮಾನಿಸಿದರು. ಜೊತೆಗೆ ನಗದು ಬಹುಮಾನ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕುದ್ರೆಮನಿಯ ಗ್ರಾಮದ ಯುವಕ ವಿಕಲಾಂಗನಾದರೂ ಪ್ರಾಣದ ಹಂಗು ತೊರೆದು ಮೂವರು ಯುವತಿಯ ಪೈಕಿ ಇಬ್ಬರೂ ಪ್ರಾಣ ರಕ್ಷಣೆ ಮಾಡಿದ್ದಾನೆ. ಈತನ ಧೈರ್ಯ ಮತ್ತು ಸಹಾಸ ಪ್ರೇರಣಾದಾಯಕವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಯುವಕನಿಗೆ ಶೌರ್ಯ ಪ್ರಶಸ್ತಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆಯುವೆ ಜೊತೆಗೆ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಸತ್ಕಾರ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಈ ಯುವಕ ಮನೋಜ ಪರಶುರಾಮ ಧಾಮನೆಕರ ನಾನು ನನ್ನ ಗೆಳೆಯನ ಜೊತೆ ತಿಲಾರಿ ಪರಿಸರದಲ್ಲಿ ಸಂಚರಿಸುತ್ತಿದ್ದೆ. ನನ್ನ ಗೆಳೆಯ ತಿಲಾರಿ ಡ್ಯಾಂ ತೀರದಲ್ಲಿ ಕುಳಿತಿದ್ದ ನನಗೆ ಬೇಸರವಾಗಿ ವಿಹರಿಸುತ್ತಿರುವಾಗ ಯುವತಿಯರು ಕಿರಿಚಾಡುವ ಶಬ್ಧ ಕೇಳಿತು ನೋಡುವಷ್ಟರಲ್ಲಿ ಮೂರು ಜನ ಹುಡುಗಿಯರು ನೀರಿನಲ್ಲಿ ಮುಳುಗುವದನ್ನು ಕಂಡು ನನಗೆ ಗಾಭರಿಯಾಯಿತು ಅಲ್ಲಿ ನಾನೊಬ್ಬನೆ ಇದ್ದೆ, ಧೈರ್ಯ ಮಾಡಿ ನೀರಿಗೆ ಜಿಗಿದು ಇಬ್ಬರು ಯುವತಿಯರನ್ನು ದಡ ಸೇರಿಸಿದೆ. ಆದರೆ ಇನ್ನೊಬ್ಬಳನ್ನು ಬದುಕಿಸಲು ಸಾಧ್ಯವಾಗಲಿಲ್ಲಾ ಎಂದು ಮನೋಜ ಧಾಮನೆಕರ ಘಟನೆಯ ವಿವರವನ್ನು ಲಕ್ಷ್ಮೀ ಹೆಬ್ಬಾಳಕರವರ ಎದುರು ಹೇಳಿಕೊಂಡ.
ಈ ಸಂದರ್ಭದಲ್ಲಿ ಸಿಸಿ ಪಾಟೀಲ ಯುವರಾಜ ಕದಮ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.
