ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲಿಂಗಾಯತ ಸಮಾಜದ ಹೆಣ್ಣು ರಾಜಕೀಯವಾಗಿ ಮುಂದೆ ಬರುತ್ತಿದ್ದಾಳೆ ಎಂದು ಬೆಳಗಾವಿ ಪಿ ಎಲ್ ಡಿ ಬ್ಯಾಂಕಿನ ಅದ್ಯಕ್ಷರ ಚುನಾವಣೆ ವಿನಾಕಾರಣ ಮುಂದೂಡಿರುವ ತಹಶೀಲ್ದಾರ ಕ್ರಮ ಖಂಡಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ತಹಶೀಲ್ದಾರ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸಿದ್ದಾರೆ
ಈ ಸಂಧರ್ಭದಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ನಾನು ಲಿಂಗಾಯತ ಸಮಾಜದ ಹೆಣ್ಣು ನನ್ನ ರಾಜಕೀಯ ಬೆಳವಣಿಗೆ ಸಹಿಸಲು ಕೆಲವರಿಂದ ಸಾಧ್ಯವಾಗುತ್ತಿಲ್ಲ ಪಿ ಎಲ್ ಡಿ ಬ್ಯಾಂಕಿನಲ್ಲಿ ನನ್ನ ಬೆಂಬಲಿಗರ ಬಹುಮತ ಇದೆ ಆದರೆ ತಹಶೀಲ್ದಾರರು ವಿನಾಕಾರಣ ಚುನಾವಣೆ ಮುಂದೂಡಿದ್ದು ಕಾರಣ ಹೇಳುವವರೆಗೂ ಅಹೋ ರಾತ್ರಿ ಧರಣಿ ಮುಂದುವರೆಸುವದಾಗಿ ಹೆಬ್ಬಾಳಕರ ಹೇಳಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ