Breaking News

ತುರುಮರಿ ಕಚರಾ ಡಿಪೋ ವಿಸ್ತರಣೆ ವಿರೋಧಿಸಿ ರಸ್ತೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಧರಣಿ

ತುರುಮರಿ ಕಚರಾ ಡಿಪೋ ವಿಸ್ತರಣೆ ವಿರೋಧಿಸಿ ರಸ್ತೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಧರಣಿ

ಬೆಳಗಾವಿ- ಬೆಳಗಾವಿಯ ನಗರದ ತ್ಯಾಜ್ಯ ವಿಲೇವಾರಿ ಕೇಂದ್ರ ತುರುಮರಿಯ ಕಚರಾ ಡಿಪೋ ವಿಸ್ತರಣೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತೀವ್ರ ವಿರೋಧ ವ್ಯೆಕ್ತಪಡಿಸಿದ್ದಾರೆ

ಪಾಲಿಕೆ ಅಧಿಕಾರಿಗಳು ತುರುಮರಿಯ ಕಚರಾ ಡಿಪೋದ ವಿಸ್ತರಣೆಗೆ ಇಂದು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸುವಾಗ ನೂರಾರು ಜನರೊಂದಿಗೆ ರಸ್ತೆಗಿಳಿದ ಶಾಸಕಿ ಹೆಬ್ಬಾಳಕರ ತುರುಮರಿಯಲ್ಲಿ ರಸ್ತೆ ತಡೆ ನಡೆಸಿ ಕಚರಾ ಡಿಪೋ ವಿಸ್ತರಣೆಗೆ ವಿರೋಧ ವ್ಯೆಕ್ತಪಡಿಸಿದರು.

ತುರುಮರಿಯಲ್ಲಿರುವ ಕಚರಾ ಡಿಪೋದಿಂದ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯ ಹಾಳಾಗುತ್ತಿದೆ ಈಗ ಮತ್ತೆ ಈ ಡಿಪೋದ ಕಸದ ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸಲು ಬಿಡೋದಿಲ್ಲ ,ಈಗಿರುವ ಡಿಪೋ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ನಾನು ಶಾಸಕಿ ಆದಾಗಿನಿಂದ ಹೋರಾಟ ಮಾಡುತ್ತಿದ್ದೇನೆ ಈ ಹೋರಾಟ ಮುಂದುವರೆಯುತ್ತದೆ ,ಡಿಪೋ ವಿಸ್ತರಣೆಗೆ ಅವಕಾಶ ನೀಡುವದಿಲ್ಲ ಎಂದು ಹೆಬ್ಬಾಳಕರ ಆಕ್ರೋಶ ವ್ಯೆಕ್ತಪಡಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ ಮತ್ತು ಶಿವಾಜಿ ಸುಂಠಕರ ಅವರು ಅಧಿಕಾರಿಗಳನ್ನು ಭೇಟಿಯಾಗಿ ಕಚರಾ ಡಿಪೋ ವಿಸ್ತರಣೆಗೆ ವಿರೋಧ ವ್ಯೆಕ್ತಪಡಿಸಿದ್ದಾರೆ.

Check Also

ಶಿಕ್ಷಣ ಕ್ಷೇತ್ರಕ್ಕೆ 1500 ಕೋಟಿ ದೇಣಿಗೆ ನೀಡಿದ ಅಜೀಂ ಪ್ರೇಮಜೀ….

“ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ” ಲೋಗೋ ಅನಾವರಣ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿ: ಸಚಿವ ಮಧು ಬಂಗಾರಪ್ಪ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.