Breaking News

ಉತ್ತರ ಕರ್ನಾಟಕದ ಅಭಿವೃದ್ಧಿ ಆಗದಿದ್ದರೆ ಪ್ರತ್ಯೇಕತೆ ಅನಿವಾರ್ಯ- ನಾಗನೂರು ಶ್ರೀಗಳು

ಬೆಳಗಾವಿ-ಕರ್ನಾಟಕ ಏಕೀಕರಣ ಸಾಧಿಸಿದ ಸಮಿತಿ ಉತ್ತರ ಕರ್ನಾಟಕ‌. ಆದರೆ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಈ ಭಾಗ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಸಮ್ಮಿಶ್ರ ಸರಕಾರದ ಬಜೆಟ್ ನಲ್ಲಿಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಉತ್ತರ ಕರ್ನಾಟಕದ ಕೇಂದ್ರ ಬಿಂದು ಸುವರ್ಣ ವಿಧಾನಸೌಧದಲ್ಲಿ ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡಿ ನಿರಂತರ ಕಾರ್ಯಚಟುವಟಿಕೆ ನಡೆಸಬೇಕು. ಎಂದು ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ ಎಚ್ವರಿಕೆ ನೀಡಿದ್ದಾರೆ

ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಪ್ರತಿ ತಿಂಗಳು ಕೋಟ್ಯಂತರ ರು. ಹಣವನ್ನು ಸೌಧದ ನಿರ್ವಹಣೆಗೆ ವ್ಯಯಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದೊಂದು ದಿನ ಉತ್ತರ ಕರ್ನಾಟಕ‌ ಅಭಿವೃದ್ಧಿ ಮಾಡದಿದ್ದರೆ ಪ್ರತ್ಯೇಕ ರಾಜ್ಯದ ಕೂಗು ಹಾಕುವುದರಲ್ಲಿ ಅನುಮಾನವೆ ಇಲ್ಲ‌. ಉತ್ತರ ಕರ್ನಾಟಕದ ರೈತರ ಹಿತ ದೃಷ್ಟಿಯಿಂದ ಮಹದಾಯಿ ಹೋರಾಟದಕ್ಕೆ ನ್ಯಾಯ ದೊರಕಿಸಿಕೊಡಬೇಕು. ಸರಕಾರ ಈ ವಿಷಯದಲ್ಲಿ‌ ಮೋಸ ಮಾಡುತ್ತಿದೆ ಎಂಬ ಭಾವ ಈ ಭಾಗದ ಜನರದ್ದಾಗುತ್ತದೆ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಮಾಡುವ ಮನೋಭಾವನೆ ಯಾರಲ್ಲು ಇಲ್ಲ. ಆದರೆ ಸರಕಾರದ‌ ನಿರ್ಲಕ್ಷ್ಯದಿಂದ ಅನಿವಾರ್ಯವಾಗಿ ಪ್ರತ್ಯೇಕ ಕೇಳಬೇಕಾಗುತ್ತದೆ ಎಂದರು.

ಉತ್ತರ ಕರ್ನಾಟಕ ಅಭಿವೃದ್ದಿಗಾಗಿ ಜು.31 ಸವರ್ಣ ವಿಧಾನ ಸೌಧದ ಎದುರು ಮಠಾಧೀಶರ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕ ಧರಣಿ‌ ನಡೆಸಲಾಗುವುದು ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

. ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ವಂಚಿತಗೊಂಡಿದೆ ಎಂದು ಕೆಲವರು ಈ ಭಾಗವನ್ನು ಪ್ರತ್ಯೇಕ ರಾಜ್ಯ ಮಾಡುವಂತೆ ಹೋರಾಟ ನಡೆಸುತ್ತಿದ್ದಾರೆ‌. ಆದರೆ ನಾವು ಅಖಂಡ ಕರ್ನಾಟಕದ ಏಳಿಗೆ ಬಯಸುವವರು ಆದರೆ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಬೇಕೆಂಬುದು ಇಂದಿನ ವಿಚಾರವಲ್ಲ ಹಿಂದಿನ ದಿನದಂದಲೂ ಬರುತ್ತಿದೆ. ಸರಕಾರಗಳು ಮಾತ್ರ ಈ ಭಾಗದ ಅನುದಾನ ನೀಡುತ್ತಿಲ್ಲ ಎಂಬ ಕೊರಗು ಈ ಭಾಗದ ಜನರದ್ದಾಗಿದೆ. ಈ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧದಲ್ಲಿ ಎಲ್ಲ ಮಠಾಧೀಶರ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದರು

ಸುದ್ದಿಗೋಷ್ಠಿಯಲ್ಲಿ ಕಾರಂಜಿಮಠದ ಸ್ವಾಮೀಜಿ, ಬಿಜೆಪಿ ಮುಖಂಡ ಅಶೋಕ ಪೂಜಾರಿ, ಕಲ್ಯಾಣರಾವ್ ಮುಚಳಂಬಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Check Also

ಎರಡು ಗ್ರಾಮಗಳಿಗೆ ದೀಪಾವಳಿ ಗೀಫ್ಟ್ ಕೊಟ್ಟ ಸಾಹುಕಾರ್….!!

ತಿಗಡಿ ಮತ್ತು ಅವರಾದಿ ಗ್ರಾಮಗಳಿಗೆ ದಸರಾ ಹಬ್ಬದ ಗಿಫ್ಟ್ ಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಗಡಿ, ಅವರಾದಿಗೆ ಪದವಿ ಪೂರ್ವ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.