Breaking News
Home / Breaking News / ಮಠಗಳ ಸೇವೆ ಅಮೋಘ – ಲಕ್ಷ್ಮೀ ಹೆಬ್ಬಾಳಕರ

ಮಠಗಳ ಸೇವೆ ಅಮೋಘ – ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ-ಮಠಗಳ ಧಾರ್ಮಿಕ ಶೈಕ್ಷಣಿಕ ,ಸಾಮಾಜಿಕ ಸೇವೆ ಅಮೋಘವಾಗಿದ್ದು ಮಠಗಳು ಇಲ್ಲದೇ ಹೋಗಿದ್ದರೆ ಸಮಾಜ ದಾರಿ ತಪ್ಪಿ ಅನಾಗರಿಕತೆ ತಾಂಡವಾಡುತ್ತಿತ್ತು ಮಠಗಳ ಸೇವೆಯಿಂದ ಸರ್ಕಾರದ ಜವಾಬ್ದಾರಿಯೂ ಕಡಿಮೆಯಾಗಿದೆ
ಪ್ರಸ್ತುತ ಸಮಾಜದಲ್ಲಿ ಬೆಳವಣಿಗೆಯಲ್ಲಿ ಮಕ್ಕಳಲ್ಲಿ ಸಂಸ್ಕಾರದ ಜೊತೆಗೆ ಸಮಾಜ ಸೇವೆ ದೇಶ ಭಕ್ತಿಯನ್ನು ಬಿತ್ತಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು

ಶನಿವಾರ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖೆಯ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಸುವಿಚಾರ ಚಿಂತನ-12 ಬೆಳಗಾವಿ ಹುಕ್ಕೇರಿನ ಹಿರೇಮಠದ ಪ್ಲಾಸ್ಟಿಕ್ ಮುಕ್ತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಭಾರತವನ್ನು ಮನ ಹಾಗೂ ಮನೆಯಿಂದ ಮುಕ್ತ ಮಾಡಬೇಕೆಂದು ಹುಕ್ಕೇರಿ ಹಿರೇಮಠದ ಶ್ರೀಗಳು ಪ್ರಮಾಣ ವಚನ ಬೋಧಿಸಿದ್ದಾರೆ ಇವರ‌‌ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಿದರೆ ಬೆಳಗಾವಿಯಿಂದ‌ ಪ್ಲಾಸ್ಟಿಕ್ ‌ಮುಕ್ತವಾಗಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ದೇಶ, ನಗರ ಹಾಗೂ‌ ಗ್ರಾಮಗಳು ಸ್ವಚ್ಚವಾಗಿರಬೇಕಾದರೆ ಪೌರಕಾರ್ಮಿಕರಿಂದ ಅಂಥವರನ್ನು ಶ್ರೀಮಠದಿಂದ ಸನ್ಮಾನಿಸಿದ್ದು ಸಂತಸದ ಸಂಗತಿ.
ಪೌರಕಾರ್ಮಿಕರು ಸ್ವಚ್ಚ ಇಡದಿದ್ದರೆ ನಗರ ಅಸುಚ್ವದಿಂದ‌ ಕೂಡಿರುತ್ತಿತ್ತು. ಮನುಷ್ಯರು ಅನಾರೋಗ್ಯದಿಂದ ಬಳಲುತ್ತಿದ್ದರು. ಪೌರಕಾರ್ಮಿಕರ ಸೇವೆಯಿಂದ ಎಲ್ಲರೂ ಸುಖಮಯ ಜೀವನ ನಡೆಸುವಂತಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರ ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಪರಿಸರ ರಕ್ಷಣಾ ಕಾರ್ಯದಲ್ಲಿ ಹುಕ್ಕೇರಿ ‌ಶ್ರೀಗಳು ಕೈ‌ಜೊಡಿಸುತ್ತಿದ್ದಾರೆ ಅವರಿಗೆ ಎಲ್ಲರೂ ಸಹಕಾರ ನೀಡಬೇಕು. ಶ್ರೀಗಳ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ಪ್ಲಾಸ್ಟಿಕ್ ಬಳಕೆಯಿಂದ ಜನ, ಜಾನುವಾರುಗಳಿಗೆ ಮಾರಕವಾಗುತ್ತದೆ. ನಮ್ಮ‌ ದೇಹ, ನಮ್ಮ‌‌ ಆರೋಗ್ಯ ನಾಶ ಮಾಡಿಕೊಂಡು ಪರಿಸರ ಹಾನಿಯಾಗುತ್ತಿದೆ. ಅದಕ್ಕೆ ಎಲ್ಲರೂ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸುವ ಕಾರ್ಯ ಮಾಡಬೇಕೆಂದರು.
ಮಾನವಿಯ ಮೌಲ್ಯದ ವಿಷಯದ ಕುರಿತು ಉಪನ್ಯಾಸ ನೀಡಿ‌ ಮಾತನಾಡಿದ ಶ್ರೀ ಮಲಯ ಶಾಂತ ಶಿವಾಚಾರ್ಯ ಸ್ವಾಮೀಜಿ,‌ ಮನುಷ್ಯರಲ್ಲಿ ಇತ್ತಿಚೀನ‌‌ ದಿನಮಾನದಲ್ಲಿ ಮಾನವಿಯ ಮೌಲ್ಯ ಕಳೆದುಕೊಳ್ಳುತ್ತಿದೆ. ಮತ್ತೊಬ್ಬರ ಕಷ್ಟ ಕಂಡು ಕರಗುಂತಾದ ಮನಸ್ಸು ಇರಬೇಕು. ಅದು‌ವೇ ನಿಜವಾದ ಮಾನವೀಯ ಮೌಲ್ಯ ಎಂದರು.
ಪುರಾಣ,‌ಇತಿಹಾಸದಲ್ಲಿ ರಾಕ್ಷಸರು ಯಾವ ಅವತಾರದಲ್ಲಿ ಬರುತ್ತಿದ್ದರೋ‌ ಗೋತ್ತಿಲ್ಲ.‌ಶಿವ ಬೇರೆ ಬೇರೆ ಅವತಾರದಲ್ಲಿ ಅವುಗಳನ್ನು ಸಂಹಾರ ಮಾಡಿದ. ಆದರೆ ಸಾವಿಲ್ಲದ ರಾಕ್ಷಸ ಪ್ಲಾಸ್ಟಿಕ್ ರಾಕ್ಷಸ.
ದೇವರು ಬೇರೆ ಬೇರೆ ಅವತಾರ ಎತ್ತಿ ರಾಕ್ಷಸ ಸಂಹಾರ ಮಾಡಿದ್ದ ಆದರೆ ಪ್ಲಾಸ್ಟಿಕ್ ರಾಕ್ಷಸ ಎಂಬ ಮಹಾಮಾರಿ ರಾಕ್ಷಸಸನ್ನು ತೋಲುಗಿಸಲು ಹುಕ್ಕೇರಿ ‌ಹಿರೇಮಠದ ಶ್ರೀ‌ಗಳು ಅವತಾರ ತಾಳಿದ್ದಾರೆ ಎಂದರು.

ಮನೆಯಲ್ಲಿ‌ ಮಕ್ಕಳಿಗೆ ಮಹಾತ್ಮ ಗಾಂಧಿ, ದ.ರಾ.ಬೇಂದ್ರೆಯಂತಾಗಲಿ ಎಂದೂ ಪೋಷಕರು‌ ಬಯಸುವುದಿಲ್ಲ. ಡಾಕ್ಟರ್, ಎಂಜಿನಿಯರ್ ಆಗಲಿ ಎನ್ನುತ್ತಾರೆ.‌ಆದರೆ ಹಿಂದಿನ‌ ಕಾಲದಲ್ಲಿ ಸಮಾಜ ಸೇವಕನಾಗಲಿ ಮಹಾನ್ ಪುರುಷನಾಗಲಿ ಎನ್ನುತ್ತಿದ್ದರು. ‌ಆದರೆ ಈಗ ಕಾಲ ಬದಲಾಗಿದೆ. ಮಕ್ಕಳಿಗೆ ಕಾಲೇಜು ಕಲಿಸುವುದು ಲಕ್ಷ ಲಕ್ಷ ಸಂಪಾದನೆ ಮಾಡಲು ಎಂದು ಕಳವಳ ವ್ಯಕ್ತಪಡಿಸಿದರು.
ಹೊರ‌ ದೇಶದಲ್ಲಿ ತಂದೆ ತಾಯಿಯನ್ನು‌ ಹೋರ ಹಾಕುತ್ತಿದ್ದಾರೆ. ಮಾತೃದೇವೋ‌ಭವ, ಪಿತೃದೇವೋ‌ಭವ ಎನ್ನುತ್ತೇವೆ. ಮುಂದೆ ಮಕ್ಕಳು ಮದುವೆಯಾದ‌ ಮೇಲೆ ಅವರನ್ನು‌ ಹೋರಗೆ ಹಾಕುತ್ತಾರೆ ಅಂದರೆ ಹೋರದೇಶದವರಿಗೂ ಹಾಗೂ ನಮಗೂ ಇರುವ ವ್ಯತ್ಯಾಸ ಏನು ಎಂದರು.
ಜೀವನವನ್ನ ಮೋಜಿನ‌ ಜೀವನ ಅಲ್ಲ. ಪರಮಾತ್ಮ ನೀಡಿರುವ ಅಂಗಡಿ. ಪಾಪನೂ ಇದೆ. ಪುಣ್ಯಾನೂ‌ ಇದೆ ಯಾವುದನ್ನು ಸ್ವೀಕರಿಸಬೇಕು ಎನ್ನುವುದು ಮನುಷ್ಯನೇ ನಿರ್ಧರಿಸಬೇಕು ಎಂದರು.

ಧಾರವಾಡ ಕರ್ನಾಟಕ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಡಾ.ಐ.ಸಿ.ಮುಳಗುಂದ, ಹಿರಿಯ ಸಾಹಿತಿ ಬಿ.ಎಸ್.ಗವಿಮಠ, ವೀಮಲವ್ವ ಜಗಜಂಪಿ, ಡಾ.ಶಿವು ನಂದಗಾವಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಹುಕ್ಕೇರಿ‌ ಹಿರೇಮಠದ ಶ್ರೀ‌ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ, ವೀರಭದ್ರ ಶಿವಯೋಗಿ‌ ಶಿವಾಚಾರ್ಯ ಸ್ವಾಮೀಜಿ ಸಾನಿದ್ಯ ವಹಿಸಿದ್ದರು.
ಹುಕ್ಕೇರಿ‌ ಹಿರೇಮಠದ ಕ್ಯಾಲೆಂಡರ್ ನ್ನು‌ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಬಿಡುಗಡೆಗೊಳಿಸಿದರು.

ಸಂಸದ ಸುರೇಶ ಅಂಗಡಿ, ಶಾಸಕ ಅಭಯ ಪಾಟೀಲ, ಪಾಲಿಕೆ ಆಯುಕ್ತ ಶಶಿಧರ ಕುರೇರ, ಜಿಪಂ ಸಿಇಒ ರಾಮಚಂದ್ರನ್ ಆರ್. ನ್ಯಾಯವಾದಿ ಎ.ಜೆ.ಮುಳವಾಡಮಠ, ಮುಕ್ತಾರ ಪಠಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *